
ಆಕಾಶದಲ್ಲಿ ವಿಮಾನ ಹಾರಿಸುತ್ತಿದ್ದ ಪೈಲಟ್ ಪ್ರಾರ್ಥನಾ ಛಾಬ್ರಿಯಾ ಹೀರೋಯಿನ್ ಆಗಿ ಎಂಟ್ರಿ ಕೊಡುತ್ತಿದ್ದಾರೆ. ತಮ್ಮ ನಟನಾ ಕೌಶಲದ ಮೂಲಕ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಅವರು ನಟಿಸಿರುವ ಚೊಚ್ಚಲ ತಮಿಳಿನ ಸಿನಿಮಾ ‘ಚಿರೋ’ (Chiro) ಶೀಘ್ರದಲ್ಲೇ ತೆರೆಗೆ ಬರಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾರ್ಥನಾ ಅವರ ರೋಚಕ ಜರ್ನಿ ಬಗ್ಗೆ ಕೆಲವು ಆಸಕ್ತಿದಾಯಕ ಮಾಹಿತಿ ಇಲ್ಲಿದೆ.
ವಿಮಾನದಲ್ಲಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಗಮ್ಯಸ್ಥಾನ ತಲುಪಿಸುತ್ತಿದ್ದ ಟ್ರೈನರ್ ಗ್ರೇಡ್ ಮಹಿಳಾ ಪೈಲಟ್ ಈಗ ಸಿನಿಮಾ ಪ್ರೇಕ್ಷಕರ ಹೃದಯ ಗೆಲ್ಲಲು ಸಜ್ಜಾಗುತ್ತಿದ್ದಾರೆ. ಇವರೇ ಪ್ರಾರ್ಥನಾ ಛಾಬ್ರಿಯಾ. ಕಾಲಿವುಡ್‌ನ (ತಮಿಳು ಚಿತ್ರರಂಗ) ‘ಚಿರೋ’ ಸಿನಿಮಾದ ಮೂಲಕ ಅವರು ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದ್ದು, ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಈ ವರ್ಷದ ಹಬ್ಬದ ಸಂದರ್ಭದಲ್ಲಿ ಚಿತ್ರವನ್ನು ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ಪೈಲಟ್‌ನಿಂದ ನಟಿಯಾಗಿ ಬದಲಾದ ಅವರ ಜರ್ನಿ ಬಗ್ಗೆ ಸಿನಿರಂಗದಲ್ಲಿ ತೀವ್ರ ಕುತೂಹಲ ಮೂಡಿದೆ.
ಕೇವಲ ಗ್ಲಾಮರ್ ಹಣೆಪಟ್ಟಿ ಹೊತ್ತು ಚಿತ್ರರಂಗಕ್ಕೆ ಬರುವುದಕ್ಕಿಂತ, ನಟನೆಯಲ್ಲಿ ಸೂಕ್ತ ತರಬೇತಿ ಪಡೆದು ಪ್ರಾರ್ಥನಾ ಕ್ಯಾಮೆರಾ ಮುಂದೆ ಬಂದಿದ್ದಾರೆ. ಪ್ರಸಿದ್ಧ ನಟನಾ ಶಾಲೆ ‘ಆದಿಶಕ್ತಿ’ಯಲ್ಲಿ ನಟನೆಯ ತರಬೇತಿ ಪಡೆದಿರುವ ಅವರು, ಯಾವುದೇ ರೀತಿಯ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬಬಲ್ಲೆ ಎಂಬ ಆತ್ಮವಿಶ್ವಾಸದಲ್ಲಿದ್ದಾರೆ. ನಟನೆಯ ಜೊತೆಗೆ ಬೆಲ್ಲಿ ಡ್ಯಾನ್ಸ್ ಮತ್ತು ಪೋಲ್ ಡ್ಯಾನ್ಸ್‌ನಲ್ಲಿಯೂ ಅವರು ಪರಿಣತಿ ಹೊಂದಿದ್ದಾರೆ. ಆದ್ದರಿಂದ ಗ್ಲಾಮರಸ್, ಮಾಡರ್ನ್ ಅಥವಾ ಟ್ರೆಡಿಷನಲ್ ಹೀಗೆ ಯಾವುದೇ ಪಾತ್ರಕ್ಕಾದರೂ ಇವರು ಹೇಳಿಮಾಡಿಸಿದಂತಿದ್ದಾರೆ ಎಂಬುದು ಚಿತ್ರತಂಡದ ಅಭಿಪ್ರಾಯವಾಗಿದೆ.
ಬಹುಮುಖ ಪ್ರತಿಭೆಯಾಗಿರುವ ಪ್ರಾರ್ಥನಾಗೆ ಇಂಗ್ಲಿಷ್, ಹಿಂದಿ, ತಮಿಳು ಮತ್ತು ಸಿಂಧಿ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುವ ಕೌಶಲವಿದೆ. ಏವಿಯೇಷನ್ ಕ್ಷೇತ್ರದಿಂದ ನೇರವಾಗಿ ಚಿತ್ರರಂಗಕ್ಕೆ ಬರುವ ಇತರರಿಗಿಂತ ಇವರ ಹಾದಿಯೇ ವಿಭಿನ್ನವಾಗಿದೆ. ಭಾಷೆಯ ಸಮಸ್ಯೆ ಇಲ್ಲದಿರುವುದರಿಂದ ತಮಿಳು ಸಿನಿಮಾ ಬಳಿಕ ಅವರು ಟಾಲಿವುಡ್ (ತೆಲುಗು) ಹಾಗೂ ಸೌತ್‌ನ ಇತರ ಭಾಷೆಗಳತ್ತಲೂ ಗಮನ ಹರಿಸುವ ಸಾಧ್ಯತೆ ಇದೆ. ಸೂಕ್ತ ಅವಕಾಶಗಳು ಸಿಕ್ಕರೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚಿ, ಸೌತ್ ಚಿತ್ರರಂಗದಲ್ಲಿ ಸ್ಟಾರ್ ಹೀರೋಯಿನ್ ಆಗಿ ನೆಲೆ ನಿಲ್ಲುವ ಪಕ್ಕಾ ಯೋಜನೆಯೊಂದಿಗೆ ಪ್ರಾರ್ಥನಾ ಛಾಬ್ರಿಯಾ ಮುನ್ನುಗ್ಗುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.