ಅವತಾರ್‌ ಗಳಿಕೆ ಮುರಿದು ದಾಖಲೆಯತ್ತ ಅವೆಂಜ​ರ್ಸ್ ಎಂಡ್‌ಗೇಮ್

Published : Jul 22, 2019, 09:43 AM IST
ಅವತಾರ್‌ ಗಳಿಕೆ ಮುರಿದು ದಾಖಲೆಯತ್ತ ಅವೆಂಜ​ರ್ಸ್ ಎಂಡ್‌ಗೇಮ್

ಸಾರಾಂಶ

ಅವತಾರ್‌ ಗಳಿಕೆ ಮುರಿದು ಸಾರ್ವಕಾಲಿಕ ದಾಖಲೆಯತ್ತ ಅವೆಂಜ​ರ್ಸ್ ಎಂಡ್‌ಗೇಮ್‌ | ಅವತಾರ್‌’ ಸಿನಿಮಾ ಬರೋಬ್ಬರಿ 19260 ಕೋಟಿ ರು. ಹಣ ಗಳಿಕೆ ಮಾಡಿತ್ತು 

ಲಾಸ್‌ ಏಂಜೆಲೀಸ್‌ (ಜು.22): ಜೇಮ್ಸ್‌ ಕ್ಯಾಮರೂನ್‌ ನಿರ್ದೇಶನದ ‘ಅವತಾರ್‌’ ಸಿನಿಮಾ ಅತಿಹೆಚ್ಚು ಹಣ ಗಳಿಸಿ ಹಾಲಿವುಡ್‌ ಬಾಕ್ಸ್‌ಆಫೀಸ್‌ನಲ್ಲಿ ಇತಿಹಾಸ ಬರೆದಿತ್ತು.

ಆದರೆ, ಇದೀಗ ಆ್ಯಂಥೋನಿ ಮತ್ತು ಜೋಯ್‌ ರುಸ್ಸೋ ನಿರ್ದೇಶನದ ‘ಅವೆಂಜರ್ಸ್‌: ಎಂಡ್‌ಗೇಮ್‌’ ಸಿನಿಮಾ ಭಾರೀ ಯಶಸ್ಸು ಕಂಡಿದ್ದು, ಅವತಾರ್‌ ಸಿನಿಮಾಕ್ಕಿಂತಲೂ ಅಧಿಕ ಹಣ ಗಳಿಸಿ ಸಾರ್ವಕಾಲಿಕ ದಾಖಲೆ ಸೃಷ್ಟಿಸುವತ್ತ ಸಾಗಿದೆ. 2009ರಲ್ಲಿ ತೆರೆಕಂಡಿದ್ದ ‘ಅವತಾರ್‌’ ಸಿನಿಮಾ ಬರೋಬ್ಬರಿ 19260 ಕೋಟಿ ರು. ಹಣಗಳಿಕೆ ಮಾಡಿತ್ತು.

ಈ ಮೊತ್ತಕ್ಕಿಂತ ಕೇವಲ 3.50 ಕೋಟಿ ರು. ಹಿಂದೆ ಇರುವ ‘ಅವೆಂಜ​ರ್‍ಸ್: ಎಂಡ್‌ಗೇಮ್‌‘ ಸಿನಿಮಾ ಇನ್ನು ಕೇವಲ ಒಂದೆರಡು ದಿನಗಳಲ್ಲಿ ಅವತಾರ್‌ ದಾಖಲೆ ಮುರಿಯುವ ಮೂಲಕ, ಅತಿ ಹೆಚ್ಚು ಸಂಪಾದನೆ ಮಾಡಿದ ವಿಶ್ವದ ನಂ.1 ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ಸಜ್ಜಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಮುಖವಾಡ ಹೊರಬಂತು; ಏನೇ ಆದ್ರೂ ರಾಶಿಕಾ ಶೆಟ್ಟಿ ಜೊತೆ ನಿಲ್ತೀನಿ ಎಂದಿದ್ದ ಸೂರಜ್‌ ತಿರುಗಿಬಿದ್ರು!
ಅಮಿತಾಭ್ 14 ಚಿತ್ರಗಳ ರೀಮೇಕ್ ಮಾಡಿ, 33 ವರ್ಷಗಳ ಬಳಿಕ ಅಮಿತಾಭ್ ಜೊತೆ ನಟಿಸಿದ ನಟ ರಜನಿಕಾಂತ್!