
ಬೆಂಗಳೂರು (ನ.13) ಡಾ.ರಾಜ್ ಕುಮಾರ್ ಸಿನಿಮಾಗಳು ಭಾರತೀಯ ಸಿನಿಮಾ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದೆ. ಸುದೀರ್ಘ ದಿನಗಳ ಪ್ರದರ್ಶನ, ಅತೀ ಹೆಚ್ಚು ಕಲೆಕ್ಷನ್ ಸೇರಿದಂತೆ ಹಲವು ದಾಖಲೆಗಳನ್ನು ಸೃಷ್ಟಿಸಿದೆ. ಡಾ.ರಾಜ್ ಸೂಪರ್ ಹಿಟ್ ಸಿನಿಮಾದಲ್ಲಿ ಭಾಗ್ಯವಂತರು ಕೂಡ ಒಂದು. ಈ ಸಿನಿಮಾ ನಿರ್ದೇಶನ ಮಾಡಿದ್ದು ಖ್ಯಾತ ನಿರ್ದೇಶಕ ಹೆಚ್ಆರ್ ಭಾರ್ಗವ್. ಹೆಚ್ ಆರ್ ಭಾರ್ಗವ್ ಕನ್ನಡ ಕಂಡ ಅತ್ಯಂತ ಶ್ರೇಷ್ಠ ಹಾಗೂ ಯಶಸ್ವಿ ನಿರ್ದೇಶಕ. ವಿಶೇಷ ಅಂದರೆ ಹೆಚ್ ಆರ್ ಭಾರ್ಗವ್ ಸಿನಿಮಾ ನಿರ್ದೇಶನ ಪಯಣ ಆರಂಭಗೊಂಡಿದ್ದು ಡಾ.ರಾಜ್ ಕುಮಾರ್ ಸಿನಿಮಾದಿಂದ, ತನ್ನ ಕರಿಯರ್‌ನ ಕೊನೆಯ ಸಿನಿಮಾ ನಾಯಕ ಶಿವರಾಜ್ ಕುಮಾರ್. ಈ ಕುರಿತು ರೋಚಕ ಘಟನೆ ಬಿಚ್ಚಿಟ್ಟಿರುವ ಭಾರ್ಗವ್, ಕರಿಯರ್‌ನ ಒಂದು ನೋವು ಹಂಚಿಕೊಂಡಿದ್ದಾರೆ.
ಹೆಚ್ಆರ್ ಭಾರ್ಗವ್ ಸೂಪರ್ ಹಿಟ್ ಸಿನಿಮಾ ನೀಡಿದ ನಿರ್ದೇಶಕ. ಖ್ಯಾತ ಪತ್ರಕರ್ತ ಗಣೇಶ್ ಕಾಸರಗೋಡು ಜೊತೆಗಿನ ಸಂದರ್ಶನದಲ್ಲಿ ಭಾರ್ಗವ್ ಡಾ.ರಾಜ್ ಕುಮಾರ್, ಶಿವರಾಜ್ ಕುಮಾರ್ ಹಾಗೂ ತಮ್ಮ ಸಿನಿಮಾ ಜರ್ನಿ ಬಿಚ್ಚಿಟ್ಟಿದ್ದಾರೆ. ಹೆಚ್ಆರ್ ಭಾರ್ಗವ್ ನಿರ್ದೇಶನದ ಮೊದಲ ಸಿನಿಮಾ ಭಾಗ್ಯವಂತರು. 1977ರಲ್ಲಿ ಬಿಡುಗಡೆಯಾದ ಈ ಸಿನಿಮಾದಲ್ಲಿ ಡಾ.ರಾಜ್‌ಕುಮಾರ್ ಹಾಗೂ ಬಿ ಸರೋಜಾ ದೇವಿ ನಾಯಕ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಭಾಗ್ಯವಂತರು ಸೂಪರ್ ಹಿಟ್ ಸಿನಿಮಾ ಮಾತ್ರವಲ್ಲ, ಈಗಲೂ ಈ ಸಿನಿಮಾ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಸಿನಿಮಾದ ಹಾಡಗಳು ಈಗಲೂ ಬಹುತೇಕರ ಫೇವರಿಟ್. ಭಾರ್ಗವ್ ನಿರ್ದೇಶನದಲ್ಲಿ ಡಾ.ರಾಜ್‌ಕುಮಾರ್ ಮೋಡಿ ಮಾಡಿದ್ದರು.
ಭಾರ್ಗವ್ ನಿರ್ದೇಶದನ ಮೊದಲ ಸಿನಿಮಾ ಭಾಗ್ಯವಂತರು ಸೂಪರ್ ಹಿಟ್ ಬಳಿಕ ಜೀವನ ಚಕ್ರ, ಬೆದರು ಬೊಂಬೆ, ಮನೆಯೇ ಮಂತ್ರಾಲಯ, ಶಾಂತಿ ನಿವಾಸ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾ ನಿರ್ದೇಶನ ಮಾಡಿದ್ದಾರೆ. ವಿಶೇಷ ಅಂದರೆ ತೆಲುಗಿನಲ್ಲೂ ಸಿನಿಮಾ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದಾರೆ. ಕಾಕತಾಳಿಯ ಎಂದರೆ ಶಿವರಾಜ್ ಕುಮಾರ್ ಸಿನಿಮಾ ಮಾಡಿ ಬಳಿಕ ಭಾರ್ಗವ್ ಸಿನಿಮಾ ನಿರ್ದೇಶನದಿಂದ ದೂರ ಉಳಿದರು.
ಸೂಪರ್ ಹಿಟ್ ಸಿನಿಮಾ ನೀಡಿದ ನಿರ್ದೇಶಕ ಭಾರ್ಗವ್ ನಿರ್ದೇಶನದ ಕೊನೆಯ ಸಿನಿಮಾ ಗಂಡುಗಲಿ ಕುಮಾರ ರಾಮ. 2006ರಲ್ಲಿ ಈ ಸಿನಿಮಾ ತೆರೆಕಂಡಿತ್ತು. ಶಿವರಾಜ್ ಕುಮಾರ್ ಗಂಡುಗಲಿ ಕುಮಾರ ರಾಮನಾಗಿ ಅವತರಿಸಿದ್ದರು. ಅದ್ಭುತ ಅಭಿನಯ, ಕತೆ ಮೂಲಕ ಕನ್ನಡ ಸಿನಿಮಾ ರಂಗದಲ್ಲಿ ಉತ್ತಮ ಚಿತ್ರವಾಗಿ ಗುರುತಿಸಿಕೊಂಡಿತ್ತು. ಆದರೆ ಈ ಸಿನಿಮಾ ನಿರೀಕ್ಷಿಯ ಯಶಸ್ಸು ಕಾಣಸಲಿಲ್ಲ.
ಗಂಡುಗಲಿ ಕುಮಾರ ರಾಮ ಸಿನಿಮಾ ಉತ್ತಮವಾಗಿತ್ತು, ಶಿವರಾಜ್ ಕುಮಾರ್ ಪಾತ್ರಕ್ಕೆ ಜೀವ ತುಂಬಿದ್ದರು. ಆದರೆ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣಲಿಲ್ಲ. ಸಿನಿಮಾ ಗಳಿಕೆಯಲ್ಲಿ ಮುಗ್ಗರಿಸಿತು. ಇದು ನನಗೆ ತೀವ್ರ ನೋವಿದೆ. ನನ್ನ ಕೊನೆಯ ಸಿನಿಮಾ, ಜೊತೆಗೆ ಬಹಳ ನಿರೀಕ್ಷೆಯಲ್ಲಿ ಮಾಡಿದ ಸ ಸಿನಿಮಾ ಸೋತು ಬಿಟ್ಟಿತು. ನನ್ನ ಸಿನಿಮಾ ನಿರ್ದೇಶನ ಕರಿಯರ್‌ನಲ್ಲಿ ಇದೊಂದು ನೋವಿದೆ. ಕೊನೆಯ ಸಿನಿಮಾ ಓಡಬೇಕಿತ್ತು. ಆದರೆ ಹಾಗಾಗಲಿಲ್ಲ ಎಂದು ಹೆಚ್ ಆರ್ ಭಾರ್ಗವ್ ಹೇಳಿಕೊಂಡಿದ್ದಾರೆ.
2006ರಲ್ಲಿ ಸಿನಿಮಾ ನಿರ್ದೇಶನದಿಂದ ದೂರ ಉಳಿದ ಭಾರ್ಗವ್ ಕಳೆದ 20 ವರ್ಷಗಳಿಂದ ಕನ್ನ ಸಿನಿಮಾದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಡಾ.ರಾಜ್ ಕುಮಾರ್‌ಗೆ ಆ್ಯಕ್ಷನ್ ಕಟ್ ಹೇಳಿದ ಭಾರ್ಗವ್ ಕೊನಯ ಸಿನಿಮಾದಲ್ಲಿ ಶಿವರಾಜ್ ಕುಮಾರ್‌ಗೆ ನಿರ್ದೇಶನ ಮಾಡಿದ ಹೆಮ್ಮೆ ಇದೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.