
ಅಮೃತಧಾರೆ ಸೀರಿಯಲ್ ಅಪೇಕ್ಷಾ ಉರ್ಫ್ ಅಪ್ಪಿ ಹೆಸ್ರು ಕೇಳಿದ್ರೆ ಸೀರಿಯಲ್ ವೀಕ್ಷಕರಿಗೆ ಮೈಯೆಲ್ಲಾ ಇಷ್ಟುದಿನ ಉರಿಯತ್ತಿತ್ತು ಅಲ್ವಾ? ಭೂಮಿಕಾಳಂಥವಳಿಗೆ ಸ್ವಂತ ತಂಗಿಯಾಗಿದ್ರೂ ವಿಭಿನ್ನ ಕ್ಯಾರೆಕ್ಟರ್ ಈಕೆಯದ್ದು. ಒಂದೇ ಅಮ್ಮನ ಹೊಟ್ಟೆಯಲ್ಲಿ ಹುಟ್ಟಿದ್ದರೂ ಎಲ್ಲವೂ ತದ್ವಿರುದ್ಧ. ಅಲ್ಪನಿಗೆ ಐಶ್ವರ್ಯ ಬಂದ್ರೆ ಮಧ್ಯರಾತ್ರಿಯಲ್ಲಿ ಕೊಡೆ ಹಿಡಿಸಿಕೊಂಡ ಎನ್ನುವ ಗಾದೆ ಮಾತಿದೆ ಈಕೆ ಸಾಕ್ಷಾತ್ ಉದಾಹರಣೆಯಾಗಿದ್ದಳು ಈಕೆ. ಶ್ರೀಮಂತಿಕೆಯಲ್ಲಿ ಮೆರೆಯುತ್ತ ಮಿಡ್ಲ್ಕ್ಲಾಸ್ ಫ್ಯಾಮಿಲಿಯನ್ನೇ ದೂಷಿಸುತ್ತಿದ್ದಳು. ಕೊನೆಗೆ ತನ್ನ ಅಪ್ಪನನ್ನೇ ಬೈದು ಅಕ್ಕನ ಕೈಯಲ್ಲಿ ಕಪಾಳಮೋಕ್ಷನೂ ಮಾಡಿಸಿಕೊಂಡಿದ್ದಳು. ಆದರೆ ಈಗ ಬದಲಾಗಿದ್ದಾಳೆ ಅಪ್ಪಿ. ಇದೇ ಕಾರಣಕ್ಕೆ ಫ್ಯಾನ್ಸ್ ಸಂಖ್ಯೆಯನ್ನೂ ಹೆಚ್ಚಿಸಿಕೊಂಡಿದ್ದಾಳೆ. ಅಂದಹಾಗೆ, ಅಪ್ಪಿ ಪಾತ್ರಕ್ಕೆ ಜೀವ ತುಂಬ್ತಿರೋ ನಟಿ ಹೆಸರು ಅಮೃತಾ ನಾಯಕ್.
ಅಮೃತಾ ನಾಯಕ್ ಒಂದು ಮೊಟ್ಟೆ ಕಥೆ ಸಿನಿಮಾದಲ್ಲಿ ರಾಜ್ ಬಿ. ಶೆಟ್ಟಿಗೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಟೀಚರ್ ಪಾತ್ರ ಮಾಡಿದ್ದಾರೆ. ಅಲ್ಲದೇ ಇವು ಶಿವರಾಜ್‌ಕುಮಾರ್ ಅವರ ಕವಚ ಸಿನಿಮಾದಲ್ಲಿ ತಂಗಿ ಪಾತ್ರ ಮಾಡಿದ್ದಾರೆ. ಅಮೃತಧಾರೆಗೂ ಮೊದಲು ಇವರು ರಾಜಿ ಸೇರಿ ಕೆಲವು ಧಾರಾವಾಹಿಯಲ್ಲಿ ನಟಿಸಿದ್ದಾರೆ. ಅಂದಹಾಗೆ ಈ ಅಪ್ಪಿಗೆ ಶಾಲೆಗೆ ಹೋಗುವ ಸಮಯದಲ್ಲಿಯೇ ಮದ್ವೆಯಾಗಿತ್ತಂತೆ. ಅದಕ್ಕೆ ಕಾರಣ ಏನು ಎಂದು ಇದೇ ಸೀರಿಯಲ್ ಅಪರ್ಣಾ ಕೇಳಿದ್ದಾಳೆ. ಅದಕ್ಕೆ ಅಪ್ಪಿ, ಮದ್ವೆಯಾದ್ರೆ ಮೂರು ದಿನ ರಜೆ ಸಿಗುತ್ತದೆ ಎಂದರು, ಅದ್ಕೇ ಮದ್ವೆಯಾದೆ ಎಂದಾಗ ಅಪರ್ಣಾ ಶಾಕ್ ಆಗಿದ್ದಾಳೆ.
ಅಷ್ಟಕ್ಕೂ ಇದೇನು ಸೀರಿಯಸ್ ಆಗಿ ಮದ್ವೆಯಾಗಿದ್ದಲ್ಲ. ಸೀರಿಯಲ್ ನಾಯಕಿಯರು ತಮ್ಮ ಬಿಡುವಿನ ಸಮಯದಲ್ಲಿ ಹೀಗೆಲ್ಲಾ ರೀಲ್ಸ್ ಮಾಡುತ್ತಲೇ ಇರುತ್ತದೆ. ಅದೇ ರೀಲ್ಸ್ನ ಭಾಗವಾಗಿ ಈ ತಮಾಷೆಯ ವಿಡಿಯೋ ಮಾಡಿದ್ದಾರೆ ಅಮೃತಧಾರೆಯ ನಟಿಯರು. ಚಿಕ್ಕ ವಯಸ್ಸಿನಲ್ಲಿಯೇ ಮದ್ವೆಯಾದ್ರಂತೆ ಯಾಕೆ ಎಂದು ಅಪರ್ಣಾ ಕೇಳಿದಾಗ, ಅಪ್ಪಿ ಮದ್ವೆಯಾದ್ರೆ ಮೂರು ದಿನ ರಜೆ ಸಿಗತ್ತೆ ಎಂದ್ರು, ಅದ್ಕೇ ಆಗಿಬಿಟ್ಟೆ ಎನ್ನುವ ಮೂಲಕ ಚಟಾಕಿ ಹಾರಿಸಿದ್ದಾರೆ. ಇಂಥ ರೀಲ್ಸ್ಗಳನ್ನು ನಟಿಯರೇ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದರು. ಆದರೆ ಇದೀಗ ಜೀ ಕನ್ನಡ ವಾಹಿನಿಯೇ ಅದನ್ನು ಶೇರ್ ಮಾಡಿಕೊಳ್ಳುತ್ತಿದೆ.
ಇನ್ನು ಅಪರ್ಣಾ ಪಾತ್ರಧಾರಿಯ ಹೆಸರು ರಾಯಲ್ ಸ್ವಾತಿ. ಅಂದಹಾಗೆ ಅಪರ್ಣಾ ಪಾತ್ರಧಾರಿಯ ಹೆಸರು ರಾಯಲ್ ಸ್ವಾತಿ. ಇವರ ರಿಯಲ್ ಪತಿಯ ಹೆಸರು ಅನಿಲ್. ಇವರದ್ದು ಲವ್ ಮ್ಯಾರೇಜ್. ತಮ್ಮ ಪಕ್ಕದ ಮನೆಯಲ್ಲಿದ್ದ ಹುಡುಗ ಅನಿಲ್ ಅವರನ್ನೇ ಲವ್ ಮಾಡಿ ಮದುವೆಯಾಗಿದ್ದಾರೆ ಸ್ವಾತಿ. ಇವರಿಬ್ಬರ ಪ್ರೀತಿಗೆ ಸುಮಾರು 24-25 ವರ್ಷಗಳೇ ತುಂಬಿದೆಯಂತೆ. . ಸ್ವಾತಿಯವರನ್ನೇ ಮದುವೆಯಾಗಲು ಅನಿಲ್ ಒದೆ ಕೂಡ ತಿಂದಿದ್ದಾರಂತೆ, ಅಷ್ಟೇ ಅಲ್ಲ ಸ್ವಾತಿ ಮನೆಯಲ್ಲಿ ಫೈಟ್ ಕೂಡ ಮಾಡಿದ್ದಾರಂತೆ. ಈವಾಗಲೂ ಕಾಲೆಳೆಯುವ, ಕೀಟಲೆ ಮಾಡುವ ಕೆಲಸ ಮಾಡೋದು ಬಲು ಪ್ರೀತಿ ತಮಗೆ ಎಂದು ಸ್ವಾತಿ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಅನಿಲ್ ಸಹ ನಟರಾಗಿದ್ದು, ಮೊದಲೇ ನಟನೆಯತ್ತ ಒಲವಿದ್ದ ಅನಿಲ್ ಅವರಿಗೆ ಈ ಕ್ಷೇತ್ರದಲ್ಲಿ ಕಾಲಿಡುವಂತೆ ಮಾಡಿದ್ದೆ ಪತ್ನಿ ಸ್ವಾತಿ. ಇಬ್ಬರು ಜೊತೆಯಾಗಿ ಮೊದಲ ಬಾರಿಗೆ ಸೂಪರ್ ಜೋಡಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅದರಲ್ಲಿ ವಿನ್ನರ್ ಆಗಿದ್ದರು. ಇದಾದ ನಂತರ ಅನಿಲ್ ಕೂಡ ನಟನೆಯಲ್ಲಿ ಬಿಜಿಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.