
ಜಗ್ಗೇಶ್ ನವರಸ ನಾಯಕನಾಗಿ, ಸಿನಿಮಾ ಹೀರೋ ಆಗಿ ಸಿನಿಮಾ ನೋಡಿಲ್ಲ. ಪಕ್ಕಾ ಲೋಕಲ್ ಮನುಷ್ಯನಾಗಿ, ಸಾದಾ ಸೀದಾ ಹುಡುಗನಾಗಿ ಕೆಜಿಎಫ್ ಆಸ್ವಾದಿಸಿದ್ದಾರೆ. ಅದಕ್ಕೆ ಕಾರಣ ಏನು ಎಂಬುದನ್ನು ಅವರೇ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಸಿನಿಮಾ ನೋಡಿದ ಅನುಭವ ಹಂಚಿಕೊಂಡಿದ್ದಾರೆ.
ಅವರ ಮಾತಿನಲ್ಲೇ ಕೆಜಿಎಫ್ ಸಿನಿಮಾ ಸಂಭ್ರಮ ಕೇಳಿಕೊಂಡು ಬನ್ನಿ... ‘ನನ್ನಪಕ್ಕ ಸುಮಾರು 17 ವರ್ಷದ ಹುಡುಗ ಹೋಟೆಲ್ ಸರ್ವರ್ ಕೂತಿದ್ದ! ಅವನ ಜೊತೆ ದನಿ ಬದಲಾಯಿಸಿ ನಡುನಡುವೆ ಚರ್ಚಿಸುತ್ತಿದೆ ಪ್ರತಿಪ್ರಶ್ನೆಗೆ ಅವನ ಉತ್ತರ ಚಿಂದಿ ಅನ್ನುತ್ತಿದ್ದ! ಅವನು ಪಕ್ಕ ದರ್ಶನ ಅಭಿಮಾನಿ ಅಂತೆ! ಅವನು ಹೇಳಿದ ಮಾತು ಕಣ್ಣುಒದ್ದೆಯಾಯಿತು! ಕನ್ನಡ ಗೆಲ್ಲಬೇಕು ಸಾರ್ ಮಗಂದು ಬರಿ ಬೇರೆ ಭಾಷೆಗೆ ಜೈಅಂತಾರೆ ಈಗ ಅವರ ಪುಂಗಿಬಂದ್ ಅಂದ’
ಜೋಗಿ ಪ್ರಕಾರ KGF ನೋಡಲು 10 ಕಾರಣಗಳು...
ಲುಂಗಿ ಹವಾಯ್ ಚಪ್ಪಲಿ ಮಂಕಿಕ್ಯಾಪ್ ಹಾಕಿ ಬಹಳ ದಿನದ ನಂತರ ಒಬ್ಬನೆ ಮುಂದಿನ ಕ್ಲಾಸ್ಗೆ ಹೋಗಿ ಕೆಜಿಎಫ್ ನೋಡಿದೆ..38ವರ್ಷದ ಹಿಂದೆ ನಾನು ಹೀಗೆ ಸಿನಿಮಾಗೆ ಹೋಗುತ್ತಿದ್ದದ್ದು! ಹಾಗೆ ಹೋದದ್ದು ಸಾಮಾನ್ಯ ಜೀವನ ಎಂಜಾಯ್ ಮಾಡಲು..ಕಾರಾಪುರಿ ಟೀ ಮಧ್ಯಂತರದಲ್ಲಿ ಮಜನೀಡಿತು..ಯಾರು ಗುರುತು ಹಿಡಿಯದಂತೆ ಜಾಗ್ರತೆ ವಹಿಸಿದೆ ಕಾರಣ ಏಕಾಂತ ಎಂಬ ಎಂಜಾಯ್‌ಮೆಂಟ್!
ಆರಂಭದಿಂದ ಅಂತ್ಯದವರೆಗೆ ಕೆಜಿಎಫ್ ಕತೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.