ಡಾ.ರಾಜ್ ಸಿನಿಮಾದ ಹೀರೋಯಿನ್ ಆಯ್ಕೆ ಕ್ರಿಡಿಟ್ ಯಾರಿಗೆ? ನಿರ್ದೇಶಕ ಬಿಚ್ಚಿಟ್ಟ ಸಕ್ಸಸ್ ಸ್ಟೋರಿ

Published : Nov 12, 2026, 07:50 PM IST
Dr Rajkumar

ಸಾರಾಂಶ

ಕನ್ನಡ ಹಾಗೂ ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ದಾಖಲೆಯ ಹಿಟ್ ಸಿನಿಮಾ, ದಾಖಲೆ ಕಲೆಕ್ಷನ್ ನೀಡಿದ ಯಶಸ್ವಿ ಹೀರೋ ಡಾ.ರಾಜ್ ಕುಮಾರ್. ಅಣ್ಣಾವ್ರ ಸಿನಿಮಾ ಕತೆಗೆ ತಕ್ಕಂತೆ ನಾಯಕರಿ ಇರುತ್ತಿದ್ದರು. ರಾಜ್ ಸಿನಿಮಾ ಯಶಸ್ಸಿನಲ್ಲಿ ನಾಯಕಿಯರ ಪಾತ್ರವೂ ಪ್ರಮುಖವಾಗಿದೆ. ಸಿನಿಮಾಗೆ ನಾಯಕರಿ ಆಯ್ಕೆ ಮಾಡುತ್ತಿದ್ದವರು ಯಾರು?

ಬೆಂಗಳೂರು (ನ.12) ಕನ್ನಡ ಸಿನಿಮಾದಲ್ಲಿ ಡಾ.ರಾಜ್‌ಕುಮಾರ್ ಹಲವು ದಶಕಗಳ ಕಾಲ ಸತತವಾಗಿ ಯಶಸ್ವಿ, ಸೂಪರ್ ಹಿಟ್ ಸಿನಿಮಾ ಕೊಟ್ಟ ಸೂಪರ್ ಹಿರೋ. ಡಾ.ರಾಜ್ ಕುಮಾರ್. ಡಾ.ರಾಜ್ ಕುಮಾರ್ ಸಿನಿಮಾದಲ್ಲಿ ಡಾ.ರಾಜ್ ಜೊತೆ ನಾಯಕಿಯರ ಪಾತ್ರವೂ ಅಷ್ಟೇ ಮುಖ್ಯವಾಗಿತ್ತು. ಹಿಟ್ ಕಾಂಬಿನೇಷನ್‌ಗಳ ಟ್ರೆಂಡ್ ಸೇರಿದಂತೆ ಹಲವು ಟ್ರೆಂಡ್ ಡಾ.ರಾಜ್ ಹುಟ್ಟುಹಾಕಿದ್ದಾರೆ. ವಿಶೇಷ ಅಂದರೆ ಡಾ.ರಾಜ್ ಕುಮಾರ್ ಯಾವ ಕತೆ ಆಯ್ಕೆ ಮಾಡಿಕೊಳ್ಳಬೇಕು ಅನ್ನೋದನ್ನು ಪಾರ್ವತಮ್ಮ ರಾಜ್‌ಕುಮಾರ್ ನಿರ್ಧರಿಸುತ್ತಿದ್ದರು ಅನ್ನೋದು ಹಲವರು ದಿಗ್ಗಜರು ಬಹಿರಂಗಪಡಿಸಿದ್ದಾರೆ. ಆದರೆ ಡಾ.ರಾಜ್ ಸಿನಿಮಾಗೆ ಹಿರೋಯಿನ್ ಆಯ್ಕೆ ಕೂಡ ವಿಶೇಷವಾಗಿತ್ತು.

ಪಾರ್ವತಮ್ಮಗೆ ಎಲ್ಲಾ ಕ್ರೆಡಿಟ್

ಡಾ.ರಾಜ್‌ಕುಮಾರ್ ಸಿನಿಮಾಗೆ, ಪಾತ್ರಕ್ಕೆ ತಕ್ಕಂತೆ ಯಾವ ಹಿರೋಯಿನ್ ಇರಬೇಕು, ಯಾರು ಸೂಕ್ತ ಅನ್ನೋದನ್ನು ಪಾರ್ವತಮ್ಮ ರಾಜ್‌ಕುಮಾರ್ ಮಾಡುತ್ತಿದ್ದರು. ಇದರ ಸಂಪೂರ್ಣ ಕ್ರೆಡಿಟ್ ಪಾರ್ವತಮ್ಮ ರಾಜ್‌ಕುಮಾರ್‌ಗೆ ಸಲ್ಲಬೇಕು ಎಂದು ಖ್ಯಾತ ನಿರ್ದೇಶಕ ಹೆಚ್ಆರ್ ಭಾರ್ಗವ್ ಹೇಳಿದ್ದಾರೆ. ವಿಷಯದ ಆಯ್ಕೆ, ನಾಯಕಿಯರ ಆಯ್ಕೆಯಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ಎತ್ತಿದ ಕೈ. ಅವರ ನಿರ್ಧಾರ ಅಷ್ಟು ಪರ್ಫೆಕ್ಟ್ ಆಗಿರುತ್ತಿತ್ತು. ಹೀಗಾಗಿಯೇ ಹಲವು ಹೊಸ ಮುಖಗಳಿಗೂ ಪಾರ್ವತಮ್ಮ ರಾಜ್‌ಕುಮಾರ್ ಅವಕಾಶ ನೀಡಿ ಅವರನ್ನು ಟಾಪ್ ಹಿರೋಯಿನ್ ಮಾಡಿದ್ದಾರೆ ಎಂದು ಭಾರ್ಗವ್ ಹೇಳಿದ್ದಾರೆ.

ಕತೆ, ನಾಯಕಿಯರ ಆಯ್ಕೆಯಲ್ಲಿ ಪಾರ್ವತಮ್ಮ ರಾಜ್‌ಕುಮಾರ್‌ಗೆ ದೂರದೃಷ್ಟಿ ಇತ್ತು. ಡಾ.ರಾಜ್ ಜೊತೆ ನಾಯಕಿಯಾಗಿ ಯಾವ ಪಾತ್ರಕ್ಕೆ ಯಾರು ಸೂಕ್ತ ಅನ್ನೋದನ್ನು ಪಾರ್ವತಮ್ಮ ರಾಜ್‌ಕುಮಾರ್ ನಿಖರವಾಗಿ ಹೇಳುತ್ತಿದ್ದರು. ಕೆಲ ಸಿನಿಮಾಗಳಿಗೆ ಹೊಸ ಮುಖಗಳನ್ನು ಆಯ್ಕೆ ಮಾಡಿದ್ದರು. ನಿರ್ಮಾಪಕ, ನಿರ್ದೇಶಕರಿಗೂ ಆತಂಕವಾಗಿತ್ತು. ಆದರೆ ಸಿನಿಮಾ ಬಿಡುಗಡೆಯಾದಾಗ ಪಾರ್ವತಮ್ಮ ನಿರ್ಧಾರವೇ ಸರಿ ಎಂದು ಸಾಬೀತಾಗುತ್ತಿತ್ತು ಎಂದು ಭಾರ್ಗವ್ ಹೇಳಿದ್ದಾರೆ.

ಸ್ಟಾರ್ ನಟಿಯರ ಜೊತೆ ಹೊಸ ಮುಖಗಳಿಗೆ ಅವಕಾಶ

ವಜ್ರೇಶ್ವರಿ ಕಂಬೈನ್ಸ್ ಕೇವಲ ಸ್ಟಾರ್ ನಟಿಯರಿಗೆ ಮಾತ್ರ ಅವಕಾಶ ನೀಡಿಲ್ಲ, ಮಾಲಾಶ್ರಿ, ಸುಧಾರಾಣಿ, ಪ್ರೇಮಾ, ರಕ್ಷಿತಾ, ರಮ್ಯಾ, ಅನು ಪ್ರಭಾಕರ್ ಸೇರಿದಂತೆ ಹಲವು ಹೊಸ ನಾಯಕಿಯರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದು ಮಾತ್ರವಲ್ಲ, ಸ್ಟಾರ್ ನಟಿಯರನ್ನಾಗಿ ಮಾಡಿದ ಕೀರ್ತಿ ಕೂಡ ಪಾರ್ವತಮ್ಮ ರಾಜ್‌ಕುಮಾರ್‌ಗೆ ಸಲ್ಲಲಿದೆ.

ಕೇವಲ ಭಾರ್ಗವ್ ಮಾತ್ರವಲ್ಲ ಸಂಗೀತಂ ಶ್ರೀನಿವಾಸ್ ರಾವ್ ಸೇರಿದಂತೆ ಹಲವು ನಿರ್ದೇಶಕರು ಪಾರ್ವತಮ್ಮ ರಾಜ್‌ಕುಮಾರ್ ಅವರ ಕತೆ ಕೇಳುವ ಜಾಣ್ಮೆ, ನಟಿಯರ ಆಯ್ಕೆ ಕುರಿತು ಮುಕ್ತಕಂಠದಿಂದ ಹೊಗಳಿದ್ದಾರೆ. ಡಾ.ರಾಜ್ ಸಿನಿಮಾಗಳು ಎವರ್‌ಗ್ರೀನ್ ಸಿನಿಮಾ ಆಗಿ ದಾಖಲೆ ಬರೆದಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸದ್ದಿಲ್ಲದೇ ಮದ್ವೆಯಾಗಿ ಫೋಟೋ ಮೂಲಕ ಫ್ಯಾನ್ಸ್​ಗೆ Lakshmi Nivasa ಚೆಲುವಿ ಶಾಕ್​: ಯಾರೀ ರಹಸ್ಯ ಪತಿ?
ಯಶ್ ಜೊತೆಗಿನ ಇಂಟಿಮೇಟ್ ಸೀನ್‌ಗೆ ಟ್ರೋಲ್; ಕೊನೆಗೂ ಮೌನ ಮುರಿದ ಕಿಯಾರಾ ಅಡ್ವಾಣಿ!