ಬಕ್ರೀದ್ ದಿನ ಕುರಿ ‘ಸಲ್ಮಾನ್ ಖಾನ್‌’ ಗೆ ಫುಲ್ ಡಿಮ್ಯಾಂಡ್!

Published : Aug 12, 2019, 02:26 PM IST
ಬಕ್ರೀದ್ ದಿನ ಕುರಿ ‘ಸಲ್ಮಾನ್ ಖಾನ್‌’ ಗೆ ಫುಲ್ ಡಿಮ್ಯಾಂಡ್!

ಸಾರಾಂಶ

ಇಂದು ಬಕ್ರೀದ್ ಸಂಭ್ರಮ | ಸಲ್ಮಾನ್ ಖಾನ್ ಗೆ ಭರ್ಜರಿ ಬೇಡಿಕೆ | 8 ಲಕ್ಷಕ್ಕೆ ಮಾರಾಟವಾದ ಸಲ್ಲು ಭಾಯ್ | 

ಲಕ್ನೋ (ಆ. 12): ಇಂದು ಬಕ್ರೀದ್ ಹಬ್ಬದ ಸಂಭ್ರಮ. ಇಂದು ಕುರಿಗಳಿಗೆ ಎಲ್ಲಿಲ್ಲದ ಬೇಡಿಕೆ. ಬಕ್ರೀದ್ ಹಬ್ಬದಂದು ಸಲ್ಮಾನ್ ಖಾನ್ ಮಾರಾಟವಾಗಿದ್ದಾರೆ. ಅದೂ ಕಡಿಮೆ ಬೆಲೆಗೇನಲ್ಲ. ಒಳ್ಳೆಯ ಬೆಲೆಗೆ ಸೇಲ್ ಆಗಿದ್ದಾರೆ. 

ಉತ್ತರ ಕರ್ನಾಟಕ ಪ್ರವಾಹಕ್ಕೆ ಸನ್ನಿ ಲಿಯೋನ್‌ರಿಂದ 2 ಕೋಟಿ, ಸತ್ಯವೇ?

ಅರೇ! ಸಲ್ಮಾನ್ ಖಾನ್ ಮಾರಾಟವಾದ್ರಾ ಎಂದು ಅಚ್ಚರಿಪಡಬೇಡಿ! ಸಲ್ಮಾನ್ ಖಾನ್ ಎಂಬ ಹೆಸರಿನ ಕುರಿ 8 ಲಕ್ಷಕ್ಕೆ ಮಾರಾಟವಾಗಿದೆ. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಕ್ಷೇತ್ರ ಗೋರಖ್ ಪುರದಲ್ಲಿ ಈ ಘಟನೆ ನಡೆದಿದೆ. ಸಲ್ಮಾನ್ ಖಾನ್ ಹೆಸರಿನ ಕುರಿಯ ಮೈಮೇಲೆ ಅರೇಬಿಕ್ ಭಾಷೆಯಲ್ಲಿ ‘ಅಲ್ಲಾಹ್’ ಎಂದು ಬರೆಯಲಾಗಿತ್ತು. ಕುರಿ ಕೂಡಾ ನೋಡುವುದಕ್ಕೆ ಸಲ್ಮಾನ್ ಖಾನ್ ರೀತಿ ಹ್ಯಾಂಡ್ ಸಮ್ ಆಗಿದೆ ಎನ್ನುತ್ತಾರೆ ಮಾಲಿಕ. ಇದು 95 -100 ಕೆಜಿ ಭಾರವಿತ್ತು ಎನ್ನಲಾಗಿದೆ. 

 

‘ನಾವು ಸಲ್ಮಾನ್ ಖಾನ್ ನನ್ನು ನಮ್ಮ ಕುಟುಂಬದವನಂತೆಯೇ ನೋಡಿಕೊಳ್ಳುತ್ತಿದ್ದೆವು. ಅವನು ಬೆಡ್ ಮೇಲೆ ಮಲಗುತ್ತಿದ್ದ. ನಮ್ಮ ರೀತಿಯೇ ತಿನ್ನುತ್ತಿದ್ದ. ಅಚ್ಚರಿ ಎಂದರೆ ಇವನು ಹುಲ್ಲನ್ನು ತಿನ್ನುತ್ತಿರಲಿಲ್ಲ. ಚಿಪ್ಸ್, ಡ್ರೈಫ್ರೂಟ್ಸ್ ಗಳನ್ನು ತಿನ್ನುತ್ತಿದ್ದ. ನಾವು ದಿನಕ್ಕೆ 700 -800 ರೂ ಗಳನ್ನು ಖರ್ಚು ಮಾಡುತ್ತಿದ್ದೆವು’ ಎಂದಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಚಿರಂಜೀವಿ ಜೊತೆ ನಟಿಸೋದು, ಡ್ಯಾನ್ಸ್ ಮಾಡೋದು ದುಃಸ್ವಪ್ನ: ಪ್ರೀತ್ಸೆ ನಟಿ ಹೇಳಿಕೆ ವೈರಲ್!
ನಾಟ್ಯ ಮಯೂರಿ ಸುಧಾ ಚಂದ್ರನ್ ಜೊತೆ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದ 'ಲಕ್ಷ್ಮೀ ಬಾರಮ್ಮ' ನಟಿ