Shah Rukh Khan's Monthly Income: ಶಾರುಖ್​ ತಿಂಗಳ ಆದಾಯ ಎಷ್ಟೆಂದು ಕೇಳಿದ ಅಭಿಮಾನಿ: ನಟ ಕೊಟ್ಟ ಉತ್ತರಕ್ಕೆ ಸುಸ್ತಾದ ಫ್ಯಾನ್​

Published : Jun 10, 2025, 02:00 PM ISTUpdated : Jun 10, 2025, 02:12 PM IST
Shahrukh Khan Income

ಸಾರಾಂಶ

ಚಿತ್ರವೊಂದಕ್ಕೆ ಹತ್ತಾರು ಕೋಟಿ ರೂಪಾಯಿ ಪಡೆಯುವ ನಟ ಶಾರುಖ್​ ಖಾನ್​ ಮಾಸಿಕ ಆದಾಯದ ಬಗ್ಗೆ ಹಲವರಲ್ಲಿ ಕುತೂಹಲ ಸಹಜ. ಅದೇ ರೀತಿ ಅವರ ಅಭಿಮಾನಿಯೊಬ್ಬ ಪ್ರಶ್ನಿಸಿದ್ದಾನೆ. ಅದಕ್ಕೆ ನಟ ಕೊಟ್ಟ ಉತ್ತರ ನೋಡಿ!

ಬಾಲಿವುಡ್ ಬಾದ್‌ಶಾ ಎಂದೇ ಫೇಮಸ್​ ಆಗಿರೋ, ಆಪರೇಷನ್​ ಸಿಂದೂರದ ಟೈಮ್​ನಲ್ಲಿ ಪಾಕಿಸ್ತಾನದ ಅಭಿಮಾನಿಗಳಿಗೆ ಎಲ್ಲಿ ಬೇಸರವಾಗಿಬಿಡುತ್ತದೋ ಎನ್ನುವ ಕಾರಣಕ್ಕೆ ಒಂದೇ ಒಂದು ಮಾತನಾಡದೇ ಮೌನ ತಾಳಿ ಹಲವರ ಕೆಂಗಣ್ಣಿಗೆ ಗುರಿಯಾಗಿರೋ ನಟ ಶಾರುಖ್ ಖಾನ್ ಸದ್ಯ ತಮ್ಮ ಮನ್ನತ್​ ಮನೆಯನ್ನು ಬಿಟ್ಟಿರುವುದರಿಂದ ಸುದ್ದಿಯಾಗುತ್ತಿದ್ದಾರೆ. ಮನ್ನತ್ ಮನೆಯ ನವೀಕರಣಕ್ಕಾಗಿ ₹ 24 ಲಕ್ಷ ರೂಪಾಯಿಗಳ ಅಪಾರ್ಟ್‌ಮೆಂಟ್‌ನ್ನು ಬಾಡಿಗೆಗೆ ಪಡೆದಿದ್ದಾರೆ. ಇದೀಗ ತಮ್ಮ ಸಿಬ್ಬಂದಿಗಾಗಿ ತಿಂಗಳಿಗೆ ಒಂದೂವರೆ ಲಕ್ಷ ರೂಪಾಯಿಗಳ ಬಾಡಿಗೆ ಇರುವ ಮನೆಯನ್ನು ಪಡೆದಿದ್ದಾರೆ. ಮೂರು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಮುಂಬೈನ ಪಾಲಿ ಹಿಲ್‌ನಲ್ಲಿದೆ. ಇಲ್ಲಿ ಅವರು ಸದ್ಯ ವಾಸವಿದ್ದಾರೆ. ಸದ್ಯ ಶಾರುಖ್​ ಇರುವ 10,500 ಚದರ ಅಡಿಗಳಷ್ಟು ವಿಸ್ತೀರ್ಣವಿದ್ದು, ಕಟ್ಟಡವು ನಿರ್ಮಾಪಕ ವಶು ಭಗ್ನಾನಿ ಮತ್ತು ಅವರ ಮಕ್ಕಳಾದ ಜಾಕಿ ಭಗ್ನಾನಿ ಮತ್ತು ದೀಪಶಿಖಾ ದೇಶಮುಖ್ ಸೇರಿದಂತೆ ಭಗ್ನಾನಿ ಕುಟುಂಬದ ಒಡೆತನದಲ್ಲಿದೆ ಎಂದು ವರದಿಗಳು ತಿಳಿಸಿವೆ.

ಶಾರುಖ್​ ಅವರ ಆದಾಯಕ್ಕೆ ಹೋಲಿಸಿದರೆ ತಿಂಗಳಿಗೆ 24 ಲಕ್ಷ ರೂಪಾಯಿ ನೀಡುವುದು ಅವರಿಗೆ ದೊಡ್ಡ ವಿಷಯವೇ ಅಲ್ಲ. ಈ ಸಂದರ್ಭದಲ್ಲಿ ಶಾರುಖ್​ ಅವರಿಗೆ ತಿಂಗಳಿಗೆ ಎಷ್ಟು ಆದಾಯ ಬರುತ್ತದೆ ಎನ್ನುವ ಬಗ್ಗೆ ಅವರ ಅಭಿಮಾನಿಯೊಬ್ಬ ಕೇಳಿದ್ದಾನೆ. ಒಂದೊಂದು ಚಿತ್ರಕ್ಕೆ ಹತ್ತಾರು ಕೋಟಿ ರೂಪಾಯಿ ಪಡೆಯುವ ಶಾರುಖ್​ ಖಾನ್​ ಅವರ ಮಾಸಿಕ ಆದಾಯ ಎಷ್ಟು ಎನ್ನುವ ಕುತೂಹಲ ಹಲವರದ್ದು. ಈ ಹಿಂದೆ ಆಸ್ಕ್​ ಎನಿಥಿಂಗ್​ ಎನ್ನುವ ಸೆಷನ್​ ಶುರುಮಾಡಿದ್ದ ಶಾರುಖ್​ಗೆ ಆ ಸಮಯದಲ್ಲಿ, ಅಭಿಮಾನಿ ಕೇಳಿರೋ ಪ್ರಶ್ನೆ ಇದಾಗಿದೆ. ಅದೀಗ ಪುನಃ ವೈರಲ್​ ಆಗ್ತಿದೆ.

 

"ಬಾಸ್‌ ನಿಮ್‌ ಇನ್‌ಕಮ್‌ ಎಷ್ಟು" ಎಂದು ಕೇಳಿದ್ದಾನೆ. ಅದಕ್ಕೆ ಶಾರುಖ್‌ ಜಾಣ್ಮೆಯಿಂದ ಉತ್ತರಿಸಿದ್ದು, " "ನಾನು ಪ್ರತಿದಿನ ಸಾಕಷ್ಟು ಪ್ರೀತಿ ಗಳಿಸುತ್ತೇನೆ. ಅದೇ ನನ್ನ ಇನ್‌ಕಮ್‌" ಎಂದು ಪ್ರಶ್ನೆ ಕೇಳಿದ ಅಭಿಮಾನಿ ಬಾಯಿ ಬಾಯಿ ಬಿಡುವಂತೆ ಮಾಡಿದ್ದಾರೆ! ಇನ್ನೊಬ್ಬ ಫ್ಯಾನ್​, "ಸಿನಿ ತಾರೆಯರು ಹಾಗೂ ಅಭಿಮಾನಿಗಳೆಲ್ಲಾ ನಿಮ್ಮನ್ನು ಶಾರುಖ್ ಖಾನ್‌, ಶಾರುಖ್ ಖಾನ್ ಎಂದು ಸಂಬೋಧಿಸುತ್ತಾರೆ. ಕೆಲವರು ಎಸ್‌ಆರ್‌ಕೆ ಎನ್ನುತ್ತಾರೆ. ಆದರೆ ಆಲಿಯಾ ಭಟ್‌ ಮಾತ್ರ ಭಿನ್ನವಾಗಿ 'ಎಸ್‌ಆರ್' ಎಂದಷ್ಟೇ ಕರೆಯುತ್ತಾರಲ್ಲ, ಅದ್ಯಾಕೆ" ಎಂದು ಅಭಿಮಾನಿಯೊಬ್ಬರು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನಟ, 'ಎಸ್‌ಆರ್ ಎಂದರೆ ಸ್ವೀಟ್ ಮತ್ತು ರೋಮ್ಯಾಂಟಿಕ್ ಎಂದು. ಅದಕ್ಕೇ ಕರೆಯುತ್ತಿರಬಹುದು ಎಂದು ತಮಾಷೆ ಉತ್ತರ ಕೊಟ್ಟಿದ್ದಾರೆ. ಇದಲ್ಲದೇ ಹೋದರೆ ಸೀನಿಯರ್ & ರೆಸ್ಪೆಕ್ಟೆಡ್" ಅಂಥನೂ ಆಗಿರಬಹುದು ಎಂದಿದ್ದಾರೆ.

ಇನ್ನೊಬ್ಬ ನೆಟ್ಟಿಗ, "ದೀಪಿಕಾ ಪಡುಕೋಣೆ ಬಗ್ಗೆ ಒಂದು ಮಾತಲ್ಲಿ ಹೇಳಿ" ಎಂದು ಕೇಳಿದ್ದಕ್ಕೆ ಶಾರುಖ್‌, "ಶೀ ಈಸ್ ಸೋ ನೈಸ್’’ ಎಂದಿದ್ದಾರೆ. ಮತ್ತೊಬ್ಬ "ದಳಪತಿ ವಿಜಯ್ ಬಗ್ಗೆ ಹೇಳಿ" ಎಂಬ ಪ್ರಶ್ನೆಗೆ ‘ವಿಜಯ್ ತುಂಬಾ ಸ್ವೀಟ್ ಮತ್ತು ಸೈಲೆಂಟ್. ನನಗಾಗಿ ಡಿನ್ನರ್ ಮಾಡಿಸಿದ್ದರು’ ಎಂದು ಖಾನ್‌ ಉತ್ತರಿಸಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಗಂಡನ ಜಾಕೆಟ್ ಕದ್ದ ದೀಪಿಕಾ ಪಡುಕೋಣೆ.. ಅಂಥ ಪರಿಸ್ಥಿತಿಗೆ ಬಂದು ತಲುಪಿದ್ರಾ ಬಾಲಿವುಡ್ ಸ್ಟಾರ್ ನಟಿ?
Bigg Boss 19 Winner ಘೋಷಣೆ; ಮೊದಲೇ ಪ್ರೀ ಪ್ಲ್ಯಾನ್‌ ಮಾಡಿದ್ದಕ್ಕೆ ತಿರುಗಿಬಿದ್ದ ಸಹಸ್ಪರ್ಧಿಗಳು!