"ಮುಂಬೈನಲ್ಲಿ ಹೀಗಿರಲಿಲ್ಲ" : ಸಾಯಿ ಪಲ್ಲವಿ ಲುಕ್ ನೋಡಿ ಬಾಲಿವುಡ್ ಸ್ಟೈಲಿಸ್ಟ್‌ಗಳಿಗೆ ಫ್ಯಾನ್ಸ್ ಕ್ಲಾಸ್

Published : Oct 13, 2026, 02:13 PM IST
Sai Pallavi new look

ಸಾರಾಂಶ

Sai Pallavi new look: ಟಾಕ್ ಶೋ ಪ್ರೋಮೊದಲ್ಲಿ ಸಾಯಿ ಪಲ್ಲವಿ ಅವರ ನ್ಯಾಚುರಲ್ ಬ್ಯೂಟಿ ನೋಡಿ ಫಿದಾ ಆದ ನೆಟ್ಟಿಗರು, ಬಾಲಿವುಡ್ ಸ್ಟೈಲಿಸ್ಟ್‌ಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.. 'ನಮ್ಮ ಸೌತ್ ನಟಿಯನ್ನು ಬದಲಾಯಿಸಲು ಹೋಗಬೇಡಿ' ಎಂದು ಫ್ಯಾನ್ಸ್ ಹೇಳಿದ್ದೇಕೆ? ಇಲ್ಲಿದೆ ವಿವರ.

ಟಾಲಿವುಡ್‌ನ ಹಿರಿಯ, ವಿಶಿಷ್ಟ ನಟ ಜಗಪತಿ ಬಾಬು ನಿರೂಪಣೆಯ ಬಹುನಿರೀಕ್ಷಿತ ಟಾಕ್ ಶೋ ‘ಜಯಮ್ಮು ನಿಶ್ಚಯಮ್ಮು ರಾ’ ಸೀಸನ್ 2 ಆರಂಭಕ್ಕೆ ಭರ್ಜರಿಯಾಗಿ ಸಜ್ಜಾಗಿದೆ. ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗಲಿರುವ ಈ ಶೋನ ಮೊದಲ ಸಂಚಿಕೆಗೆ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಅತಿಥಿಯಾಗಿ ಆಗಮಿಸಿದ್ದು, ಬಿಡುಗಡೆಯಾಗಿರುವ ಪ್ರೋಮೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಆದರೆ, ಈ ಪ್ರೋಮೊದಲ್ಲಿ ಸಾಯಿ ಪಲ್ಲವಿ ಅವರ ಅದ್ಭುತ ಲುಕ್ ನೋಡಿದ ನೆಟ್ಟಿಗರು, ಈ ಹಿಂದೆ ಅವರು ಮುಂಬೈ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದ ಲುಕ್‌ಗೆ ಹೋಲಿಸಿ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ!

ಮುಂಬೈನಲ್ಲಿ ಹೀಗಿರಲಿಲ್ಲ

ಪ್ರೋಮೊ ರಿಲೀಸ್ ಆದ ಬೆನ್ನಲ್ಲೇ ಸಾಯಿ ಪಲ್ಲವಿ ಅವರ ಸಾಂಪ್ರದಾಯಿಕ ಸೌಂದರ್ಯಕ್ಕೆ ಅಭಿಮಾನಿಗಳು ಮನಸೋತಿದ್ದಾರೆ. ಇದೇ ವೇಳೆ ಕೆಲ ನೆಟ್ಟಿಗರು, ಇತ್ತೀಚೆಗೆ ಬಾಲಿವುಡ್‌ನ ಮುಂಬೈ ಕಾರ್ಯಕ್ರಮಗಳಲ್ಲಿ ಸಾಯಿ ಪಲ್ಲವಿ ಕಾಣಿಸಿಕೊಂಡಿದ್ದ ಶೈಲಿಯನ್ನು ನೆನಪಿಸಿಕೊಂಡು ಕಾಮೆಂಟ್ ಮಾಡಿದ್ದಾರೆ.

"ಮುಂಬೈನಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾಗ ಸಾಯಿ ಪಲ್ಲವಿ ಇಷ್ಟೊಂದು ಸುಂದರವಾಗಿ ಕಾಣುತ್ತಲೇ ಇರಲಿಲ್ಲ! ಅಲ್ಲಿ ಅವರ ಹೇರ್‌ಸ್ಟೈಲ್ ಆಗಲಿ, ಉಟ್ಟ ಸೀರೇ ಆಗಲಿ ಯಾವುದೂ ಅಷ್ಟು ಚೆನ್ನಾಗಿರಲಿಲ್ಲ, ಯಾಕೋ ಗೊತ್ತಿಲ್ಲ.. ಆದರೆ ಇಲ್ಲಿ (ಟಾಕ್ ಶೋನಲ್ಲಿ) ಅವರ ಅಂದ, ಕಳೆ ನಿಜಕ್ಕೂ ಅದ್ಭುತವಾಗಿದೆ!" ಎಂದು ನೆಟ್ಟಿಗರು ಕಾಮೆಂಟ್ ಮಾಡುವ ಮೂಲಕ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಬಾಲಿವುಡ್ ಈವೆಂಟ್‌ಗಳಿಗಿಂತ ಸೌತ್‌ನ ಇಂತಹ ಶೋಗಳಲ್ಲೇ ಸಾಯಿ ಪಲ್ಲವಿ ನ್ಯಾಚುರಲ್ ಬ್ಯೂಟಿಯಾಗಿ ಕಂಗೊಳಿಸುತ್ತಾರೆ ಎಂದು ಫ್ಯಾನ್ಸ್ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಪ್ರೋಮೊದಲ್ಲಿ ಸೀಕ್ರೆಟ್ ಕ್ರಶ್ ರಿವೀಲ್!

ಜಗಪತಿ ಬಾಬು ಮತ್ತು ಸಾಯಿ ಪಲ್ಲವಿ ನಡುವಿನ ತಮಾಷೆಯ ಸಂಭಾಷಣೆ ಈ ಪ್ರೋಮೊದ ಹೈಲೈಟ್ ಆಗಿದೆ..

"ನಾವು ಮುಖಾಮುಖಿ ಭೇಟಿಯಾಗುತ್ತಿರುವುದು ಇದೇ ಮೊದಲು" ಎಂದ ಜಗಪತಿ ಬಾಬುಗೆ, "ಆಗೊಮ್ಮೆ ಫೋನ್‌ನಲ್ಲಿ ಮಾತನಾಡಿದ್ದೆವಲ್ಲ ಸರ್" ಎಂದಿದ್ದಾರೆ.

"ಮನೆಯಲ್ಲಿ ಯಾರಂದ್ರೆ ಭಯ?" ಎಂಬ ಪ್ರಶ್ನೆಗೆ, "ಮೊದಲು ಅಪ್ಪ-ಅಮ್ಮ ಅಂದ್ರೆ ಭಯವಿತ್ತು, ಆದರೆ ಈಗ ಅವರಿಗೆ ನನ್ನ ಕಂಡರೆ ಭಯ!" ಎಂದು ಮುಗ್ಧ ನಗೆ ಬೀರಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿ, ಸಾಯಿ ಪಲ್ಲವಿ ಅವರ ‘ಸೀಕ್ರೆಟ್ ಕ್ರಶ್’ ಯಾರು ಎಂಬುದನ್ನು ಸ್ಕ್ರೀನ್ ಮೇಲೆ ಸರ್‌ಪ್ರೈಸ್ ಆಗಿ ತೋರಿಸಿದಾಗ, ಅವರು ನಾಚಿಕೆಯಿಂದ "ಅಯ್ಯೋ ಬಾಬೋಯ್!" ಎಂದು ಮುಖ ಮುಚ್ಚಿಕೊಂಡಿದ್ದು, ಆ ವ್ಯಕ್ತಿ ಯಾರೆಂಬ ಕುತೂಹಲವನ್ನು ವೀಕ್ಷಕರಲ್ಲಿ ದುಪ್ಪಟ್ಟು ಮಾಡಿದೆ.

ಅಕ್ಟೋಬರ್ 16ಕ್ಕೆ ಗ್ರ್ಯಾಂಡ್ ಎಪಿಸೋಡ್

ಈ ಕ್ರೇಜಿ ಸಂಚಿಕೆಯು ಅಕ್ಟೋಬರ್ 16 ರಂದು ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗಲಿದೆ. ಮತ್ತೊಂದೆಡೆ, ಬಾಲಿವುಡ್‌ನ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದಲ್ಲಿ ರಣಬೀರ್ ಕಪೂರ್ ಜೊತೆ ‘ಸೀತೆ’ಯಾಗಿ ಹಾಗೂ ಧನುಷ್ ಜೊತೆಗಿನ ಸಿನಿಮಾದಲ್ಲೂ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಬಾಲಿವುಡ್‌ಗೆ ಕಾಲಿಡುತ್ತಿರುವ ಈ ಹೊತ್ತಿನಲ್ಲೇ, ಅವರ ಮುಂಬೈ ಲುಕ್ ಹಾಗೂ ಸೌತ್ ಲುಕ್ ನಡುವಿನ ಈ ಹೋಲಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಬಾಲಿವುಡ್ ಸ್ಟೈಲಿಸ್ಟ್‌ಗಳಿಗೆ ಫ್ಯಾನ್ಸ್ ಕ್ಲಾಸ್!

ಸಾಯಿ ಪಲ್ಲವಿ ಅವರ ಈ ಲುಕ್ ಚರ್ಚೆಯಾಗಲು ಮತ್ತೊಂದು ಮುಖ್ಯ ಕಾರಣವೆಂದರೆ ಅವರ ಮುಂಬೈ ಪ್ರಾಜೆಕ್ಟ್ ‘ರಾಮಾಯಣ’. ಮುಂಬೈ ಈವೆಂಟ್‌ಗಳಲ್ಲಿ ಬಾಲಿವುಡ್‌ನ ಅತಿಯಾದ ಸ್ಟೈಲಿಂಗ್ ಸಾಯಿ ಪಲ್ಲವಿಯ ಸಹಜ ಅಂದವನ್ನು ಮರೆಮಾಚಿತ್ತು. ಆದರೆ, ಜಗಪತಿ ಬಾಬು ಅವರ ಶೋನಲ್ಲಿ ಯಾವುದೇ ಆಡಂಬರವಿಲ್ಲದ ಸರಳ ಸೀರೆ, ಮುಖದ ಮೇಲೆ ಅತಿಯಾದ ಮೇಕಪ್ ಇಲ್ಲದ ಮುಗ್ಧ ನಗು, ಅವರ ಎಂದಿನ ಗುಂಗುರು ಕೂದಲಿನ ನೈಸರ್ಗಿಕ ಶೈಲಿ ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸಿದೆ. 'ನಮ್ಮ ಸೌತ್ ನಟಿ ನ್ಯಾಚುರಲ್ ಆಗಿದ್ದಾಗಲೇ ಅಪ್ಸರೆಯಂತೆ ಕಾಣುತ್ತಾರೆ, ಬಾಲಿವುಡ್‌ನವರು ಅವರನ್ನು ಬದಲಾಯಿಸಲು ಹೋಗಬಾರದು. ರಾಮಾಯಣದ ಸೀತೆಯ ಪಾತ್ರಕ್ಕೆ ಇವರ ಈ ಸರಳ ಸೌಂದರ್ಯವೇ ಹೇಳಿಮಾಡಿಸಿದ್ದು'ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Karna Serial ನಲ್ಲೂ ಜೋಗಮ್ಮ ಎಂಟ್ರಿ! ಧಾರಾವಾಹಿಗಳಲ್ಲಿ ಜೋಗತ್ತಿಯರಿಗೆ ಏಕಿಷ್ಟು ಡಿಮಾಂಡ್​
Bigg Boss ಮನೆಯಿಂದ ಜೀವಂತ ಬಂದ್ರೆ ಸಾಕಿತ್ತು: ಆಘಾತದಲ್ಲಿ ನಟ ಸುದರ್ಶನ್​- ಸಂಗೀತಾ ಭಟ್​ ಹೇಳಿದ್ದೇನು