ವಧುವರರ ಗೋಳು ಹೊಯ್ದುಕೊಳ್ಳುವ ಸ್ನೇಹಿತರು: ಮದುವೆಯ ವಿಡಿಯೋ ವೈರಲ್

By Anusha Kb  |  First Published Jul 13, 2022, 11:28 AM IST

ಮದುವೆ ದಿನದ ಸುಂದರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನಾವು ಸಾಕಷ್ಟು ನೋಡಿದ್ದೇವೆ. ಮದುವೆಯಾಗುವ ಹುಡುಗ ಅಥವಾ ಹುಡುಗಿಯನ್ನು ಗೋಳು ಹೊಯ್ದುಕೊಳ್ಳಲು ಇರುವ ಒಂದು ಅಪೂರ್ವ ಅವಕಾಶ ಅವರ ಮದುವೆ ಎಂಬುದು ಹುಡುಗ ಅಥವಾ ಹುಡುಗಿಯ ಅಕ್ಕ ತಮ್ಮಂದಿರು ಅಣ್ಣ ತಂಗಿಯರು ಹಾಗೂ ಸಂಬಂಧಿಗಳ ಭಾವನೆ.


ಮದುವೆ ದಿನದ ಸುಂದರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನಾವು ಸಾಕಷ್ಟು ನೋಡಿದ್ದೇವೆ. ಮದುವೆಯಾಗುವ ಹುಡುಗ ಅಥವಾ ಹುಡುಗಿಯನ್ನು ಗೋಳು ಹೊಯ್ದುಕೊಳ್ಳಲು ಇರುವ ಒಂದು ಅಪೂರ್ವ ಅವಕಾಶ ಅವರ ಮದುವೆ ಎಂಬುದು ಹುಡುಗ ಅಥವಾ ಹುಡುಗಿಯ ಅಕ್ಕ ತಮ್ಮಂದಿರು ಅಣ್ಣ ತಂಗಿಯರು ಹಾಗೂ ಸಂಬಂಧಿಗಳ ಭಾವನೆ. ಇದೇ ಕಾರಣಕ್ಕೆ ಮದುವೆ ದಿನ ವಧು ವರರನ್ನು ಇತರರು ಇನ್ನಿಲ್ಲದಂತೆ ಗೋಳು ಹೋಯ್ದುಕೊಳ್ಳುತ್ತಾರೆ. ಇಂತಹ ಹಲವು ವಿಡಿಯೋಗಳನ್ನು ಸಾಕಷ್ಟು ನಾವು ನೋಡಿದ್ದೇವೆ. 

ಅದೇ ರೀತಿ ಇಲ್ಲೊಂದು ವಿಡಿಯೋದಲ್ಲಿ ಮದುವೆ ಮಂಟಪದಲ್ಲಿ ಕುಳಿತಿರುವ ಗಂಡು ಹೆಣ್ಣಿಗೆ ಇನ್ನು ಮದುವೆಯಾಗದ ತಮ್ಮದೇ ಅಥವಾ ತಮಗಿಂತ ಎಳೆ ಪ್ರಾಯದ ತರುಣ ತರುಣಿಯರು ಬಂದು ಕಿಚಾಯಿಸುವ ರೀತಿಯಲ್ಲಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದಂತೆ ಮಾಡಿ ಹೋಗುತ್ತಿದ್ದಾರೆ. ಇವರನ್ನು ನೋಡಿ ವಧು ಹುಸಿಗೋಪ ತೋರಿದರೆ ವರ ನಗುತ್ತಾ ಉಕ್ಕಿ ಬರುವ ನಗುವನ್ನು ತಡೆದುಕೊಂಡು ಅವರು ನೀಡಿದ ವಸ್ತುಗಳನ್ನು ಸ್ವೀಕರಿಸುತ್ತಿದ್ದಾನೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

 
 
 
 
 
 
 
 
 
 
 
 
 
 
 

Tap to resize

Latest Videos

A post share by the house of bride style (@thehouseofbride)

 

ಮದುವೆಯ ಇಂತಹದ್ದೇ ಮತ್ತೊಂದು ವಿಡಿಯೋ ಕೂಡ ವೈರಲ್ ಆಗಿದ್ದು, ಇದರಲ್ಲಿ ವಧು ಹಾಗೂ ವರ ತಾವು ಯಾವ ಸಿನಿಮಾ ತಾರೆಯರಿಗೂ ಕಡಿಮೆ ಇಲ್ಲದಂತೆ ಸಖತ್ ಆಗಿ ಡಾನ್ಸ್ ಮಾಡುತ್ತಿದ್ದಾರೆ. ಗೋವಿಂದ್ ಕರೀಷ್ಮಾ ನಟನೆಯ ಕುಮಾರ್ ಸಾನು ಹಾಗೂ ಆಲ್ಕಾ ಯಾಗ್ನಿಕ್ ಹಾಡಿರುವ ಖುದ್ದರ್ ಸಿನಿಮಾದ 'ತುಮ್ಸಾ ಕೋಯಿ ಪ್ಯಾರಾ' ಹಾಡಿಗೆ ಸಖತ್ ಆಗಿ ಸ್ಟೆಪ್‌ ಹಾಕಿದ್ದಾರೆ. ಈ ದಂಪತಿಯ ಡಾನ್ಸ್ ಮೂಲ ಕೊರಿಯೋಗ್ರಾಫಿಗೆ ಸಡ್ಡು ಹೊಡೆಯುವಂತಿದೆ. ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ ಅವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ನವಜೋಡಿಗೆ ಶಾದಿ ಮುಬಾರಕ್ ಅಂತ ವಿಶ್ ಮಾಡಿದ್ದಾರೆ. 

12 ವರ್ಷ ಡೇಟಿಂಗ್: ಇದೀಗ ಸಂಗ್ರಾಮ್ ಸಿಂಗ್ ಜೊತೆ ಸಪ್ತಪದಿ ತುಳಿದ ಪಾಯಲ್ ರೋಹಟಗಿ

ಇವರ ಡಾನ್ಸ್ ನೋಡಿದ ಮದುವೆಗೆ ಬಂದ ಗಣ್ಯರು ಜೋರಾಗಿ ಬೊಬ್ಬೆ ಹಾಕಿ ಈ ಜೋಡಿಗೆ ಪ್ರೋತ್ಸಾಹಿಸಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ನೋಡಿದ ಅನೇಕರು ಮೇಡ್ ಫಾರ್ ಈಚ್ ಅದರ್ ಅಂತ ಈ ಜೋಡಿಗೆ ಹೇಳುತ್ತಿದ್ದಾರೆ. ಕೆಲ ದಿನಗಳ ಹಿಂದೆ ವರನ ಸ್ನೇಹಿತರು ಮದುವೆ ದಿನವೂ ಆತನನ್ನು ಸುಮ್ಮನೆ ಬಿಡದೇ ಜ್ಯೂಸ್‌ನಲ್ಲಿ ಮದ್ಯ ಮಿಕ್ಸ್ ಮಾಡಿ ಆತನಿಗೆ ನೀಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಜ್ಯೂಸ್‌ ಎಂದು ಸ್ಟ್ರಾದಲ್ಲಿ ಒಂದು ಸಿಪ್‌ ಕುಡಿದ ಆತನಿಗೆ ಇದು 'ಬೇರೆ ಜ್ಯೂಸ್' ಎಂಬುದು ತಿಳಿದು ಆತ ಸ್ನೇಹಿತರ ಮುಖ ನೋಡಿ ಜೋರಾಗಿ ನಗಲು ಶುರು ಮಾಡುತ್ತಾನೆ. 

Viral Video: ಹಾರ ಹಾಕುವಾಗಲೇ ವಧುವಿನ ಕಪಾಳಕ್ಕೆ ಬಾರಿಸಿದ ವರ!

ಈ ವಿಡಿಯೋಗೂ ಜನ ಸಾಕಷ್ಟು ಕಾಮೆಂಟ್ ಮಾಡಿದ್ದರು. ಈತನನ್ನು ಮದುವೆ ದಿನವೂ ಸ್ನೇಹಿತರು ಸುಮ್ಮನಿರಲು ಬಿಡುತ್ತಿಲ್ಲ ಎಂದು ಕಾಮೆಂಟ್ ಮಾಡಿದರು, ಒಟ್ಟಿನಲ್ಲಿ ಮದುವೆಯ ಮೋಜಿನಿಂದ ಕೂಡಿದ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಕೆಲವು ವಿಡಿಯೋಗಳು ನೋಡುಗರಿಗೆ ತಮ್ಮ ಮದುವೆ ದಿನಗಳನ್ನು ನೆನಪಿಸುತ್ತಿರುವುದು ಸುಳ್ಳಲ್ಲ. 
 

click me!