Latest Videos

ಶೀಘ್ರದಲ್ಲೇ ರಾಹುಲ್ - ಅತಿಯಾ ಶೆಟ್ಟಿ ಮದುವೆ ವದಂತಿ; ಸುನಿಲ್ ಶೆಟ್ಟಿ ರಿಯಾಕ್ಷನ್

By Shruiti G KrishnaFirst Published Jul 13, 2022, 10:35 AM IST
Highlights

ನಟ ಸುನಿಲ್ ಶೆಟ್ಟಿ ಮಗಳು ಅತಿಯಾ ಶೆಟ್ಟಿ ಮದುವೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮದುವೆಗೆ ಸಿದ್ಧತೆ ಆರಂಭಿಸಿದ್ದಾರೆಯೇ ಎಂದು ಕೇಳಿದ ಪ್ರಶ್ನೆಗೆ ಸುನೀಲ್ ಶೆಟ್ಟಿ ಉತ್ತರ ನೀಡಿದ್ದಾರೆ. 

ಟೀಂ ಇಂಡಿಯಾ ಆಟಗಾರ,  ಲಖನೌ ಸೂಪರ್‌ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಮತ್ತು ಬಾಲಿವುಡ್ ಸ್ಟಾರ್ ಸುನಿಲ್ ಶೆಟ್ಟಿ ಪುತ್ರಿ ಅತಿಯಾ ಶೆಟ್ಟಿ ಪ್ರೀತಿ ವಿಚಾರ ಗುಟ್ಟಾಗಿ ಉಳಿದಿಲ್ಲ. ಇಬ್ಬರು ಕಳೆದ ಕೆಲವು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ. ಆಗಾಗ ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಒಟ್ಟಿಗೆ ಇರುವ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಪ್ರೀತಿ ವ್ಯಕ್ತಪಡಿಸುತ್ತಿರುತ್ತಾರೆ. ಅಲ್ಲದೆ ಕ್ರಿಕೆಟ್ ಪಂದ್ಯ ವೀಕ್ಷಿಸಲು ಅತಿಯಾ ಕ್ರೀಡಾಂಗಣಕ್ಕೆ ಎಂಟ್ರಿ ಕೊಡುವ ಮೂಲಕ ಸದ್ದು ಮಾಡಿದ್ದರು. ಈ ಪ್ರಣಯ ಪಕ್ಷಿಗಳು ಇದೀಗ ಮದುವೆಗೆ ಸಿದ್ಧವಾಗಿದ್ದಾರೆ ಎನ್ನುವ ಮಾತು ಕಳೆದ ಕೆಲವು ತಿಂಗಳಿಂದ ಕೇಳಿಬರುತ್ತಿದೆ. ಕೆ ಎಲ್ ರಾಹುಲ್ ಬಹುಕಾಲದ ಗೆಳತಿ ಅತಿಯಾ ಶೆಟ್ಟಿ ಜೊತೆ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ. ಅಂದಹಾಗೆ ಇಬ್ಬರ ಮದುವೆ ವಿಚಾರ ಸದ್ದು ಮಾಡುತ್ತಿರುವುದ ಇದೇ ಮೊದಲಲ್ಲ. ಈ ಮೊದಲು ಸಾಕಷ್ಟು ಬಾರಿ ಸುದ್ದಿಯಾಗಿದೆ. ಆದರೆ ಈ ಬಗ್ಗೆ ಅತಿಯಾ ಅಥವಾ ರಾಹುಲ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮದುವೆ ವದಂತಿ ಜೋರಾದ ಬೆನ್ನಲ್ಲೇ ಅತಿಯಾ ಶೆಟ್ಟಿ ತಂದೆ, ನಟ ಸುನಿಲ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. 

ಅಂದಹಾಗೆ ಅತಿಯಾ ಮತ್ತು ರಾಹುಲ್ ಇಬ್ಬರೂ ಇತ್ತೀಚಿಗಷ್ಟೆ ಜರ್ಮನಿಯ ಮ್ಯೂನಿಚ್‌ಗೆ ಒಟ್ಟಿಗೆ ಪ್ರಯಾಣ ಬೆಳೆಸಿದರು. ಅಲ್ಲಿ ಕೆಎಲ್ ರಾಹುಲ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇಬ್ಬರು ಒಟ್ಟಿಗೆ ಜರ್ಮನಿಗೆ ಹಾರಿದ್ದ ಜೋಡಿಯ ಫೋಟೋಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಾದ ಬಳಿಕ ಇಬ್ಬರ ಮದುವೆ ವಿಚಾರ ಮತ್ತಷ್ಟು ಜೋರಾಯಿತು. ಶೀಘ್ರದಲ್ಲೇ ವಿವಾಹವಾಗಲಿದ್ದಾರೆ, ಮುಂದಿನ ಮೂರು ತಿಂಗಳೊಳಗೆ ಮದುವೆ ನಡೆಯಲಿದೆ ಎನ್ನುವ ಸುದ್ದಿ ವೈರಲ್ ಆಗಿದೆ. 

ಒಂದೇ ಮನೆಗೆ ಶಿಫ್ಟ್ ಆಗಲಿದ್ದಾರೆ Athiya Shetty KL Rahul

ರೇಡಿಯೋ ಮಿರ್ಚಿ ಜೊತೆ ಮಾತನಾಡಿದ ನಟ ಸುನಿಲ್ ಶೆಟ್ಟಿ ಮಗಳ ಮದುವೆ ಬಗ್ಗೆ ಮಾತನಾಡಿದ್ದಾರೆ. ಮದುವೆಗೆ ಸಿದ್ಧತೆ ಆರಂಭಿಸಿದ್ದಾರೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುನೀಲ್ ಶೆಟ್ಟಿ, 'ಇಲ್ಲ, ಈ ಬಗ್ಗೆ ಇನ್ನೂ ಯಾವುದೇ ಪ್ಲಾನ್ ಮಾಡಿಲ್ಲ' ಎಂದು ಹೇಳಿದರು. ಅಂದಹಾಗೆ  ಹಿರಿಯ ನಟ ತನ್ನ ಮಗಳ ಮದುವೆಯ ವದಂತಿಗಳಿಗೆ ಪ್ರತಿಕ್ರಿಯಿಸುವುದು ಇದೇ ಮೊದಲಲ್ಲ. ಮೇ ತಿಂಗಳಲ್ಲಿ ಮಾತನಾಡಿದ್ದ ಸುನಿಲ್ ಶೆಟ್ಟಿ, 'ಅವಳು ಯಾವಾಗ ಬಯಸುತ್ತಾಳೆ ಎಂಬುದು ಅತಿಯಾ ಆಯ್ಕೆಯಾಗಿದೆ' ಎಂದು ಅವರು ಹೇಳಿದ್ದರು.

ಮುಂದಿನ 3 ತಿಂಗಳೊಳಗಾಗಿ ಕೆ ಎಲ್ ರಾಹುಲ್ - ಆತಿಯಾ ಶೆಟ್ಟಿ ಮದುವೆ ಫಿಕ್ಸ್..?

ಅಂದಹಾಗೆ ಇವರಿಬ್ಬರ ಬಗ್ಗೆ ಸಾಕಷ್ಟು ಸುದ್ದಿ ಹರಿದಾಡುತ್ತಲೆ ಇರುತ್ತದೆ. ಇತ್ತೀಚಿಗಷ್ಟೆ ಈ ಸ್ಟಾರ್ ಜೋಡಿ ಹೊಸ ಮನೆಗೆ ಶಿಫ್ಟ್ ಆಗಿದ್ದಾರೆ ಎನ್ನಲಾಗಿತ್ತು. ಮದುವೆಗೂ ಮೊದಲು ಇಬ್ಬರು ಹೊಸ ಮನೆ ಖರೀದಿ ಮಾಡಿದ್ದು ಒಟ್ಟಿಗೆ ವಾಸಿಸಲು ನಿರ್ಧರಿಸಿದ್ದಾರೆ ಎನ್ನುವ ಮಾತು ಕೇಳಿಬಂದಿತ್ತು. ಮುಂಬೈನಲ್ಲಿ 4BHK ಅಪಾರ್ಟ್ಮೆಂಟ್ ಅನ್ನು ಬಾಡಿಗೆಗೆ ಪಡೆದಿದ್ದಾರೆ ಎನ್ನಲಾಗಿದೆ. ಈ ಮನೆಗೆ ತಿಂಗಳಿಗೆ ಬರೋಬ್ಬರಿ 10 ಲಕ್ಷ ರೂಪಾಯಿ ಬಾಡಿಗೆ ಕಟ್ಟುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ ಇದ್ಯಾವುದರ ಬಗ್ಗೆಯೂ ಆತಿಯಾ ಅಥವಾ ರಾಹುಲ್ ಬಹಿರಂಗ ಪಡಿಸಿಲ್ಲ. ಆದರೀಗ ಮದುವೆ ಹರಿದಾಡುತ್ತಿರುವ ಮದುವೆ ಸುದ್ದಿ ನಿಜನಾ ಎಲ್ಲಾ ಸೆಲೆಬ್ರಿಟಿಗಳ ಹಾಗೆ ಇವರಿಬ್ಬರು ಸಹ ಮಾಹಿತಿ ರಿವೀಲ್ ಮಾಡದೆ ಸೈಲೆಂಟ್ ಆಗಿ ಹಸೆಮಣೆ ಏರ್ತಾರಾ ಎಂದು ಕಾದುನೋಡಬೇಕಿದೆ. 

click me!