ಪತ್ನಿಗೆ ನಾಯಿ ಪಾತ್ರೆಯಲ್ಲಿ ನೀರು ಕುಡಿಯುವ ಟಾಸ್ಕ್ ! ಯೂಟ್ಯೂಬರ್ ಸೌರವ್ ಜೋಶಿ ಟ್ರೋಲ್

Published : Oct 15, 2026, 03:44 PM IST
Sourav Joshi

ಸಾರಾಂಶ

Sourav Joshi video : ಪ್ರಸಿದ್ಧ ಯೂಟ್ಯೂಬರ್‌ ಸೌರವ್ ಜೋಶಿ ಮತ್ತೊಮ್ಮೆ ಟ್ರೋಲ್‌ ಆಗಿದ್ದಾರೆ. ಈ ಬಾರಿ ಅವರು ಪತ್ನಿಗೆ ನೀಡಿದ ಟಾಸ್ಕ್‌ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.

ಜನಪ್ರಿಯ ಯೂಟ್ಯೂಬರ್ ಸೌರವ್ ಜೋಶಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದಾರೆ. ಪತ್ನಿ ಅವಂತಿಕಾ ಜೊತೆ ಅವರು ಆಡಿದ ಟ್ರೂತ್ ಆ್ಯಂಡ್ ಡೇರ್ ಆಟವೇ ಇದಕ್ಕೆ ಕಾರಣ. ಈ ಆಟದಲ್ಲಿ ಸೌರವ್ ನೀಡಿದ ಟಾಸ್ಕ್‌ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ನಾಯಿ ಪಾತ್ರೆಯಲ್ಲಿ ನೀರು ಕುಡಿಯುವ ಟಾಸ್ಟ್

ಸೌರವ್ ಜೋಶಿ ತಮ್ಮ ಪತ್ನಿ ಅವಂತಿಕಾ ಜೊತೆ ಟ್ರೂತ್ ಆ್ಯಂಡ್ ಡೇರ್ ಆಟ ಆಡಿದ್ದಾರೆ. ಈ ವೇಳೆ ಅವಂತಿಕಾಗೆ ತಮ್ಮ ಮನೆಯ ನಾಯಿಯ ಪಾತ್ರೆಯಿಂದ ನೀರು ಕುಡಿಯುವಂತೆ ಸೌರವ್ ಡೇರ್ ನೀಡಿದ್ದಾರೆ. ಇದನ್ನು ಕೇಳಿದ ಆರಂಭದಲ್ಲಿ ಅವಂತಿಕಾ ಕೋಪ ಮತ್ತು ಹಿಂಜರಿಕೆ ವ್ಯಕ್ತಪಡಿಸಿದ್ದಾರೆ. ನಂತ್ರ ಸವಾಲನ್ನು ಸ್ವೀಕರಿಸಿ ನಾಯಿಯ ಪಾತ್ರೆಯಿಂದ ನೀರು ಕುಡಿದಿದ್ದಾರೆ. ಪಾತ್ರೆ ಕ್ಲೀನ್‌ ಆಗಿದೆ, ಪಾತ್ರೆಯಲ್ಲಿರುವ ನೀರನ್ನು ಬದಲಿಸಲಾಗಿದೆ, ಒಂದು ಸಿಪ್‌ ನೀರು ಕುಡಿಯಿರಿ ಅಂತ ಸೌರವ್, ಪತ್ನಿಗೆ ಹೇಳುತ್ತಿರೋದನ್ನು ವಿಡಿಯೋದಲ್ಲಿ ಕೇಳ್ಬಹುದು. ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹಲವರು ಸೌರವ್ ಅವರ ವರ್ತನೆಯನ್ನು ಪ್ರಶ್ನಿಸುತ್ತಿದ್ದಾರೆ.

ಸೌರವ್ ವಿರುದ್ಧ ನೆಟ್ಟಿಗರ ಆಕ್ರೋಶ

ಈ ವಿಡಿಯೋಗೆ ಸಂಬಂಧಿಸಿದಂತೆ ಹಲವು ಬಳಕೆದಾರರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಇದು ತಮಾಷೆಯಲ್ಲ, ಇಂತಹ ವರ್ತನೆಯನ್ನು ಮನರಂಜನೆ ಎಂದು ಹೇಗೆ ಪರಿಗಣಿಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಒಬ್ಬ ಬಳಕೆದಾರರು, ವಿಡಿಯೋ ಸ್ಕ್ರಿಪ್ಟೆಡ್ ಆಗಿದ್ದರೂ ಅವರ ಪ್ರೇಕ್ಷಕರಲ್ಲಿ ಯುವಜನರಿದ್ದಾರೆ. ಇಂತಹ ಕಳಪೆ ಕಂಟೆಂಟ್ ಅನ್ನು ಸಾಮಾನ್ಯವೆಂದು ಬಿಂಬಿಸಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನೊಬ್ಬರು, ಇದು ಸ್ವಲ್ಪವೂ ತಮಾಷೆಯಾಗಿಲ್ಲ. ಇಂತಹ ವಿಷಯವನ್ನು ಮನರಂಜನೆಯಾಗಿ ತೋರಿಸುವುದು ಸರಿಯಲ್ಲ ಎಂದಿದ್ದಾರೆ. ಈ ವರ್ತನೆ ಮಿತಿಮೀರಿದೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯಾರು ಈ ಸೌರವ್ ಜೋಶಿ?

ಸೌರವ್ ಜೋಶಿ ಜನಪ್ರಿಯ ಯೂಟ್ಯೂಬರ್ ಆಗಿದ್ದು, ತಮ್ಮ ದೈನಂದಿನ ಜೀವನದ ವಿಡಿಯೋಗಳ ಮೂಲಕ ಪರಿಚಿತರಾಗಿದ್ದಾರೆ. ಕುಟುಂಬದ ಕ್ಷಣಗಳು, ಪ್ರವಾಸದ ಅನುಭವಗಳು ಸೇರಿದಂತೆ ಹಲವು ವಿಷಯಗಳನ್ನು ತಮ್ಮ ವ್ಲಾಗ್ಗಳಲ್ಲಿ ಹಂಚಿಕೊಳ್ಳುತ್ತಾರೆ. 2019ರಲ್ಲಿ ವ್ಲಾಗಿಂಗ್ ಆರಂಭಿಸಿದ್ದರು. ಸೌರವ್ ಮತ್ತು ಅವಂತಿಕಾ 2025ರ ನವೆಂಬರ್ನಲ್ಲಿ ವಿವಾಹವಾಗಿದ್ದರು. ಅವರ ಮದುವೆ ಅದ್ಧೂರಿಯಾಗಿ ನಡೆದಿದ್ದು, ಮದುವೆಯ ವಿವಿಧ ಕಾರ್ಯಕ್ರಮಗಳ ವಿಡಿಯೋಗಳನ್ನು ಯೂಟ್ಯೂಬ್ನಲ್ಲಿ ಹಂಚಿಕೊಂಡಿದ್ದರು. ಮದುವೆಗೆ ಮೊದಲು ಅವಂತಿಕಾ ಅವರ ಗುರುತನ್ನು ಗೌಪ್ಯವಾಗಿಟ್ಟಿದ್ದ ಸೌರವ್, ಮದುವೆಯ ಬಳಿಕ ಪತ್ನಿಯೊಂದಿಗೆ ವ್ಲಾಗ್ಗಳನ್ನು ಮಾಡುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Prahaar: ನಾಳೆ ತೆರೆಗೆ ಬರಲಿದೆ ಮತ್ತೊಂದು ದುರಂಧರ್‍‌; ಬರೀ ಡೈಲಾಗ್ಸ್ ಅಲ್ಲ, ನೈಜ ಸಾಕ್ಷ್ಯಗಳ ಪ್ರಹಾರ ಎನ್ನಲು ಕಾರಣವೇನು?
ಕನ್ನಡದಲ್ಲೇ ‘ಪ್ರೇಮದ ಊರಲಿ’ ನೋಡ್ತೀನಿ ಎಂದ ವಿಜಯ್: ತಪಸ್ವಿನಿಗೆ ರಶ್ಮಿಕಾ ಕೊಟ್ಟ ಮಾತು ವೈರಲ್!