
ಬೆಂಗಳೂರು[ಡಿ.24] ಡಿಸೆಂಬರ್ ಅಂತ್ಯಕ್ಕೆ ಹೊಂಗೆ ಮರ ಹೂ ಬಿಟ್ಟಿದೆ.. ಹೌದು ಯೋಗರಾಜ್ ಭಟ್ಟರ ಸಾಹಿತ್ಯಕ್ಕೆ ಹರಿಕೃಷ್ಣ ಸಂಗೀತ.. ಸದಭಿರುಚಿಯ ಕೇಳುಗರಿಗೆ ಇನ್ನೇನು ಬೇಕು.. ಇದನ್ನು ಹೊಸ ವರ್ಷದ ಗಿಫ್ಟ್ ಎಂದು ಹೇಳಲು ಯಾವುದೇ ಅಡ್ಡಿ ಇಲ್ಲ.
ಪಂಚತಂತ್ರ ಚಿತ್ರಕ್ಕಾಗಿ ನಿರ್ದೇಶಕ ಯೋಗರಾಜ್ ಭಟ್ 'ಶೃಂಗಾರದ ಹೊಂಗೆಮರ ಹೂ ಬಿಟ್ಟಿದೆ' ಎಂಬ ಹಾಡನ್ನು ಬರೆದಿದ್ದು ಡಿಸೆಂಬರ್ 25 ಮಂಗಳವಾರ ಅನಾವರಣ ಆಗಿದೆ. ಕನ್ನಡದ ಸೂಪರ್ ಹಿಟ್ ಹಾಡುಗಳ ಪಟ್ಟಿಗೆ ಸೇರುವ ಅಷ್ಟೂ ಗುಣ ಮೈಗೂಡಿಸಿಕೊಂಡಿದೆ.
‘ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ..
ನಾಚಿಕೆ ನಮ್ಮ ಜತೆ ಟೂ ಬಿಟ್ಟಿದೆ
ಕಳ್ಳಾಟಕೆ ಮಳ್ಳಾಮನ ಛೀ ಎಂದಿದೆ
ಚೆಲ್ಲಾಟಕೆ ಚೆಲುವು ಹೂಂ ಎಂದಿದೆ
ಇಬ್ಬರ ಕಾಮನೆ ನೂರು
ತುಟಿಯಾಟಕೆ ಕಾರಣ ಯಾರು?
ಇದು ಗೊತ್ತಿಲ್ಲದ ರೋಮಾಂಚನ
ಹೋಗಿ ಬಂತು ಪ್ರಾಣ..!
ಭಟ್ಟರ ಪ್ರೇಮಗೀತೆಗಳಿಗೆ ಪ್ರೇರಣೆಯಾದ 'ಆಕೆ’ ಯಾರು?
ಬೆನ್ನಿಗೆ ಬೆರಳು ಸೋಕಿ
ಕಣ್ಣೆರಡು ಕೇಳಿವೆ ಬಾಕಿ
ಇದು ತುಂಟ ಮೌನಾಚರಣೆಯು..!
ಸ್ಪರ್ಶವು ಕೇಳಲು ಕೊಂಚ
ಉಷ್ಣಾಂಶದ ಬೆಚ್ಚನೆ ಲಂಚ
ಶುರು ಜಂಟಿ ಕಾರ್ಯಾಚರಣೆಯು..!
ಗೊತ್ತಿದ್ದು ದಾರಿ ತಪ್ಪಿದಾಗ ಬೆವರಿನ ಹನಿಯು
ಹುಚ್ಚೆದ್ದು ಹಾಡು ಹೇಳಬಹುದೆ ಒಳಗಿನ ದನಿಯು?
ಇದು ಆವೇಗದ ಆಲಿಂಗನ
ಹೋಗಿ ಬಂತು ಪ್ರಾಣ..!
ನಲ್ಮೆಯೆಲ್ಲವೂ ಚೆಂದ
ಮನ್ಮಥನ ಹಾವಳಿಯಿಂದ
ಬಚಾವಾದರೇನೂ ಸುಖವಿದೆ
ಬಿಚ್ಚಿದ ಕೂದಲ ಘನತೆ
ಅರೆ ಮುಚ್ಚಿದ ಕಂಗಳ ಕವಿತೆ
ಪ್ರಣಯಕ್ಕೊಂದು ಬೇರೆ ಮುಖವಿದೆ!!
ಕಡುಮೋಹದಲ್ಲಿ ಗಡಿಯ ರೇಖೆಗೆಲ್ಲಿದೆ ಬೆಲೆಯು?
ತಿಳಿಗೇಡಿಯಾದೇನೆ ಸಿಗದು ತೋಳಿಗೆ ನೆಲೆಯು!
ರತಿ ರಂಗೇರಲು ಪ್ರತಿಕ್ಷಣಹೋಗಿಬಂತು ಪ್ರಾಣ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.