
ಅಜಯ್ ದೇವಗನ್ ಅಭಿನಯದ 'ದೃಶ್ಯಂ 3' ಹಿಂದಿ ಆವೃತ್ತಿಯ ಕ್ಲೈಮ್ಯಾಕ್ಸ್ ಟ್ವಿಸ್ಟ್‌ಗೆ ದೇಶಾದ್ಯಂತ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಆದರೆ ನೇರ ಕಥೆಯ ಲಿಂಕ್ ಇಲ್ಲದಿದ್ದರೂ ಕನ್ನಡಿಗರದ್ದೇ ಕಾರುಬಾರು ಎನ್ನುವುದು ಕೂತುಹಲಕರ ವಿಷಯ. ಏಕೆಂದರೆ ಚಿತ್ರದ ಕಥೆಗೂ ಕನ್ನಡದ 'ದೃಶ್ಯ 3' ಗೂ ನೇರ ಸಂಬಂಧವಿಲ್ಲದಿದ್ದರೂ, ಚಿತ್ರದ ಯಶಸ್ಸಿನ ಅಸಲಿ ಸೂತ್ರಧಾರಿಗಳು ಮತ್ತು ಕಿಂಗ್‌ಮೇಕರ್ಸ್ ನಮ್ಮ ಸ್ಯಾಂಡಲ್‌ವುಡ್ ಪ್ರತಿಭೆಗಳೇ ಆಗಿದ್ದಾರೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಬ್ಲಾಕ್‌ಬಸ್ಟರ್ 'ಅರಸು' ಮತ್ತು ಉಪೇಂದ್ರ ಅವರ 'ಕಬ್ಜ' ಚಿತ್ರದ ಮೂಲಕ ಕನ್ನಡಿಗರಿಗೆ ಆಪ್ತರಾಗಿರುವ ಶ್ರಿಯಾ ಶರಣ್, ಚಿತ್ರದಲ್ಲಿ ವಿಜಯ್ ಸಾಲಗಾಂವ್ಕರ್ ಪತ್ನಿ (ನಂದಿನಿ) ಪಾತ್ರದಲ್ಲಿ ಅದ್ಭುತವಾಗಿ ನಟಿಸಿ ಕಥೆಗೆ ಜೀವ ತುಂಬಿದ್ದಾರೆ. ಅಲ್ಲೇ ಚಿತ್ರದ ಸಸ್ಪೆನ್ಸ್ ಮೂಡ್ ಅನ್ನು ನೆಕ್ಸ್ಟ್ ಲೆವೆಲ್‌ಗೆ ಕೊಂಡೊಯ್ದಿರುವುದು ನಮ್ಮ ಹೆಮ್ಮೆಯ ಕನ್ನಡ ತಂತ್ರಜ್ಞ ರವಿ ಬಸ್ರೂರ್ ಅವರ ಹಿನ್ನೆಲೆ ಸಂಗೀತ. ಕೆಜಿಎಫ್ ಮತ್ತು ಸಲಾರ್ ನಂತರ ಬಾಲಿವುಡ್‌ನ ಈ ಬಿಗ್ ಫ್ರಾಂಚೈಸಿಗೆ ರವಿ ಬಸ್ರೂರ್ ಅವರೇ ಬೆನ್ನುಲುಬಾಗಿ ನಿಂತಿದ್ದಾರೆ.
ಚಿತ್ರದಲ್ಲಿ ಅತ್ಯಂತ ಪ್ರಮುಖವಾದ ಪಬ್ಲಿಕ್ ಪ್ರಾಸಿಕ್ಯೂಟರ್ ಪಾತ್ರದಲ್ಲಿ ಬೆಂಗಳೂರು ಮೂಲದ ಅದ್ಭುತ ನಟ ಪ್ರಕಾಶ್ ರಾಜ್ ಅಬ್ಬರಿಸಿದ್ದಾರೆ. ಇವರ ನಟನೆ ಚಿತ್ರದ ತೂಕವನ್ನು ಹೆಚ್ಚಿಸಿದೆ. ಒಟ್ಟಾರೆಯಾಗಿ ನಟನೆ (ಶ್ರಿಯಾ, ಪ್ರಕಾಶ್ ರಾಜ್) ಮತ್ತು ತಾಂತ್ರಿಕತೆ (ರವಿ ಬಸ್ರೂರ್) ಎರಡೂ ವಿಭಾಗದಲ್ಲೂ ಕನ್ನಡಿಗರೇ ಸದ್ದು ಮಾಡುತ್ತಿರುವುದರಿಂದ, 'ದೃಶ್ಯಂ 3' ಗೆಲುವಿನಲ್ಲಿ ಸ್ಯಾಂಡಲ್‌ವುಡ್ ಕೊಡುಗೆ ದೊಡ್ಡದಿದೆ. ಚಿತ್ರದ ಪ್ರತಿಯೊಂದು ಟ್ವಿಸ್ಟ್ ಹಾಗೂ ಕ್ಲೈಮ್ಯಾಕ್ಸ್ ದೃಶ್ಯಗಳು ಪ್ರೇಕ್ಷಕರಿಗೆ ರೋಮಾಂಚನ ನೀಡಲು ರವಿ ಬಸ್ರೂರ್ ಅವರ ಹಿನ್ನೆಲೆ ಸಂಗೀತವೇ ಪ್ರಮುಖ ಕಾರಣ. ಅವರ ಮ್ಯೂಸಿಕ್ ಸಿನಿಮಾದ ಸಸ್ಪೆನ್ಸ್ ಗ್ರಾಫ್ ಅನ್ನು ಇಡೀ ದೇಶವೇ ಮೆಚ್ಚಿಕೊಳ್ಳುವಂತೆ ಮಾಡಿದೆ.
ಕೇವಲ ಗ್ಲಾಮರ್ ಪಾತ್ರಗಳಿಗಷ್ಟೇ ಸೀಮಿತವಾಗದ ಶ್ರಿಯಾ ಶರಣ್, ಈ ಚಿತ್ರದಲ್ಲಿ ಇಬ್ಬರು ಹೆಣ್ಣುಮಕ್ಕಳ ತಾಯಿಯಾಗಿ, ಪೊಲೀಸರ ತನಿಖೆಯಿಂದ ನಲುಗುವ ನಂದಿನಿ ಪಾತ್ರದ ಭಯ ಮತ್ತು ಧೈರ್ಯವನ್ನು ಅತ್ಯದ್ಭುತವಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಪ್ರಕಾಶ್ ರಾಜ್ ಮತ್ತು ಅಜಯ್ ದೇವಗನ್ ಮುಖಾಮುಖಿಯಾಗುವ ದೃಶ್ಯಗಳು ಹಾಗೂ ಕೋರ್ಟ್‌ರೂಮ್ ಡ್ರಾಮಾದಲ್ಲಿ ಪ್ರಕಾಶ್ ರಾಜ್ ಅವರ ನಟನಾ ಚಾತುರ್ಯ ಚಿತ್ರದ ಅತಿ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಇತ್ತೀಚಿನ ದಿನಗಳಲ್ಲಿ ಹಿಂದಿ ಚಿತ್ರರಂಗದ ದೊಡ್ಡ ಬ್ಯಾನರ್ ಸಿನಿಮಾಗಳ ಗೆಲುವಿಗೆ ಸ್ಯಾಂಡಲ್‌ವುಡ್‌ನ ನಟರು ಹಾಗೂ ತಂತ್ರಜ್ಞರ ದೈತ್ಯ ಪ್ರತಿಭೆಗಳು ಅನಿವಾರ್ಯವಾಗುತ್ತಿರುವುದಕ್ಕೆ 'ದೃಶ್ಯಂ 3' ಮತ್ತೊಂದು ಅತ್ಯುತ್ತಮ ಉದಾಹರಣೆಯಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.