ಕಷ್ಟದ ದಿನಗಳೇ? ಶಾರುಖ್ ಖಾನ್ ಅನುಭವದ ಮಾತುಗಳು ನಿಮ್ಮನ್ನು ಸಂತೈಸಬಹುದು...

By Web DeskFirst Published Jul 20, 2019, 1:49 PM IST
Highlights

ಶಾರುಖ್ ಖಾನ್ ಲವರ್ ಬಾಯಂತೆ ಕಾಣಬಹುದು. ಆದರೆ, ಅವನೊಳಗೊಬ್ಬ ಸಂತನಿದ್ದಾನೆ. ತತ್ವಜ್ಞಾನಿಯಿದ್ದಾನೆ. ಜೀವನದ ಅನುಭವದ ಕುಲುಮೆಯಲ್ಲಿ ಬೆಂದವರೆಲ್ಲರೂ ಸಂತರೇ. ಶಾರುಖ್‌ನ ಈ ಅನುಭವ ಪಾಠಗಳನ್ನೊಮ್ಮೆ ಓದಿ. ಕಡೆಯಲ್ಲಿ ನಿಮ್ಮ ಮೂಡ್ ಚೆನ್ನಾಗಾಗದಿದ್ದರೆ ಕೇಳಿ.

ಕಚೇರಿಯಲ್ಲಿ ಸಮಸ್ಯೆಯೇ? ಸಂಬಂಧದಿಂದ ಹೊರಬಂದು ತಪ್ಪು ಮಾಡಿದಿರೋ, ಸರಿಯೋ ತಿಳಿಯುತ್ತಿಲ್ಲವೇ? ಅಪ್ಪಅಮ್ಮನ ವಿರೋಧ ಕಟ್ಟಿಕೊಂಡು ಪ್ಯಾಶನ್ ಎಂದು ನಿಮ್ಮಿಷ್ಟದ ಹವ್ಯಾಸವನ್ನೇ ಉದ್ಯೋಗವಾಗಿಸಿಕೊಳ್ಳಲು ಹೊರಟಿದ್ದೀರಾ? ಕಠಿಣ ದಿನಗಳನ್ನು ಎದುರಿಸುತ್ತಿರುವವರು ಶಾರುಖ್ ಬಾಬಾನ ಮೊರೆ ಹೋದರೆ ಅವರಿಗೊಂದು ಸಾಂತ್ವಾನವೋ, ಪ್ರೇರಣೆಯೋ ಸಿಗಬಹುದು. 

ಏನು ಸಾಮಾನ್ಯವಾಗಿ ಫ್ಲರ್ಟ್ ಮಾಡುತ್ತಾ ಲವರ್ ಬಾಯ್ ಆಗಿ ಕಾಣಿಸಿಕೊಳ್ಳುವ ಬಾಲಿವುಡ್ ಬಾದ್‌ಶಾಹ್ ಶಾರುಖ್ ಆಹ್? ಎಂದು ಹುಬ್ಬೇರಿಸಬೇಡಿ. ಖಂಡಿತಾ ಅದೇ ಶಾರುಖ್. ಬಹಳ ಒಳ್ಳೆ ಮಾತುಗಾರ. ಆತ ಕೆಲವೊಮ್ಮೆ ಟ್ವಿಟ್ಟರ್‌ನಲ್ಲಿ ತತ್ವಜ್ಞಾನಿಯಂಥ ಮಾತುಗಳನ್ನು ಹಾಕುವಾಗ, ಸಂದರ್ಶನಗಳಲ್ಲಿ ಮಾತನಾಡುವಾಗ, ಟೆಡ್ ಟಾಕ್‌ನಲ್ಲಿ ಭಾಗವಹಿಸಿದಾಗ 'ಡಿಯರ್ ಜಿಂದಗಿ'ಯ ಸೈಕಾಲಜಿಸ್ಟ್‌ನ ಪಾತ್ರವೇ ಆತನ ನಿಜವ್ಯಕ್ತಿತ್ವವೇನೋ ಎನಿಸುತ್ತದೆ. ತನ್ನ ಜೀವನ ಕಲಿಸಿದ ಪಾಠಗಳನ್ನೇ ಆತ ಅಭಿಮಾನಿಗಳಿಗೆ ಹೇಳುತ್ತಾನೆ. ಆತನ ಅನುಭವದ ಕುಲುಮೆಯಿಂದ ಬಂದ ಪಾಠಗಳಲ್ಲಿ ಸೋಲನ್ನು ಎದುರಿಸುವುದು ಹೇಗೆ ಎಂದೋ, ಜಗತ್ತೇ ಎದುರು ನಿಂತರೂ ನಿಮ್ಮ ಮೇಲೆ ನೀವು ನಂಬಿಕೆ ಇಡಬೇಕು ಎಂದೋ ಹೆಚ್ಚಾಗಿ ಇರುತ್ತದೆ. ಆತನ ಪಾಸಿಟಿವ್ ಆ್ಯಟಿಟೂಡ್ ಯಾವಾಗಲೂ ಕಷ್ಟಗಳೇನು ದೊಡ್ಡ ಸಂಗತಿಯೇ ಅಲ್ಲವೆನ್ನುವಂತೆ ಮಾಡುತ್ತವೆ. ಶಾರುಖ್ ಹೇಳಿದ  ಕೆಲ ಅತ್ಯುತ್ತಮ ಜೀವನಪಾಠಗಳು ಇಲ್ಲಿವೆ ಓದಿ.

ಶಾರುಖ್ ಖಾನ್ ಮೊದಲ ಕಾರಿನ ರಹಸ್ಯ - ಕಿಂಗ್ ಖಾನ್ ಬಳಿ ಇತ್ತು ಚೀಪ್ ಕಾರು!

- ಸಮಸ್ಯೆಗಳಿಗಿಂತಾ ಉತ್ತಮವಾಗಿ ನಮ್ಮನ್ನು ಚೆನ್ನಾಗಿ ಜೀವಿಸಲು ಪ್ರೇರೇಪಿಸುವುದು ಬೇರೇನೂ ಇಲ್ಲ. ಹಾಗಾದರೆ ನಾವೇಕೆ ಸಮಸ್ಯೆಗಳನ್ನು ಒಪ್ಪಿಕೊಂಡು, ಎದುರಿಸಬಾರದು?

- ಜೀವನದಲ್ಲಿ ಏನನ್ನೇ ಮಾಡಿ, ಅದೇ ನಿಮ್ಮ ಮೊದಲ ಹಾಗೂ ಕೊನೆಯ ಛಾನ್ಸ್ ಎಂದುಕೊಂಡರೆ ಹೇಗೆ ಮಾಡುವಿರೋ ಹಾಗೆ ಮಾಡಿ. 

- ನೀವಿನ್ನೂ ಯಂಗ್ ಆಗಿದ್ದರೆ, ನಿಮ್ಮ ಹೃದಯ ಬಯಸ್ಸಿದ್ದನ್ನು ಮಾಡಲು ಪ್ರಯತ್ನಿಸಿ. ಆಗ ನಿಮಗೆ ನಿಮ್ಮ ತಂದೆತಾಯಿಯಷ್ಟು ವಯಸ್ಸಾದಾಗ ಅಯ್ಯೋ ನಾನು ನನ್ನಿಷ್ಟವಾದುದನ್ನು ಮಾಡಲಿಲ್ಲವಲ್ಲ, ಮಾಡಿದ್ದರೆ ಚೆನ್ನಾಗಿರುತ್ತಿತ್ತೇನೋ ಎಂಬ ಪಶ್ಚಾತ್ತಾಪಕ್ಕೆ ಅವಕಾಶವಿರದು.

- ನಿಮ್ಮೊಳಗಿರುವ ಮಗುವಿನ ಮುಗ್ಧತೆ ಹಾಗೂ ಹಾಸ್ಯಪ್ರಜ್ಞೆಯನ್ನು ಎಂದಿಗೂ ಕಳೆದುಕೊಳ್ಳಬೇಡಿ. ಇದು ನಿಮಗೆ ನಕಾರಾತ್ಮಕ ಸಲಹೆಗಳನ್ನು ನೀಡುವ ಜನರನ್ನು ಲೈಟಾಗಿ ತೆಗೆದುಕೊಂಡು ನಿಮ್ಮ ಪಾಡಿಗೆ ನೀವು ಮುಂದುವರಿಯಲು ಸಹಾಯಕ.

- ಕೆಲವೊಮ್ಮೆ ಬದುಕಿನಲ್ಲಿ ನೀವು ಏಕಾಂಗಿ ಎನಿಸುವಂಥ ಸಮಯ ಬರಬಹುದು. ಅದೇ ಸಮಯದಲ್ಲಿ ನಿಮ್ಮ ಸೃಜಯಶೀಲತೆ ಬೆಸ್ಟ್ ಫ್ರೆಂಡ್ ಆಗಿ ನಿಮ್ಮ ಕೈ ಹಿಡಿಯುವುದು.

ಶಾರೂಕ್ ಮಗಳಿಗೆ ಈ ನಟನೊಂದಿಗೆ ಡೇಟಿಂಗ್ ಮಾಡ್ಬೇಕಂತೆ!

- ಜೀವನದ ಒಂದು ಸತ್ಯವೆಂದರೆ 2 ಕೋಟಿ ಜನರೆಲ್ಲರೂ ಇಷ್ಟ ಪಡುವಂತೆ ನೀವೇನನ್ನೂ ಮಾಡಲಾರಿರಿ. ಜನರ ಇಷ್ಟಕಷ್ಟಗಳಿಗೆ ಅತಿಯಾಗಿ ಬೆಲೆ ನೀಡಿದರೆ ನೀವು ಖಂಡಿತಾ ಏನನ್ನು ಸಾಧಿಸುವುದೂ ಸಾಧ್ಯವಿಲ್ಲ.

- ನೀವು ರೆಕ್ಕೆ ಬಿಚ್ಚಿ ಹುಚ್ಚರಂತೆ ಕ್ಷಣವೂ ನಿಲ್ಲದೆ ಪಟಪಟನೆ ಬಡಿಯದೆಯೇ ನಿಮ್ಮ ಕನಸುಗಳು ಹಾರುತ್ತವೆ ಎಂದು ಅಂದುಕೊಳ್ಳುವ ತಪ್ಪು ಮಾಡುವುದು ಖಂಡಿತಾ ದೊಡ್ಡ ತಮಾಷೆ.

- ಕಳೆದುಕೊಂಡ ಕೂಡಲೇ ನೀವು ಸೋಲುವುದಿಲ್ಲ. ಹಾಗೆ ಕಳೆದುಕೊಂಡಿದ್ದನ್ನು ನಿಭಾಯಿಸಲು ಸಾಧ್ಯವಾಗದಿದ್ದಾಗ ನೀವು ಖಂಡಿತಾ ಸೋಲುತ್ತೀರಿ.

- ಕೆಲವೊಮ್ಮೆ ಮುಂದೆ ಹೋಗಬೇಕೆಂದರೆ ಕೆಲ ಹೆಜ್ಜೆಗಳನ್ನು ಹಿಂದಿಡಬೇಕಾಗುತ್ತದೆ. 

- ಅಲ್ಪಕಾಲದಲ್ಲಿ ನೋವಾಗಿ, ಬಹುಸಮಯದ ಬಳಿಕ ಆ ಶ್ರಮ ಸಾರ್ಥಕವೆನಿಸುತ್ತದೆ ಎಂದರೆ ಖಂಡಿತಾ ಅಂಥದರಲ್ಲಿ ಶ್ರಮ ಹಾಕಿ.

- ಬಡವರಾಗಿ ಹಸಿದುಕೊಂಡಿದ್ದರೂ ಪರವಾಗಿಲ್ಲ, ಸೃಜನಶೀಲರಾಗಿರುವುದೇ ಬೆಸ್ಟ್ ಎನ್ನುವ ಜನರ ಮಾತುಗಳನ್ನು ಕೇಳಬೇಡಿ. ಮೊದಲು ನೀವು ಬದುಕುವುದನ್ನು ನೋಡಿಕೊಳ್ಳಿ. ನಿಮ್ಮ ಸೃಜನತೆ ಇಲ್ಲದ ಕೆಲಸದಿಂದ ಹಣ ಗಳಿಸಿ. ಬಾತ್‌ರೂಂಗೆ ಹೋಗಿ ಅತ್ತರೂ ಪರವಾಗಿಲ್ಲ. ಆದರೆ, ಯಾವಾಗ ಒಂದು ಉತ್ತಮ ಪೊಸಿಶನ್‌ಗೆ ಹೋಗುತ್ತೀರೋ, ಆಗ ನಿಮ್ಮ ಇಷ್ಟದ ಕ್ರಿಯೇಟಿವ್ ಕೆಲಸಗಳನ್ನು ಮಾಡಿ. 

click me!