Dharwad: ಪದ್ಮಾ ಚಿತ್ರಮಂದಿರದಲ್ಲಿ ಶುಕ್ರವಾರ ಗಂಧದ ಗುಡಿ ಪ್ರದರ್ಶನ, ಅಪ್ಪು ಭಾವಚಿತ್ರ ಮೆರವಣಿಗೆ

By Govindaraj S  |  First Published Oct 27, 2022, 7:40 PM IST

ಪವರ್ ಸ್ಟಾರ್ ಡಾ.ಪುನೀತ್‌ ರಾಜ್‌ಕುಮಾರ ಅವರ ಕೊನೆಯ ಚಿತ್ರ ಗಂಧದ ಗುಡಿ ಅ. 28ರಂದು ತೆರೆ ಕಾಣಲಿದ್ದು, ಧಾರವಾಡದಲ್ಲಿ ಪುನೀತ್‌ ಅಭಿಮಾನಿಗಳು ಚಿತ್ರವನ್ನು ವಿಶೇಷವಾಗಿ ಸ್ವಾಗತಿಸಲು ಸಜ್ಜಾಗಿದ್ದಾರೆ.


ಧಾರವಾಡ (ಅ.27): ಪವರ್ ಸ್ಟಾರ್ ಡಾ.ಪುನೀತ್‌ ರಾಜ್‌ಕುಮಾರ ಅವರ ಕೊನೆಯ ಚಿತ್ರ ಗಂಧದ ಗುಡಿ ಅ. 28ರಂದು ತೆರೆ ಕಾಣಲಿದ್ದು, ಧಾರವಾಡದಲ್ಲಿ ಪುನೀತ್‌ ಅಭಿಮಾನಿಗಳು ಚಿತ್ರವನ್ನು ವಿಶೇಷವಾಗಿ ಸ್ವಾಗತಿಸಲು ಸಜ್ಜಾಗಿದ್ದಾರೆ. ಇಲ್ಲಿಯ ಪದ್ಮಾ ಚಿತ್ರಮಂದಿರದಲ್ಲಿ ಶುಕ್ರವಾರದಿಂದ ಬೆಳಿಗ್ಗೆ 9 ರಿಂದ ರಾತ್ರಿ 9:30ರವರೆಗೆ ಐದು ಆಟಗಳಲ್ಲಿ ಗಂಧದ ಗುಡಿ ಪ್ರದರ್ಶನ ಕಾಣಲಿದ್ದು ಈಗಾಗಲೇ ಬಹುತೇಕ ಟಿಕೆಟ್‌ಗಳು ಬುಕ್ ಆಗಿವೆ. 

ನಮ್ಮ ಮಾಲೀಕತ್ವದ ಪದ್ಮಾ ಹಾಗೂ ಶ್ರೀನಿವಾಸ ಚಿತ್ರಮಂದಿರದಲ್ಲಿ ರಾಜಕುಮಾರ ಕುಟುಂಬದ ಎಲ್ಲ ಚಿತ್ರಗಳನ್ನು ಪ್ರದರ್ಶನ ಮಾಡಿದ್ದು ಇದೀಗ ಪುನೀತ ಅವರ ಕೊನೆಯ ಚಿತ್ರವನ್ನು ಪ್ರದರ್ಶಿಸಲು ಉತ್ಸುಕರಾಗಿದ್ದೇವೆ. ಬೆಳಿಗ್ಗೆ 9 ರಿಂದ 11:30, 11:30 ರಿಂದ 2, 2ರಿಂದ 4:30, 4:30 ರಿಂದ 7, 7ರಿಂದ 9:30ರವರೆಗೆ ಐದು ಆಟಗಳಲ್ಲಿ ಚಿತ್ರ ನಡೆಯಲಿದೆ ಎಂದು ಚಿತ್ರಮಂದಿರದ ಮಾಲೀಕ ಬಾಬಣ್ಣ ಕುಲಕರ್ಣಿ ಮಾಹಿತಿ ನೀಡಿದರು.

Tap to resize

Latest Videos

Gandhada Gudi ಸಿನಿಮಾ ಬಗ್ಗೆ ಪುನೀತ್ ಪತ್ನಿ ಮಾತು: ಮೊದಲ ಬಾರಿಗೆ ಅಪ್ಪು ಬಗ್ಗೆ ಸಂದರ್ಶನ ನೀಡಿದ ಅಶ್ವಿನಿ

ಮೆರವಣಿಗೆ: ಕರುನಾಡ ರಾಜರತ್ನ ಅಸೋಸಿಯೇಶನ್ ಮತ್ತು ಡಾ. ಮಯೂರ ಮೋರೆ ಅಭಿಮಾನಿಗಳ ಸಂಘದಿಂದ ಶುಕ್ರವಾರ ಧಾರವಾಡದಲ್ಲಿ ಬೃಹತ್ ರ್‍ಯಾಲಿ ಆಯೋಜಿಸಿವೆ. ನಗರದ ಶಿವಾಜಿ ವೃತ್ತದಿಂದ ರೀಗಲ್ ವೃತ್ತ, ಅಂಜುಮನ್ ವೃತ್ತ, ವಿವೇಕಾನಂದ ವೃತ್ತದ ಮೂಲಕ ಪದ್ಮಾ ಚಿತ್ರಮಂದಿರದಲ್ಲಿ ಅಪ್ಪು ಭಾವಚಿತ್ರ ಇರುವ ಮೆರವಣಿಗೆ ಹೊರಡಲಿದೆ. ಬಳಿಕ ಅಪಾರ ಪ್ರಮಾಣದ ಅಭಿಮಾನಿಗಳಿಂದ ಪುನೀತ ರಾಜಕುಮಾರ ಅವರ ಕಟೌಟ್‌ಗೆ ಮಾಲಾರ್ಪಣೆ ಮಾಡಿ, ಸಿಹಿ ವಿತರಣೆ ಮಾಡಲುವುದು ಎಂದು ಡಾ.ಮಯೂರ ಮೋರೆ ಮಾಹಿತಿ ನೀಡಿದರು. ಇದರೊಂದಿಗೆ ಚಿತ್ರಮಂದಿರದ ಆವರಣದಲ್ಲಿ ರಕ್ತದಾನ ಸಹ ಆಯೋಜಿಸಲಾಗಿದೆ ಎಂದರು.

‘ಗಂಧದ ಗುಡಿ’ ಬಿಡುಗಡೆಗೆ ಅದ್ಧೂರಿ ತಯಾರಿ: ಬೀದರ್‌ ನಗರದ ಇಂದಿರಾ ಸಿನೆಮಾಸ್‌ ಸಪ್ನಾ ಮಲ್ಟಿಪ್ಲೆಕ್ಸ್‌ನಲ್ಲಿ ಪವರ್‌ಸ್ಟಾರ್‌ ದಿ.ಪುನೀತರಾಜಕುಮಾರ್‌ ಅವರ ಗಂಧದ ಗುಡಿ ಚಿತ್ರ ವೀಕ್ಷಣೆಗೆ ಜಿಲ್ಲೆಯ ಅಪ್ಪು ಅಭಿಮಾನಿಗಳ ಬಳಗದಿಂದ ಅದ್ಧೂರಿ ಸಿದ್ಧತೆ ನಡೆದಿದ್ದು, ಅರಣ್ಯದಲ್ಲಿನ ಓಡಾಟದ ಚಿತ್ರೀಕರಣ ಇರುವ ಹಿನ್ನೆಲೆಯಲ್ಲಿ ವೀಕ್ಷಕರಿಗೆ ಸಸಿಗಳನ್ನು ವಿತರಣೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಗುರುವಾರ ಸಂಜೆ 6ಕ್ಕೆ ಪ್ರಿಮಿಯರ್‌ ಶೋ ಆಯೋಜಿಸಲಾಗಿತ್ತು. ಇದಕ್ಕೆ ಶೇ. 50ರಷ್ಟು ಟಿಕೆಟ್‌ಗಳು ಬುಕ್‌ ಆಗಿದ್ದರೆ ಶುಕ್ರವಾರ ಬಿಡುಗಡೆಯಾಗುವ ಗಂಧದ ಗುಡಿ ಇಂದಿರಾ ಸಿನೆಮಾಸ್‌ ಸಪ್ನಾ ಮಲ್ಟಿಪ್ಲೆಕ್ಸ್‌ನಲ್ಲಿ ಸದ್ಯಕ್ಕೆ ಮೂರು ಶೋಗಳು ಮೂರು ಪರದೆಗಳಲ್ಲಿ ಪ್ರದರ್ಶನಗೊಳ್ಳಲಿದೆ. 

Puneeth Rajkumar ನಿಧನಕ್ಕೂ ಮುನ್ನ ಮಾಡಿದ್ದ ಟ್ವೀಟ್‌ ಮತ್ತೆ ವೈರಲ್; ಕನಸು ನನಸು ಮಾಡಿದ ಮಡದಿ

ಪ್ರೇಕ್ಷಕರ ಸಂಖ್ಯೆಗನುಗುಣವಾಗಿ ಇದು ಹೆಚ್ಚಳವಾಗಲಿದೆ ಎಂದು ಮಲ್ಟಿಪ್ಲೆಕ್ಸ್‌ ವ್ಯವಸ್ಥಾಪಕರು ತಿಳಿಸಿದ್ದಾರೆ. ಗಂಧದ ಗುಡಿ ಬಿಡುಗಡೆಗೆ ಹಿನ್ನೆಲೆಯಲ್ಲಿ ಅದ್ಧೂರಿಯಾಗಿ ಸಮಾರಂಭ ನಡೆಯಲಿದೆ. ಚಿತ್ರಮಂದಿರವನ್ನು ಅಲಂಕೃತಗೊಳಿಸಲಾಗುತ್ತಿದೆ. ಸುಮಾರು 150 ಸಸಿಗಳನ್ನು ಪ್ರೇಕ್ಷಕರಿಗೆ ವಿತರಣೆ ಮಾಡುವ ಯೋಜನೆಯಿದ್ದು, ರಕ್ತದಾನ ಶಿಬಿರ ಆಯೋಜಿಸುತ್ತಿರುವುದಲ್ಲದೆ ಇಲ್ಲಿನ ಡಾ.ಅಂಬೇಡ್ಕರ್‌ ವೃತ್ತದಿಂದ ಸಪ್ನಾ ಮಲ್ಟಿಪ್ಲೆಕ್ಸ್‌ ಚಿತ್ರ ಮಂದಿರವರೆಗೆ ಮೆರವಣಿಗೆ ಸಹ ನಡೆಸಲಿದ್ದೇವೆ ಎಂದು ಅಪ್ಪು ಅಭಿಮಾನಿಗಳ ಬಳಗದ ಜಿಲ್ಲಾಧ್ಯಕ್ಷ ಶಿವು ಅಪ್ಪು ಬೀದರ್‌ ತಿಳಿಸಿದ್ದಾರೆ.

click me!