
ಬಿಗ್ ಬಾಸ್ ಮನೆಯಲ್ಲಿ ಹಠಾತ್ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಂಗೀತಾ ಭಟ್ ನೇರವಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅದಾದ ನಂತರ ಅವರು ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ಆಗಲಿಲ್ಲ. ವೈದ್ಯರ ಸಲಹೆ ಮೇರೆಗೆ ಶೋ ಅನ್ನು ಅರ್ಧಕ್ಕೆ ನಿಲ್ಲಿಸಿ ಬೇರೆ ಸ್ಪರ್ಧಿಗೆ ದಾರಿ ಮಾಡಿಕೊಟ್ಟಿದ್ದಾರೆ. ಹಾಗಿದ್ದರೆ ಸಂಗೀತಾ ಭಟ್‌ಗೆ ಆಗಿದ್ದೇನು? ಯಾಕೆ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಳ್ತು? ಮನೆಯಿಂದ ಯಾಕೆ ಹೊರಬಂದರು? ಅನ್ನೋದ್ರ ಬಗ್ಗೆ ಸಂದರ್ಶನ ಒಂದರಲ್ಲಿ ಬಹಿರಂಗಪಡಿಸಿದ್ದಾರೆ.
ಬಿಗ್ ಬಾಸ್ ಮನೆಗೆ ಹೋದಾಗ ನನಗೆ ಪ್ಯಾನಿಕ್ ಅಟ್ಯಾಕ್ ಆಗುತ್ತಾ ಹೋಯಿತು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲರಿಗೂ ಇದು ಆಗಿಯೇ ಆಗುತ್ತದೆ. ನನಗೆ ಇಲ್ಲಿಯವರೆಗೆ ಆಗಿರುವ ಅನುಭವಗಳಲ್ಲಿ ಯಾವುದೂ ಕೂಡ ಆಸ್ಪತ್ರೆಗೆ ಹೋಗುವ ಹಾಗೆ ಮಾಡಿರಲಿಲ್ಲ. ನಾಲ್ಕನೇ ವಾರದ ಕೊನೆಯಲ್ಲಿ ಮಾನಸಿಕವಾಗಿ ನಾನು ಕುಗ್ಗಿ ಹೋದೆ. ಅದಾದ ನಂತರ ದೈಹಿಕವಾಗಿಯೂ ಸೋತೆ. ಈ ಸಂಬಂಧ ಇನ್ನೂ ವೈದ್ಯರ ಬಳಿ ಹೋಗಿ ತಪಾಸಣೆಗೆ ಒಳಗಾಗೋದು ಇದೆ.
ನನ್ನ ಪ್ರಕಾರ ಇದೆಲ್ಲ ಈಗ ಆಗಿರೋದು ಅಂತಲ್ಲ. ಲೈಫ್‌ನಲ್ಲಿ ಆಗಿರುವ ಟ್ರಾಮಾಗಳೆಲ್ಲ ಅಕ್ಯೂಮಿಲೆಟ್ ಆಗಿ ಒಂದೇ ಸಲಕ್ಕೆ ಬಾಡಿ ಅದನ್ನು ಗಿವ್ ಅಪ್ ಮಾಡಿಬಿಡುತ್ತೆ. ನನಗೆ ಹೆಚ್ಚಾಗಿ ಮೈಂಡ್ ಗೀವ್ ಅಪ್ ಮಾಡಿಬಿಡ್ತು ಅನಿಸುತ್ತೆ. ಬಿಗ್ ಬಾಸ್ ಮನೆಯಲ್ಲಿದ್ದಾಗ ಒಂದು ಸಣ್ಣ ಧ್ವನಿ ಕೇಳಿಸಿದ್ರೂ ನನಗೆ ಆತಂಕ ಕಿಯೇಟ್ ಆಗುತ್ತಿತ್ತು. ಹೀಗಾಗಿ ವೈದ್ಯರು ಬಿಗ್ ಬಾಸ್ ಶೋನಲ್ಲಿ ಮುಂದುವರಿದ್ರೆ ಇದು ಕಂಟಿನ್ಯೂ ಆಗಬಹುದು. ಅದರ ಬದಲಾಗಿ ನೀವು ಶೋ ಅರ್ಧಕ್ಕೆ ಬಿಡೋದು ಬೆಟರ್ ಅನ್ನೋದು ವೈದ್ಯರ ಸಲಹೆ ಆಗಿತ್ತು.
ವೈದ್ಯರ ಸಲಹೆ ಜೊತೆಗೆ ನನಗೂ ಹಾಗೆ ಅನಿಸಿತ್ತು. ಶೋ ಕಂಟಿನ್ಯೂ ಮಾಡಿದ್ರೆ ನನಗೆ ನಾನೇ ತೊಂದರೆ ಮಾಡಿಕೊಂಡಂತೆ ಆಗಲಿದೆ ಎಂದನಿಸಿತು. ನನ್ನ ಎಕ್ಸಿಟ್ ನಿಂದ ಬೇರೆಯವರಿಗೆ ಒಂದು ಅವಕಾಶ ಸಿಗುತ್ತದೆ ಎಂದರೆ.. ಅದನ್ನು ನಾನು ಪ್ರೀತಿಯಿಂದ ಒಪ್ಪಿಕೊಳ್ಳಲು ರೆಡಿ ಇದ್ದೆ. ಇದೇ ಕಾರಣಕ್ಕೆ ನಾನು ಶೋನ ಅರ್ಧಕ್ಕೆ ನಿಲ್ಲಿಸಿದೆ. ಬಿಗ್‌ಬಾಸ್ ಮನೆಗೆ ಹೋಗುವಾಗ ಮೆಡಿಕಲ್ ಟೆಸ್ಟ್ ಎಲ್ಲರಿಗೂ ಖಡ್ಡಾಯ. ನಾನೂ ಕೂಡ ತಪಾಸಣೆಗೆ ಒಳಗಾಗಿದ್ದೆ. ನನಗೆ ಬಿಗ್ ಬಾಸ್ ಮನೆಗೆ ಹೋದಾಗ ಆಗಿದ್ದು ಅಂತಾ ಹೇಳೋಕೆ ಆಗಲ್ಲ. ಈ ಹಿಂದೆ ಆಗಿರೋದ ಯಾವುದೋ ಒಂದು ಘಟನೆಯಿಂದ ಆಗಿರಬಹುದು.
ಯಾಕೆಂದರೆ ನನಗೆ ಈ ಹಿಂದೆ ಆಗಿರುವ ಸರ್ಜರಿಯಿಂದ ಯಾವುದೇ ಪ್ರಾಬ್ಲಂ ಆಗಲಿಲ್ಲ. ಸರ್ಜರಿಯಿಂದ ನನಗೆ ದೈಹಿಕವಾಗಿ ಎಫೆಕ್ಟ್ ಆಗುತ್ತದೆ. ಆದರೆ ಬಿಗ್ ಬಾಸ್ ಮನೆಯಲ್ಲಿ ನನಗೆ ಟಾಸ್ಕ್‌ನಲ್ಲಿ ಯಾವುದೇ ತೊಂದರೆ ಆಗಲಿಲ್ಲ. ನಾನು ಚೆನ್ನಾಗಿಯೇ ಆಡಿದೆ. ಆದರೆ ಈ ಪ್ಯಾನಿಕ್ ಅಟ್ಯಾಕ್ ನನಗೆ ಹೇಗೆ ಬಂತು ಅನ್ನೋದು ಇನ್ನೂ ಗೊತ್ತಾಗಿಲ್ಲ. ಇದು ಎಲ್ಲರ ಜೀವನದಲ್ಲೂ ಒಮ್ಮೆ ಬರೋದು. ಯಾಕೆ ಹಾಗೆ ಆಯಿತು ಎಂದು ತಿಳಿದುಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.