ಬಾತ್‌ರೂಂನಲ್ಲಿ ಬಿದ್ದು ಗಂಭೀರ ಗಾಯಗೊಂಡ ಆ್ಯಕ್ಷನ್ ಫಿಲ್ಮ್ ಸರದಾರ ಕೊನೆಯುಸಿರು, ಸಿನಿರಂಗಕ್ಕೆ ಶಾಕ್

Published : Oct 31, 2026, 02:13 PM IST
Filmmaker Sanjay Gupta Dies

ಸಾರಾಂಶ

ಕಾಂತೆ, ಮುಸಾಫಿರ್, ಶೂಟೌಟ್ ಎಟ್ ವಡಾಲ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾ ನಿರ್ದೇಶಿಸಿದ ಸಂಜಯ್ ಗುಪ್ತಾ ತಲೆಗೆ ಗಂಭೀರ ಗಾಯಗೊಂಡು ನಿಧನರಾಗಿದ್ದಾರೆ. ಸಂಜಯ್ ಗುಪ್ತಾ ನಿಧನ ಸಿನಿಮಾ ಲೋಕಕ್ಕೆ ಆಘಾತ ನೀಡಿದೆ.

ಮುಂಬೈ (ಅ.31) ಬಾತ್‌ರೂಂನಲ್ಲಿ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಖ್ಯಾತ ನಿರ್ದೇಶಕ ಸಂಜಯ್ ಗುಪ್ತ ನಿಧನರಾಗಿದ್ದಾರೆ. 57ರ ಹರೆಯದ ಸಂಜಯ್ ಗುಪ್ತಾ, ಬಾಲಿವುಡ್‌ನ ಸೂಪರ್ ಹಿಟ್ ಸಿನಿಮಾಗಳಾದ ಕಾಂತೆ, ಮುಸಾಫಿರ್, ಶೂಟೆಟ್ ಎಟ್ ವಡಾಲಾ ಸೇರಿದಂತೆ ಹಲವು ಸಿನಿಮಾ ನಿರ್ದೇಶಿಸಿದ್ದಾರೆ. ಪತ್ನಿ ಮಕ್ಕಳ ಜೊತೆಗಿದ್ದ ಸಂಜಯ್ ಗುಪ್ತ ಬಾತ್‌ರೂಂಗೆ ತೆರಳಿ ಕಾಲು ಜಾರಿ ಬಿದ್ದಿದ್ದಾರೆ. ತಲೆಗೆ ಗಂಭೀರಗಾಯಗೊಂಡ ಸಂಜಯ್ ಗುಪ್ತಾರನ್ನು ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ.

ಮಧ್ಯಾಹ್ನ 2.30ಕ್ಕೆ ನಡೆದ ಘಟನೆ

ಅಕ್ಟೋಬರ್ 30ರ ಮಧ್ಯಾಹ್ನ 2.30ರ ಸುಮಾರಿಗೆ ಸಂಜಯ್ ಗುಪ್ತಾ ತಮ್ಮ ಮನೆಯಲ್ಲಿ ಕುಟುಂಬದ ಜೊತೆಗಿದ್ದರು. ಬಾತ್‌ರೂಂಗೆ ತೆರಳಿದಾಗ ಕಾಲು ಜಾರಿ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ತಲೆಗೆ ಗಂಭೀರ ಗಾಯವಾಗಿದೆ. ಬಾತ್‌ರೂಂ ಒಳಗೆ ಬಿದ್ದ ಕಾರಣ ಹೊರಗಿದ್ದ ಪತ್ನಿ ಹಾಗೂ ಮಕ್ಕಳಿಗೆ ಯಾವುದೇ ಸುಳಿವು ಇರಲಿಲ್ಲ. ಕೆಲ ಹೊತ್ತಾದರೂ ಸಂಜಯ್ ಗುಪ್ತಾ ಕಾಣಿಸಿಕೊಳ್ಳದ ಕಾರಣ ಹುಡುಕಾಡಿದ್ದಾರೆ. ಬಾತ್‌ರೂಂ ಬಾಗಿಲು ಲಾಕ್ ಆಗಿತ್ತು. ಹೀಗಾಗಿ ತಳ್ಳಿ ಒಳನುಗ್ಗಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣವೇ ಸಂಜಯ್ ಗುಪ್ತಾರನ್ನು ಆಸ್ಪತ್ರೆ ದಾಖಲಿಸಲಾಗಿದೆ. ಆದರೆ ಅಷ್ಟರೊಳಗೆ ಸಂಜಯ್ ಗುಪ್ತಾ ಮೃತಪಟ್ಟಿದ್ದರು. ಘಟನೆಯಿಂದ ಕುಟುಂಬಸ್ಥರು ತೀವ್ರ ಆಘಾತಗೊಂಡಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆ ಬಾಲಿವುಡ್ ದಿಗ್ಗಜರು, ಆಪ್ತರು ಸಂಜಯ್ ಗುಪ್ತಾ ಮನೆಗೆ ತೆರಳಿದ್ದಾರೆ. ಸಂಜಯ್ ಗುಪ್ತಾ ಆಪ್ತ ಸ್ನೇಹಿತ ಅಶೋಕ್ ಪಂಡಿತ್ ಘಟನೆ ಕುರಿತು ಮಾಧ್ಯಮಕ್ಕೆ ವಿವರಿಸಿದ್ದಾರೆ. ಸಂಜಯ್ ಗುಪ್ತಾ ತೆಲೆಗೆ ಗಂಭೀರ ಗಾಯಗೊಂಡ ಕಾರಣ ಮೃತಪಟ್ಟಿದ್ದಾರೆ. ಮತ್ತೊರ್ವ ಪ್ರತಿಭಾನ್ವಿತ ನಿರ್ದೇಶಕನ ನಾವು ಕಳೆದುಕೊಂಡಿದ್ದೇವೆ. ಸಂಜಯ್ ಗುಪ್ತಾ ಇನ್ನಿಲ್ಲ ಅನ್ನೋದು ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಅಶೋಕ್ ಪಂಡಿತ್ ಭಾವುಕರಾಗಿದ್ದಾರೆ.

ಸಂಜಯ್ ಗುಪ್ತಾ ನಿರ್ದೇಶಕನಾಗಿ 1994ರಿಂದ ಸಕ್ರಿಯವಾಗಿದ್ದಾರೆ. 1994ರಲ್ಲಿ ಆತಿಶಿ ಸಿನಿಮಾದ ಮೂಲಕ ನಿರ್ದೇಶಕನಾಗಿ ಯಸ್ಸು ಕಂಡಿದ್ದಾರೆ. ಬಳಿಕ ಕಾಂತೆ ಸೇರಿದಂತೆ ಹಲವು ಯಶಸ್ಸಿ ಸಿನಿಮಾ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದರು. ವೈಯುಕ್ತಿಕ ಜೀವನದಲ್ಲಿ ಹಲವು ಏರಿಳಿತ ಕಂಡಿದ್ದರು. ಪತ್ನಿಯಿಂದ ವಿಚ್ಚೇದನ ಪಡೆದಿದ್ದ ಸಂಜಯ್ ಗುಪ್ತಾ ಬಳಿಕ ಒಂದಾಗಿದ್ದರು. ಕಳೆದ ಕೆಲ ವರ್ಷಗಳಿಂದ ಪತ್ನಿ ಹಾಗೂ ಮಕ್ಕಳ ಜೊತೆಗಿದ್ದರು. ವೈಯುಕ್ತಿಕ ಜೀವನದಲ್ಲಿ ಹೆಚ್ಚು ಖುಷಿಯಾಗಿದ್ದ ಸಂಜಯ್ ಗುಪ್ತ ಬಾಲಿವುಡ್‌ನಲ್ಲಿ ಹೊಸ ರೂಪದ ಸಿನಿಮಾ ನಿರ್ದೇಶನಕ್ಕೆ ತಯಾರಿ ಮಾಡಿಕೊಂಡಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

50 ಪಟ್ಟು ಸಂಬಳ, ಸಾವಿನ ಕದ ತಟ್ಟೊ ಕೆಲಸ… 8 ಎಪಿಸೋಡ್‌ಗಳ ಮೈ ಜುಮ್ಮೆನಿಸುವ ಹಾರರ್ ಥ್ರಿಲ್ಲರ್ ಸೀರೀಸ್
ಬಿಗ್ ಬಾಸ್ ಮನೆಯಲ್ಲಿ ಪ್ರಸಾರ ಮಾಡಲಾಗದ ಮಾತುಗಳು ಬರ್ತಿವೆ; ಕಿಚ್ಚ ಸುದೀಪ್ ಎಚ್ಚರಿಕೆ ಕೊಟ್ಟಿದ್ಯಾರಿಗೆ?