ಇದು ಡಿಜಿಟಲ್‌ ಜಗತ್ತಿನ ಹಾಡು- ಪಾಡು ತೆರೆದಿಡುವ 'ಲಂಬೋದರ 2.0': ಸಿಂಪಲ್ ಸುನಿ ವಿಶೇಷ ಸಂದರ್ಶನ

Published : Nov 12, 2026, 11:53 PM IST
Simple Suni

ಸಾರಾಂಶ

ನಿರ್ದೇಶಕ ಸಿಂಪಲ್ ಸುನಿ ಅವರು ತಮ್ಮ ಮುಂಬರುವ ಲಂಬೋದರ 2.0 ಚಿತ್ರದ ವಿಶೇಷತೆಗಳ ಬಗ್ಗೆ ಮಾತನಾಡಿದ್ದಾರೆ. ಬಾಲಿವುಡ್ ನಟ ಕುನಾಲ್ ಕಪೂರ್ ಅವರ ಪಾತ್ರ, ಚಿತ್ರದ ಕಥೆಯ ಹಿನ್ನೆಲೆ ಹಾಗೂ ತಾಂತ್ರಿಕ ಪ್ರಯೋಗಗಳ ಕುರಿತ ವಿಶೇಷ ಸಂದರ್ಶನ ಇಲ್ಲಿದೆ.

* ಈ ಕತೆಯ ಹುಟ್ಟಿನ ಹಿನ್ನೆಲೆ ಏನು?

ನಾನು ಬರೆದ ಕತೆ ಅಲ್ಲ ಇದು. ನಮ್ಮ ಚಿತ್ರದ ನಾಯಕ ಅನಿಲ್‌ ಶೆಟ್ಟಿ ಅವರೇ ಬರೆದಿದ್ದು. ನಿರ್ದೇಶಕ ಸಚಿನ್‌ ಅವರು ಫೋನ್‌ ಮಾಡಿ ಒಂದು ಕತೆ ಇದು ಕೇಳು ಅಂದ್ರು. ಕೇಳಿದೆ. ತುಂಬಾ ಚೆನ್ನಾಗಿತ್ತು. ನಾನು ಸೈನ್ಸ್‌, ಗಣಿತದಲ್ಲಿ ವೀಕು. ನಾನು ಯೋಚನೆ ಮಾಡಕ್ಕೆ ಆಗದ ಕತೆಯೊಂದನ್ನು ಸಿನಿಮಾ ಮಾಡಿದ್ದೇನೆ.

* ಹಿಂದಿನ ‘ಲಂಬೋದರ’ನಿಗೂ ಈ ‘ಲಂಬೋದರ 2.0’ ಚಿತ್ರಕ್ಕೂ ನಂಟು ಇದಿಯಾ?

ಆ ರೀತಿ ಸಂಬಂಧ ಇಲ್ಲ. ಆದರೆ, ಈ ಚಿತ್ರದ ಕತೆ ಕನ್ನಡದ ದೊಡ್ಡ ಐಕಾನ್‌ ಹೀರೋ ಒಬ್ಬರ ಚಿತ್ರಕ್ಕೆ ನಂಟು ಇದೆ. ಅದನ್ನು ಸಿನಿಮಾ ನೋಡಿಯೇ ತಿಳಿಯಬೇಕು.

* ಇಂಥ ತಾಂತ್ರಿಕ ವಿಷಯಗಳ ಚಿತ್ರದಲ್ಲಿ ಮನರಂಜನೆ ಹೇಗೆ ಸಾಧ್ಯ?

ಸೈನ್ಸ್‌ ಫಿಕ್ಷನ್‌ ಕತೆಗಳೆಂದರೆ ತಾಂತ್ರಿಕತೆಯಿಂದ ಕೂಡಿರುತ್ತದೆ ಎಂದುಕೊಳ್ಳುತ್ತಾರೆ. ನಮ್ಮ ಚಿತ್ರದಲ್ಲಿ ಟೆಕ್ನಾಲಜಿ ಜೊತೆಗೆ ಮನರಂಜನೆಗೆ ಕೊರತೆ ಇಲ್ಲ. ಬಿಗ್‌ಬಾಸ್‌ ರೀತಿಯ ಒಂದು ಗೇಮ್‌, ಹ್ಯಾಪಿನೆಸ್‌ ಬ್ಯಾಂಡ್‌ ಕಟ್ಟಿಕೊಳ್ಳುವುದು, ಈ ಗೇಮ್‌ ಸುತ್ತಾ ನಡೆಯುವ ಸಂಭಾಷಣೆಗಳ‍ಲ್ಲಿ ಫನ್‌ ಇದೆ.

* ನಿಜವಾದ ರೋಬೋಟ್‌ನಿಂದ ಅಭಿನಯ ಮಾಡಿಸುವ ಆಲೋಚನೆ ಬಂದಿದ್ದೇಗೆ?

ನಮ್ಮ ಚಿತ್ರದಲ್ಲಿ ಮನುಷ್ಯರನ್ನು ನಂಬದ ಒಂದು ಪಾತ್ರ ಇದೆ. ಆ ಪಾತ್ರದ ಕಾರಣಕ್ಕೆ ರೋಬೋಟ್‌ ಕಲ್ಪನೆ ಬಂದಿದ್ದು. ಮೊದಲು ಈ ಐಡಿಯಾ ಇರಲಿಲ್ಲ. ಅಲೆಕ್ಸಾ, ಸಿರಿ ರೀತಿ ಮಿಷನ್‌ಗಳ ಜೊತೆಗೆ ಪಾತ್ರಧಾರಿ ಮಾತನಾಡುತ್ತಾನೆ ಎಂದು ಬರೆದುಕೊಂಡಿದ್ವಿ. ಆದರೆ, ನಮ್ಮ ನಿರ್ಮಾಪಕರು ದುಬೈಗೆ ಹೋದಾಗ ಅಲ್ಲಿ ಈ ಜಿಯಾ ಹೆಸರಿನ ನೈಜ ಹ್ಯೂಮನಾಯ್ಡ್ ರೋಬೋಟ್ ನೋಡಿ ಅದನ್ನು ಚಿತ್ರದಲ್ಲಿ ಬಳಸಿದ್ದೇವೆ. ಇದನ್ನು ತಯಾರಿಸಿದ್ದು ಬೆಂಗಳೂರು ಮೂಲದ ಕಂಪನಿಯೇ.

* ಈ ಚಿತ್ರದ ಮೂಲಕ ಏನು ಹೇಳುತ್ತಿದ್ದೀರಿ?

ಡಿಜಿಟಲ್‌ ಸ್ಕ್ಯಾಮ್‌ಗಳನ್ನು ಹೇಳುವ ಜೊತೆಗೆ, ಸೋಶಿಯಲ್ ಮೀಡಿಯಾ, ಲೈಕ್ಸ್, ಫಾಲೋವರ್ಸ್, ಡಿಜಿಟಲ್ ಜಗತ್ತೇ ಒಂದು ಬದುಕಾಗಿಸಿಕೊಂಡಿರುವವರ ಜಗತ್ತಿನ ಬಗ್ಗೆ ಈ ಸಿನಿಮಾ ಮಾತನಾಡುತ್ತದೆ. ಸಿನಿಮಾ ನೋಡಿದ ಮೇಲೆ ನಾವು ಯಾವೆಲ್ಲ ಆಪ್‌ಗಳು ಬಳಸುತ್ತಿದ್ದೇವೆ, ಲೈವ್‌ ಎಕ್ಸ್‌ಪಿರಿಯೆನ್ಸ್‌ನಿಂದ ದೂರವಾಗಿರುವ ಡೇ ಟು ಡೇ ಲೈಫ್‌... ಇದೆಲ್ಲವೂ ಚಿತ್ರದಲ್ಲಿ ಬರಲಿದೆ. ಕೊನೆಗೆ ಮನುಷ್ಯನಿಗೆ ಹ್ಯಾಪಿನೆಸ್‌ ಎನ್ನುವುದು ಎಲ್ಲಿದೆ ಎಂಬುದನ್ನು ಚಿತ್ರದಲ್ಲಿ ಹೇಳಲಾಗಿದೆ.

* ಬಾಲಿವುಡ್‌ ನಟ ಕುನಾಲ್‌ ಕಪೂರ್‌ ಈ ಚಿತ್ರಕ್ಕೆ ಯಾಕೆ ಬೇಕಿತ್ತು?

ನಮ್ಮ ಚಿತ್ರದಲ್ಲಿ ಹೊರಗಿನಿಂದ ಬರುವ ಒಂದು ಪಾತ್ರಧಾರಿ ಬೇಕಿತ್ತು. ಒಂದು ರೀತಿಯಲ್ಲಿ ಎಲಾನ್‌ ಮಸ್ಕ್‌ ನನ್ನು ನೆನಪಿಸುವಂತ ಪಾತ್ರಧಾರಿ. ಅದಕ್ಕೆ ಕುನಾಲ್‌ ಸೂಕ್ತ ಅನಿಸಿತು. ಅವರ ಪಾತ್ರ ಚಿತ್ರಕ್ಕೆ ತುಂಬಾ ಮಹತ್ವ ಕೊಡುತ್ತದೆ.

* ಈ ರೀತಿಯ ಚಿತ್ರಗಳನ್ನು ರೂಪಿಸುವುದರಲ್ಲಿ ಎಷ್ಟು ರಿಸ್ಕ್‌ ಇದೆ?

ಪ್ರಯೋಗ ಅನ್ನೋದೇ ರಿಸ್ಕ್‌. ಎಷ್ಟು ರಿಸ್ಕ್‌, ಸವಾಲು ಎಂಬುದು ಇಂಥ ಚಿತ್ರಗಳು ಬಿಡುಗಡೆ ನಂತರ ಕೊಡುವ ರಿಜಲ್ಟ್‌ ಮೇಲೆ ನಿಂತಿರುತ್ತದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕರಣ್ ಜೋಹರ್ ಮುಂದೆಯೇ ಬೆಡ್‌ರೂಂ ಸೀಕ್ರೆಟ್ ಬಿಚ್ಚಿಟ್ಟ ಸಿದ್ಧಾರ್ಥ್! ಕಿಯಾರಾ ಕೊಟ್ಟ ಪ್ರತಿಕ್ರಿಯೆ ಹೇಗಿತ್ತು?
ಶೂರ್ಪಣಖಿಯ ಬಗ್ಗೆ ರಕುಲ್‌ಗೆ ಈಗ ಗೊತ್ತಾಗಿದ್ದೇನು? ಲಂಕಾಧಿಪತಿ ಯಶ್ ರಹಸ್ಯ ಕೂಡಾ ನಟಿ ಬಿಚ್ಚಿಟ್ರು!