ರಾಕಿ ಬಾಯ್ ತಾಯಿ ಅರ್ಚನಾ ಈಗ ನಾಯಕಿ!

Published : Feb 18, 2019, 09:45 AM IST
ರಾಕಿ ಬಾಯ್ ತಾಯಿ ಅರ್ಚನಾ ಈಗ ನಾಯಕಿ!

ಸಾರಾಂಶ

ಕನ್ನಡ ಪ್ರಭ ಸಿನಿವಾರ್ತೆ ಕಿರುತೆರೆ ನಟಿ ಅರ್ಚನಾ ಜೋಯಿಸ್ ಬ್ಲಾಕ್ ಬಸ್ಟರ್ ‘ಕೆಜಿಎಫ್’ಚಿತ್ರದಲ್ಲಿನ ತಾಯಿ ಪಾತ್ರದೊಂದಿಗೆ ಮನೆ ಮಾತಾದದ್ದು ಹಳೆಯ ಕತೆ. ಆ ಪಾತ್ರದ ಅಭಿನಯ ಹಾಗೂ ಜನಪ್ರಿಯತೆ ಅವರಿಗೆ ಮತ್ತಷ್ಟು ಅವಕಾಶಗಳನ್ನು ತೆರೆದಿದೆ. ಅವರೀಗ ‘ವಿಜಯರಥ’ ಚಿತ್ರದಲ್ಲಿ ನಾಯಕಿ ಆಗಿ ಅಭಿನಯಿಸಿದ್ದಾರೆ. ಅಂದಹಾಗೆ, ಅವರು ಈ ಚಿತ್ರ ಒಪ್ಪಿಕೊಂಡದ್ದು ಕೆಜಿಎಫ್ ಬಿಡುಗಡೆಗೂ ಮೊದಲೇ. ತಮ್ಮ ಪಾತ್ರದ ಬಗ್ಗೆ ಅವರೇನು ಅನ್ನುತ್ತಾರೆ ಕೇಳಿ:  

* ಇದನ್ನು ನಾನು ಒಪ್ಪಿಕೊಂಡಿದ್ದು ವರ್ಷದ ಹಿಂದೆಯೇ. ಆ ಹೊತ್ತಿಗೆ ನಾನು ‘ಕೆಜಿಎಫ್’ ಚಿತ್ರೀಕರಣ ಮುಗಿಸಿಕೊಂಡು ಬಂದಿದ್ದೆ. ಈ ನಿರ್ದೇಶಕರು ಹೇಳಿದ ಕತೆ ಸೊಗಸಾಗಿತ್ತು. ಪಾತ್ರವೂ ಅಷ್ಟೇ ಮುದ್ದಾಗಿತ್ತು. ಒಂದೊಳ್ಳೆ ಅವಕಾಶ ಅಂತ ಒಪ್ಪಿಕೊಂಡೆ. ಆದರೆ ಸೆಟ್ಗೆ ಹೋದಾಗ ಆ ಚಿತ್ರದಲ್ಲಿ ಮತ್ತೊಬ್ಬರು ನಾಯಕಿ ಇದ್ದಾರೆ ಅಂತ ಗೊತ್ತಾಯಿತು. ಯಾಕೋ ಬೇಡ ಎನಿಸುತ್ತಿತ್ತು, ಆದರೂ ನಾನೊಬ್ಬ ಕಲಾವಿದೆ. ಬೇಸರ ಪಟ್ಟುಕೊಳ್ಳಲಿಲ್ಲ. ಕೊಟ್ಟ ಅವಕಾಶವನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದೇನೆ ಎನ್ನುವ ಖುಷಿಯಿದೆ.

* ‘ಕೆಜಿಎಫ್’ ನನ್ನ ಪಾಲಿಗೆ ಅದೃಷ್ಟದ ಅವಕಾಶ. ಸಾಮಾನ್ಯವಾಗಿ ಯುವ ನಟಿಯರು ವಯಸ್ಸಿಗೆ ಮೀರಿದ ಪಾತ್ರಗಳಲ್ಲಿ ಅಭಿನಯಿಸಲು ಇಚ್ಚಿಸುವುದಿಲ್ಲ. ಎಲ್ಲಿ ಆ ಪಾತ್ರಗಳಿಗೆ ಬ್ರಾಂಡ್ ಆಗಿ ಬಿಡುತ್ತೆವೋ ಎನ್ನುವ ಭಯ. ಆದರೆ, ಆ ಅವಕಾಶ ಬಂದಾಗ ನನಗೆ ಅಂತಹ ಯಾವುದೇ ಭಯ ಇರಲಿಲ್ಲ. ಪಾತ್ರಕ್ಕಿಂತ ಚಿತ್ರ ತಂಡದ ಮೇಲೆ ವಿಶ್ವಾಸವಿತ್ತು. ಹಾಗಾಗಿಯೇ ನನ್ನ ವಯಸ್ಸಿಗೂ ಮೀರಿದ ಪಾತ್ರಕ್ಕೆ ಬಣ್ಣ ಹಚ್ಚಿದ್ದೆ. ಅದು ಈ ಮಟ್ಟಕ್ಕೆ ಜನರಿಗೆ ತಲುಪುತ್ತೆ, ಪ್ರೇಕ್ಷಕರು ನನ್ನನ್ನು ಗುರುತಿಸುತ್ತಾರೆ ಅಂತಲೂ ಎಣಿಸಿರಲಿಲ್ಲ. ಆದರೆ ಈಗ ನಿರೀಕ್ಷೆಗೂ ಮೀರಿದ ಮೆಚ್ಚುಗೆ, ಪ್ರೀತಿ, ಜನಪ್ರಿಯತೆ ಆ ಪಾತ್ರಕ್ಕೆ ಸಿಕ್ಕಿದೆ. ಎಲ್ಲೇ ಹೋದರು ಜನ ಜನನ್ನು ‘ರಾಕಿ ಬಾಯ್ ಮದರ್’ ಅಂತಲೇ ಕರೆಯುತ್ತಾರೆ. ಆ ಮಟ್ಟಕ್ಕೆ ಆ ಪಾತ್ರ ನನಗೆ ನೇಮ್-ಫೇಮ್ ತಂದುಕೊಟ್ಟಿದೆಯೆಂದರೆ ನಾನು ಧನ್ಯೆ.

* ಒಂದೇ ತರಹದ ಪಾತ್ರಗಳಿಗೆ ಬ್ರಾಂಡ್ ಆಗುವುದು ನಂಗಿಷ್ಟ ಇಲ್ಲ. ಇಷ್ಟಾಗಿಯೂ ನಾನ್ನಿನ್ನು ಯುವ ನಟಿ. ಆ ತರಹದ ಪಾತ್ರ ಮಾಡುವುದಕ್ಕೆ ಇನ್ನು ಬೇಕಾದಷ್ಟು ಸಮಯವಿದೆ. ಮೇಲಾಗಿ ‘ಕೆಜಿಎಫ್’ ಚಾಪ್ಟರ್‌ 2ನಲ್ಲೂ ನಾನೇ ಮದರ್. ಹಾಗಾಗಿ ನಟನೆಗೆ ಹೆಚ್ಚು ಅವಕಾಶ ಇರುವಂತಹ ಬೇರೆ ತರಹದ ಪಾತ್ರಗಳ ಸಿಕ್ಕರೆ ಒಳ್ಳೆಯದು ಅಂತ ಕಾಯುತ್ತಿದ್ದೇನೆ. ಅವಕಾಶಗಳು ಸಾಕಷ್ಟು ಬರುತ್ತಿವೆ. ನಾನು ನಿರೀಕ್ಷಿಸಿದ ಪಾತ್ರಗಳು ಈ ತನಕ ಸಿಕ್ಕಿಲ್ಲ. ಹಾಗಾಗಿ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ .

* ಒಪ್ಪಿಕೊಂಡ ಧಾರಾವಾಹಿಗಳು ಮುಗಿದಿವೆ. ಧಾರವಾಹಿ ಸಾಕು ಅಂದುಕೊಂಡಿದ್ದೇನೆ. ಹೊಸ ಸಿನಿಮಾ ಕೂಡ ಒಪ್ಪಿಕೊಂಡಿಲ್ಲ. ಸದ್ಯಕ್ಕೆ ಕಲರ್ಸ್ ಕನ್ನಡದ ತಕಧಿಮಿತಾ ರಿಯಾಲಿಟಿ ಶೋದಲ್ಲಿದ್ದೇನೆ. ಡಾನ್ಸ್ ನಂಗಿಷ್ಟ. ನಾನು ಭರತ ನಾಟ್ಯನೃತ್ಯಗಾರ್ತಿ. ಹಾಗಾಗಿ ಈ ಅವಕಾಶ ಸಿಕ್ಕಾಗ ಬೇಡ ಎನ್ನಲಿಲ್ಲ. ಅಲ್ಲೂ ಒಳ್ಳೆಯ ರೆಸ್ಪಾನ್ಸ್ ಇದೆ. ಖುಷಿ ಆಗುತ್ತಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

GST ಸಿನಿಮಾದಲ್ಲಿ ಪ್ರೇಕ್ಷಕರು ಏನನ್ನು ನೋಡಬಹುದು? ಕಂಟೆಂಟ್‌ ಮುಖ್ಯ ಎಂದಿದ್ಯಾಕೆ ಸೃಜನ್‌ ಲೋಕೇಶ್‌?
ಸುದೀಪ್‌ 12 ದಿನ ಕೂತು ಸಿನಿಮಾ ಎಡಿಟ್‌ ಮಾಡಿಸಿದ್ರು: ‘ಫ್ಲರ್ಟ್’ ಕುರಿತು ಚಂದನ್ ಕುಮಾರ್ ನೇರ ಮಾತು