ಮೋಜು-ಮಸ್ತಿಗೆ ವಯಸ್ಸಿನ ಅಂತರವಿಲ್ಲ ಅನ್ನುವುದಕ್ಕೆ ಸಾಕ್ಷಿ ಈ ಅಜ್ಜಿ. ಯಾಕೆ ಅಂತೀರಾ ಇಲ್ಲಿದೆ ನೋಡಿ
ಯಾವ ಸಿನಿಮಾ ಬಂದ್ರೂ ಮಿಸ್ ಮಾಡೋಲ್ಲ. ಮೊದಲ ದಿನವೇ ಶೋ ನೋಡಿ ಪಡ್ಡೆ ಹುಡುಗರ ಜೊತೆ ಚಿತ್ರಮಂದಿರ ಮುಂದೆಯೇ ಹಾಡಿಗೆ ಸ್ಟೆಪ್ ಹಾಕೋ ಕ್ರೆಜ್ ಈ ಅಜ್ಜಿಗೆ.
ಕುರುಕ್ಷೇತ್ರ ಸಂಭಾವನೆಯನ್ನು ನೆರೆ ಸಂತ್ರಸ್ತರಿಗೆ ನೀಡಿದ ನಿಖಿಲ್ ಕುಮಾರಸ್ವಾಮಿ!
ಕುರುಕ್ಷೇತ್ರ ಚಿತ್ರ ಬಿಡುಗಡೆಗೆ ಬೆಂಗಳೂರಿನ ಕೆ.ಜೆ.ರಸ್ತೆಯಲ್ಲಿರುವ ನರ್ತಕಿ ಮುಖ್ಯ ಚಿತ್ರಮಂದಿರವಾಗಿದ್ದು ಮೊದಲ ಶೋಗೆ ಅಭಿಮಾನಿಗಳು ಕಿಕ್ಕಿರದು ತುಂಬಿದ್ದರು. ಮೊದಲ ಶೋ ಪ್ರದರ್ಶನದ ನಂತರ ಚಿತ್ರಮಂದಿರದ ಎದುರು ಪಡ್ಡೆ ಹುಡುಗರ ಜೊತೆ ಸೇರಿ ಅಜ್ಜಿಯೊಬ್ಬರು ಕುಣಿದಿರುವುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕನ್ನಡ ಚಿತ್ರರಂಗಕ್ಕೆ ಹೆಮ್ಮೆ ತಂದು ಕೊಡುವಂತಹ ಬಿಗ್ ಬಜೆಟ್ ಸಿನಿಮಾ ಕುರುಕ್ಷೇತ್ರ ರಾಜ್ಯದಾದ್ಯಂತ ಯಶಸ್ವಿ ಪ್ರದರ್ಶ ಕಾಣುತ್ತಿದ್ದು ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಮುಟ್ಟುವುದರಲ್ಲಿ ಅನುಮಾನವೇ ಇಲ್ಲ ಎನ್ನಲಾಗುತ್ತಿದೆ.