
ಏನ್ ಸರ್ ಆಗಿದೆ ನಿಮಗೆ? ನಿಮ್ಮ ಕೆಲಸದ ಮೇಲೆ ನಮಗೆ ಸಿಕ್ಕಾಪಟ್ಟೆ ಗೌರವವಿದೆ. ಬಟ್ ನೀವು ಈ ರೀತಿ ನಡೆದುಕೊಳ್ಳುತ್ತಿರುವುದು ನಮಗೆ ಸರಿ ಕಾಣುತ್ತಿಲ್ಲವೆಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಏನಪ್ಪಾ ಇದು ಅಂತ ಕನ್ಫ್ಯೂಷನ್ನಾ? ಇಲ್ಲಿದೆ ನೋಡಿ ಕ್ಲಿಯರ್ ಪಿಚ್ಚರ್.
ಕನ್ನಡ ನಟಿ ಮೈ ಮೇಲೆ ಬಿಯರ್ ಚೆಲ್ಲಿದ ನಿರ್ದೇಶಕ RGV!
ಕೆಲ ದಿನಗಳ ಹಿಂದೆ ‘ಇಸ್ಮಾರ್ಟ್ ಶಂಕರ್’ ಚಿತ್ರದ ಸಕ್ಸಸ್ ಪಾರ್ಟಿ ಆಯೋಜಿಸಲಾಗಿತ್ತು. ಚಿತ್ರತಂಡದವರೆಲ್ಲರೂ ಭಾಗಿಯಾಗಿದ್ದು ಆರ್ ಜಿವಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿದ್ದರು. ಮೋಜು-ಮಸ್ತಿ ಮೂಡ್ ನಲ್ಲಿದ್ದ ಆರ್ ಜಿವಿ ಬಿಯರನ್ನು ಚಿತ್ರ ನಟಿಯರಾದ ನಿಧಿ ಅಗರ್ವಾಲ್ ಹಾಗೂ ನಭಾ ನಟೇಶ್ ಮೇಲೆ ಬೇಕಂತಲೇ ಚೆಲ್ಲಿದ್ದಾರೆ. ಈ ವಿಡಿಯೋವನ್ನು ವರ್ಮ ತಮ್ಮ ಟ್ಟಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಬಟ್ ಈ ವಿಡಿಯೋದಲ್ಲಿ ವರ್ಮ ನಟಿ ಚಾರ್ಮಿಯನ್ನು ಎಳೆದು ತಬ್ಬಿಕೊಂಡು ಮುತ್ತು ಕೊಟ್ಟಿರುವ ಸನ್ನಿವೇಶ ಸ್ವಲ್ಪ ವೈರಲ್ ಆಗುತ್ತಿದೆ.
ಈ ವಿಡಿಯೋ ಎಷ್ಟರಮಟ್ಟಿಗೆ ವೈರಲ್ ಆಗಿದೆ ಅಂದ್ರೆ ಸೌಂದರ್ಯ ‘ಚಂದ್ರಮುಖಿ’ ಚಿತ್ರದ (ಕನ್ನಡದಲ್ಲಿ ಆಪ್ತಮಿತ್ರ ) ಸನ್ನಿವೇಶಕ್ಕೆ ಸಿಂಕ್ ಮಾಡಿ ನಟಿಯನ್ನು ತಬ್ಬಿಕೊಂಡಿರುವ ದೃಶ್ಯವನ್ನು ಪದೇ ಪದೇ ಪ್ಲೇ ಮಾಡಿ ಎಡಿಟ್ ಮಾಡಿರುವುದನ್ನು ಸ್ವತಃ ವರ್ಮಾನೇ ಶೇರ್ ಮಾಡಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.