
ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ‘ರಣಬಾಲಿ’ ಸಿನಿಮಾ ಅಕ್ಟೋಬರ್ 16ರಂದು ತೆರೆಗೆ ಬರಲು ಸಜ್ಜಾಗಿದೆ. ‘ಗೀತ ಗೋವಿಂದ’ ಹಾಗೂ ‘ಡಿಯರ್ ಕಾಮ್ರೇಡ್’ ಬಳಿಕ ಮತ್ತೊಮ್ಮೆ ಈ ಜೋಡಿ ಒಂದಾಗಿರುವುದರಿಂದ ಸಿನಿಮಾದ ಮೇಲಿನ ನಿರೀಕ್ಷೆಯೂ ಹೆಚ್ಚಾಗಿದೆ. ಇದೇ ವೇಳೆ ಸಿನಿಮಾದ ಪ್ರಚಾರದ ಭಾಗವಾಗಿ ನೀಡಿದ ಸಂದರ್ಶನವೊಂದರಲ್ಲಿ ನಡೆದ ಒಂದು ವಿಶೇಷ ಸಂಭಾಷಣೆ ಇದೀಗ ಗಮನ ಸೆಳೆಯುತ್ತಿದೆ.
ಆ್ಯಂಕರ್ ಅನುಶ್ರೀ ಅವರ ಯೂಟ್ಯೂಬ್ ಚಾನೆಲ್ಗೆ ವಿಜಯ್ ಹಾಗೂ ರಶ್ಮಿಕಾ ಸಂದರ್ಶನ ನೀಡಿದ್ದಾರೆ. ಈ ವೇಳೆ ತಪಸ್ವಿನಿಗೆ ಅನುಶ್ರೀ ಕರೆ ಮಾಡಿದರು. ಜೊತೆಗೆ ಅನುಶ್ರೀ, ಕೊಡಗಿನ ತಪಸ್ವಿನಿ ಅವರನ್ನು ವಿಜಯ್ ಹಾಗೂ ರಶ್ಮಿಕಾ ಜೊತೆ ಮಾತನಾಡಿಸಿದ್ದಾರೆ. ವಿಶೇಷವೆಂದರೆ, ತಪಸ್ವಿನಿ ಕೂಡ ಕೊಡಗಿನವರೇ ಎಂಬುದು ಮಾತುಕತೆಯ ನಡುವೆಯೇ ರಶ್ಮಿಕಾಗೆ ತಿಳಿದುಬಂದಿದೆ. ತಪಸ್ವಿನಿ ರಶ್ಮಿಕಾ ಜೊತೆ ಕೊಡವ ಭಾಷೆಯಲ್ಲಿ ಮಾತನಾಡುತ್ತಿದ್ದಂತೆ ಇಬ್ಬರ ನಡುವೆ ಆತ್ಮೀಯ ಮಾತುಕತೆ ನಡೆದಿದೆ.
ಸಿನಿಮಾ ನೋಡುತ್ತೇನೆ
ಈ ವೇಳೆ ಮೈಸೂರಿಗೆ ಅಥವಾ ಕೊಡಗಿಗೆ ಬಂದಾಗ ಖಂಡಿತವಾಗಿಯೂ ಭೇಟಿಯಾಗುವುದಾಗಿ ರಶ್ಮಿಕಾ ತಪಸ್ವಿನಿಗೆ ಭರವಸೆ ನೀಡಿದ್ದಾರೆ. ಇದರ ನಡುವೆ ತಪಸ್ವಿನಿ ಅಭಿನಯದ ‘ಪ್ರೇಮದ ಊರಲಿ’ ಸಿನಿಮಾ ಕೂಡ ಮಾತಿನ ವಿಷಯವಾಗಿದೆ. ಚಿತ್ರವನ್ನು ವಿಜಯ್ ನೋಡಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ‘ಸಿನಿಮಾ ನೋಡುತ್ತೇನೆ’ ಎಂದು ಹೇಳಿದಾಗ, ತಪಸ್ವಿನಿ ಚಿತ್ರ ತೆಲುಗಿನಲ್ಲಿ ರಿಲೀಸ್ ಆಗಿದ್ದು ಹೈದರಾಬಾದ್ನಲ್ಲಿ ವೀಕ್ಷಿಸಬಹುದು ಎಂದು ತಿಳಿಸಿದ್ದಾರೆ.
ಆದರೆ ವಿಜಯ್ ನೀಡಿದ ಉತ್ತರವೇ ಎಲ್ಲರ ಗಮನ ಸೆಳೆದಿದೆ. 'ನಾನು ಕನ್ನಡದಲ್ಲೇ ನೋಡುತ್ತೇನೆ, ಸಬ್ಟೈಟಲ್ ಜೊತೆ ನೋಡುತ್ತೇನೆ. ನನಗೆ ನಿಮ್ಮ ರಿಯಲ್ ವಾಯ್ಸ್ ಕೇಳಬೇಕು' ಎಂದು ವಿಜಯ್ ಹೇಳಿದ್ದಾರೆ. ವಿಜಯ್ ಅವರ ಈ ಮಾತಿಗೆ ತಪಸ್ವಿನಿ ಸಂತಸಗೊಂಡಿದ್ದಾರೆ. ಅಷ್ಟೇ ಅಲ್ಲ, ‘ಪ್ರೇಮದ ಊರಲಿ’ ಚಿತ್ರದ ಕುರಿತು ಟ್ವೀಟ್ ಮಾಡುವಂತೆ ವಿಜಯ್ ಬಳಿ ಮನವಿ ಮಾಡಲಾಗಿದೆ. ಈ ಮಾತುಕತೆಯ ಬೆನ್ನಲ್ಲೇ ರಶ್ಮಿಕಾ ಕೂಡ ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಕುರಿತು ಸ್ಟೇಟಸ್ ಹಂಚಿಕೊಂಡಿದ್ದಾರೆ.
ರಶ್ಮಿಕಾ ಹಂಚಿಕೊಂಡ ಸ್ಟೇಟಸ್ ಕೂಡ ಅಭಿಮಾನಿಗಳ ಗಮನ ಸೆಳೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದೀಗ ‘ಪ್ರೇಮದ ಊರಲಿ’ ಚಿತ್ರದ ಬಗ್ಗೆ ವಿಜಯ್ ತೋರಿಸಿರುವ ಆಸಕ್ತಿ ಹಾಗೂ ರಶ್ಮಿಕಾ ನೀಡಿರುವ ಬೆಂಬಲಕ್ಕೆ ತಪಸ್ವಿನಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಇನ್ನು ‘ರಣಬಾಲಿ’ ಚಿತ್ರದ ಪ್ರಚಾರದ ನಡುವೆ ನಡೆದ ಈ ಸಣ್ಣ ಸಂಭಾಷಣೆ ‘ಪ್ರೇಮದ ಊರಲಿ’ ಸಿನಿಮಾಕ್ಕೂ ಹೊಸ ಗಮನ ಸೆಳೆಯುವಂತಾಗಿದೆ. ವಿಜಯ್ ನಿಜವಾಗಿಯೂ ಕನ್ನಡದಲ್ಲೇ ಸಿನಿಮಾ ವೀಕ್ಷಿಸುತ್ತಾರಾ ಎಂಬ ಕುತೂಹಲವೂ ಇದೀಗ ಹೆಚ್ಚಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.