ನಾನು ಶ್ರೀರಾಮಚಂದ್ರ, ನನ್ನ ಹುಡುಗಿ ಹೀಗಿರಬೇಕು: ಕನಸಿನ ಕನ್ಯೆ ಕುರಿತು ಗೌರಿ ಪುತ್ರ ಹೀರೋ ರಿತ್ವಿಕ್‌ ಓಪನ್​ ಟಾಕ್​

Published : Nov 24, 2026, 07:44 PM IST
Rithvik Krupaka

ಸಾರಾಂಶ

ಜೀ ಕನ್ನಡದ ಹೊಸ ಧಾರಾವಾಹಿ 'ಗೌರಿ ಪುತ್ರ'ದಲ್ಲಿ ನಾಯಕನಾಗಿ ನಟಿಸುತ್ತಿರುವ ರಿತ್ವಿಕ್ ಕೃಪಾಕರ್ ತಮ್ಮ ಕನಸಿನ ಕನ್ಯೆಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ತಮಗೆ ಎಂಥ ಪತ್ನಿ ಬೇಕು ಹಾಗೂ ಅವರ ನಿಜ ಜೀವನದ ಕುರಿತಾದ ಆಸಕ್ತಿದಾಯಕ ಮಾಹಿತಿ ಇಲ್ಲಿದೆ.

ಜೀ ಕನ್ನಡದಲ್ಲಿ ಇದೇ 16ರಿಂದ ಗೌರಿ ಪುತ್ರ ಸೀರಿಯಲ್‌ ಆರಂಭವಾಗಿದೆ. ಇದರಲ್ಲಿ ನಾಯಕ ಕಾರ್ತಿಕ್‌ ಆಗಿ ನಟಿಸುತ್ತಿರುವುದು ನಟ ರಿತ್ವಿಕ್‌ ಕೃಪಾಕರ. 'ರಾಮಾಚಾರಿ' ಧಾರಾವಾಹಿಯ ಮುಗ್ಧ ಪಾತ್ರದ ನಂತರ, 'ಗೌರಿ ಪುತ್ರ'ದಲ್ಲಿ ರಿತ್ವಿಕ್ ಹೊಸ ಲುಕ್ ಮತ್ತು ಮಾಸ್ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಗೆ ನಾಯಕಿಯಾಗಿ ನಟಿಸುತ್ತಿರುವವರು ಕಾವ್ಯ ಅರ್ಥಾತ್‌ ಮಹತಿ ಭಟ್‌. ಅಮ್ಮ ಗೌರಿಯಾಗಿ ಅನು ಪ್ರಭಾಕರ್‌ ನಟಿಸುತ್ತಿದ್ದಾರೆ. ತನ್ನ ತಾಯಿ ಗೌರಿಯ ತವರು ಮನೆಯನ್ನು ಮರಳಿ ಪಡೆದು, ಆಕೆಯ ಆಸೆಯನ್ನು ಈಡೇರಿಸಲು ಕಾರ್ತಿಕ್ ಎದುರಿಸುವ ಸವಾಲುಗಳ ಸುತ್ತ ಕಥೆ ಸಾಗುತ್ತದೆ.

ರಿಯಲ್‌ ಲೈಫ್‌ನಲ್ಲಿಯೂ ಬ್ಯಾಚುಲರ್‌ ಆಗಿರೋ ನಟ ರಿತ್ವಿಕ್‌ (Rithvik Krupaka) ತಾನು ನಿಜ ಜೀವನದಲ್ಲಿ ಶ್ರೀರಾಮಚಂದ್ರ ಎನ್ನುತ್ತಲೇ ತಮಗೆ ಎಂಥ ಹುಡುಗಿ ಪತ್ನಿಯಾಗಿ ಬರಬೇಕು ಎನ್ನುವ ಬಗ್ಗೆ ಹೇಳಿದ್ದಾರೆ. ಕನಸಿನ ಕನ್ಯೆಯ ಬಗ್ಗೆ ಬಾಸ್‌ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ವಿಷಯವನ್ನು ರಿವೀಲ್‌ ಮಾಡಿದ್ದಾರೆ.

ನಾನು ಪಕ್ಕಾ ರಾಮ

ಹುಡುಗಿಯರ ವಿಷಯದಲ್ಲಿ ನಾನು ಪಕ್ಕಾ ರಾಮ. ಇಲ್ಲಿಯವರೆಗೆ ಹುಡುಗಿಗಾಗಿ ಹುಡುಕಾಟ ನಡೆಸಿಲ್ಲ. ಸದ್ಯ ಕೆಲಸಕ್ಕಾಗಿ ಹುಡುಕಾಟದಲ್ಲಿ ಇದ್ದೇನೆ ಇಷ್ಟೇ. ಟೈಮ್‌ ಬಂದಾಗ ಹುಡುಗಿಯನ್ನು ನೋಡ್ತೇನೆ ಎನ್ನುತ್ತಲೇ ಮದುವೆಯಾಗುವ ಹುಡುಗಿ ಹೇಗೆ ಇರಬೇಕು ಎಂದು ತಿಳಿಸಿದ್ದಾರೆ. ಆಕೆ ಮೊದಲನೆಯದಾಗಿ ಹುಡುಗಿ ಆಗಿರಬೇಕು. ಒಳ್ಳೆಯ ವ್ಯಕ್ತಿ ಆಗಿದ್ದು, ನನ್ನ ನಟನಾ ಕ್ಷೇತ್ರವನ್ನು ಅರ್ಥ ಮಾಡಿಕೊಳ್ಳಬೇಕು. ಆಕೆ ನನ್ನನ್ನು ಎಷ್ಟು ಪ್ರೀತಿಸುತ್ತಾಳೋ ಅಷ್ಟೇ ನನ್ನ ಅಪ್ಪ-ಅಮ್ಮನನ್ನೂ ಪ್ರೀತಿಸಬೇಕು, ಇದಕ್ಕಿಂತ ಇನ್ನು ಹೆಚ್ಚಿಗೆ ಏನು ಬೇಕು ಹೇಳಿ ಎಂದಿದ್ದಾರೆ.

ನಟ ರಿತ್ವಿಕ್‌ ಕುರಿತು

ಇನ್ನು ನಟ ರಿತ್ವಿಕ್ ಕೃಪಾಕರ್ ಕುರಿತು ಹೇಳುವುದಾದರೆ, ಇವರು ರಂಗಭೂಮಿ ನಟರಾಗಿದ್ದು, ಮೂಲತಃ ಮೈಸೂರಿನವರು. 'ರಾಮಾಚಾರಿ' ಧಾರಾವಾಹಿಯ ನಾಯಕನ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದ್ದಾರೆ. ತಂದೆ ಪ್ರವೀಣ್ ಕೃಪಾಕರ್ ಮತ್ತು ತಾಯಿ ಹೇಮಾಮಾಲಿನಿ . ಮೈಸೂರಿನ ಕೌಟಿಲ್ಯ ವಿದ್ಯಾಲಯ, ವಿದ್ಯಾಶ್ರಮ, ಯುವರಾಜ ಕಾಲೇಜು ಹಾಗೂ ಇಗ್ನೋ (IGNOU) ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿದ್ದಾರೆ. ನಟನಾ ರಂಗಶಾಲೆಯಲ್ಲಿ ಡಿಪ್ಲೊಮಾ ಪಡೆದಿದ್ದು, ಮಂಡ್ಯ ರಮೇಶ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಹೊಂದಿದ್ದಾರೆ. ರಂಗಭೂಮಿ ನಟನೆಯ ಜೊತೆಗೆ ಸಮರ ಕಲೆಗಳು, ಸಂಗೀತ, ನೃತ್ಯದಲ್ಲಿ ಆಸಕ್ತಿ ಹೊಂದಿದ್ದು, 'ರಾಯಲ್ ಮುಸ್ತಾಂಗ್ ಪ್ರೊಡಕ್ಷನ್ಸ್' (Royal Mustang Productions) ಎಂಬ ನಿರ್ಮಾಣ ಸಂಸ್ಥೆಯನ್ನೂ ನಡೆಸುತ್ತಿದ್ದಾರೆ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಪ್ರೇಮದ ಊರಲಿ' ನಂಟು.. ಲಲಿತಾ ಬೆಂಗಳೂರಿಗೆ, ಜೈ ಎಲ್ಲಿರೋದು? ಬದಲಾಗುತ್ತಾ ಬದುಕು, ಶುರು ಯಾವತ್ತು?
ಸಿನಿಮಾ ರಿಲೀಸ್‌ಗೂ ಮುನ್ನವೇ ರಾಮಾಯಣ ದಾಖಲೆ ಮುರಿದ ಅವೆಂಜರ್ಸ್:ಡೂಮ್ಸ್‌ಡೇ! ಅತಿಹೆಚ್ಚು ಬೆಲೆಗೆ 4DX ಕೆಟ್!