ಅಂಬಿ ಕೊನೆ ಆಸೆ ಈಡೇರಿಸದ ಪ್ರೇಮ್!

Published : Feb 18, 2019, 12:15 PM IST
ಅಂಬಿ ಕೊನೆ ಆಸೆ ಈಡೇರಿಸದ ಪ್ರೇಮ್!

ಸಾರಾಂಶ

ರೆಬೆಲ್‌ಸ್ಟಾರ್ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಎಲ್ಲರನ್ನೂ ಒಂದೇ ರೀತಿ, ಪ್ರೀತಿ-ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದರಿಂದ ಸರ್ವರಿಗೂ ಆಪ್ತರಾದವರು ಅಂಬಿ. ಇಂಥ ಅಂಬಿ ಪ್ರೇಮ್ ಬಳಿ ಒಂದು ಕೋರಿಕೆಯನ್ನು ಇಟ್ಟಿದ್ದರಂತೆ. ಏನದು?

ಅಂಬಿ ಅಭಿಮಾನಿಗಳ ಪಟ್ಟೆಯಲ್ಲಿ ಪ್ರೇಮ್ ಮೊದಲು ನಿಲ್ಲತ್ತಾರೆ ಅಂದರೆ ತಪ್ಪಾಗಲ್ಲ. ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ ಹಾಗೂ ಹ್ಯಾಟ್ರಿಕ್ ಹೀರೋ ಕಾಂಬಿನೇಷನ್‌ನಲ್ಲಿ ಮೂಡಿ ಬಂದ 'ದಿ ವಿಲನ್' ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ರೆಬೆಲ್ ಸ್ಟಾರ್ ಆಗಮಿಸಿದ್ದರು. ಆ ಸಮಯದಲ್ಲಿ ಅಂಬಿ, ಒಬ್ಬರನ್ನು ಭೇಟಿ ಮಾಡಿಸುವಂತೆ ಪ್ರೇಮ್ ಬಳಿ ಕೇಳಿಕೊಂಡಿದ್ದರಂತೆ.

ಪ್ರತಿ ಸಲವೂ ಪ್ರೇಮ್ ಅವರನ್ನು ಭೇಟಿಯಾದಾಗ ಅಂಬಿ, 'ಯಾವಾಗ ನನ್ನ ನಿಮ್ಮ ಮನೆಗೆ ಕರ್ಕೊಂಡು ಹೋಗಿ, ನಿನ್ನ ತಾಯಿಯನ್ನು ಭೇಟಿ ಮಾಡಿಸುತ್ತಿಯಾ?' ಎಂದು ಕೇಳುತ್ತಿದ್ದರಂತೆ. ಆದರೆ ಪ್ರೇಮ್ ಮನೆಯಲ್ಲಿ ಲಿಫ್ಟ್ ಇಲ್ಲದ ಕಾರಣ ಅಂಬಿಯನ್ನು ಕರೆದುಕೊಂಡು ಹೋಗಲು ಆಗಿರಲಿಲ್ಲ. ಆಮೇಲೆ ಮನೆಗೆ ಲಿಫ್ಟ್ ಹಾಕಿಸಿ, ಅಂಬಿಯನ್ನು ಪ್ರೇಮ್ ಮನೆಗೆ ಆಹ್ವಾನಿಸಿದ್ದರಂತೆ ಪ್ರೇಮ್. ಆದರೆ, ಅವರಿಗೆ ಬರಲು ಸಮಯವೇ ಸಿಕ್ಕಿರಲಿಲ್ಲ.

'ಈಗಲೂ ನನ್ನ ತಾಯಿ ಹೇಳುತ್ತಿರುತ್ತಾರೆ, ನೀನು ಅವರನ್ನು ಒಮ್ಮೆ ಕರೆದುಕೊಂಡು ಬರಬೇಕಿತ್ತೆಂದು. ಅದೊಂದು ನೋವು ನನಗೆ ಈಗಲೂ ಕಾಡುತ್ತಿದೆ,' ಎಂದು ಖಾಸಗಿ ವಾಹಿನಿಯೊಂದಿಗೆ ಮಾತನಾಡುವಾಗ ಪ್ರೇಮ್ ಹೇಳಿಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

The Devil Movie Review: ದರ್ಶನ್‌ ದಿ ಡೆವಿಲ್‌ ಸಿನಿಮಾದ ಹೈಲೈಟ್ಸ್‌ ಏನು? ಡೆವಿಲ್‌ Part 2 ಬರುತ್ತಾ!
The Devil Movie: ಏನ್ರೀ ಹವಾ ಇದು... ಗಿಲ್ಲಿ ನಟ ಎಣ್ಣೆಯಲ್ಲಿ ಮುಖ ತೊಳ್ಕೊಂಡಿದ್ದಾರೆ ಎಂದ ವೀಕ್ಷಕರು