ನಿಶ್ಚಿತಾರ್ಥದ ಉಂಗುರದಲ್ಲಿ ದೈವಭಕ್ತಿ ಮೆರೆದ ಧ್ರುವ ಸರ್ಜಾ ಜೋಡಿ

Published : Dec 11, 2018, 04:40 PM ISTUpdated : Dec 11, 2018, 04:41 PM IST
ನಿಶ್ಚಿತಾರ್ಥದ ಉಂಗುರದಲ್ಲಿ ದೈವಭಕ್ತಿ ಮೆರೆದ ಧ್ರುವ ಸರ್ಜಾ ಜೋಡಿ

ಸಾರಾಂಶ

ಬಾಲ್ಯದ ಗೆಳತಿ ಪ್ರೇರಣಾ ಜೊತೆ ಹಸೆಮಣೆ ಏರಲಿದ್ದಾರೆ ಧ್ರುವ ಸರ್ಜಾ | ಇಬ್ಬರೂ ಅಪಾರ ದೈವ ಭಕ್ತರಾಗಿದ್ದು ನಿಶ್ಚಿತಾರ್ಥದ ಉಂಗುರದಲ್ಲೂ ದೈವ ಭಕ್ತಿ ಮೆರೆದಿದ್ದಾರೆ. ನಿಶ್ಚಿತಾರ್ಥದ ಉಂಗುರದ ಮಹತ್ವವೇನು ಗೊತ್ತಾ? 

ಬೆಂಗಳೂರು (ಡಿ. 11): ಧ್ರುವ ಸರ್ಜಾ ಬಾಲ್ಯದ ಗೆಳತಿ ಪ್ರೇರಣಾ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. 

ವೆಡ್ಡಿಂಗ್ ಆ್ಯನಿವರ್ಸರಿ ದಿನ ಅನುಷ್ಕಾ ವಾಲ್‌ನಲ್ಲಿ ರಣವೀರ್ ಫೋಟೋ!

ಧ್ರುವ ಸರ್ಜಾ ಆಂಜನೇಯನ ಪರಮ ಭಕ್ತ. ಅದೇ ರೀತಿ ಪ್ರೇರಣಾ ಕೂಡಾ ಕಡಿಮೆಯೇನಿಲ್ಲ. ಅವರೂ ಕೂಡಾ ದೈವಭಕ್ತರೇ. ನಿಶ್ಚಿತಾರ್ಥದ ದಿನ ಹಸುವಿನ ಪೂಜೆ ಮಾಡಿದ್ದಾರೆ. ಅದೇ ರೀತಿ ಪ್ರೇರಣಾ ತೊಡಿಸಿದ ಉಂಗುರದಲ್ಲೂ ಕೂಡಾ ದೈವ ಭಕ್ತಿ ಎದ್ದು ಕಾಣುತ್ತಿತ್ತು. ಶಿವ, ಪಾರ್ವತಿ, ಗಣೇಶ, ನಂದಿ ಇರುವ ಬಂಗಾರದುಂಗುರವನ್ನು ಭಾವೀ ಪತಿಗೆ ತೊಡಿಸಿದ್ದಾರೆ. ಧ್ರುವ ಸರ್ಜಾ ಕೂಡಾ 24 ಲಕ್ಷದ ದುಬಾರಿ ವಜ್ರದುಂಗುರವನ್ನು ತೊಡಿಸಿದ್ದಾರೆ. 

ಪವನ್ ಒಡೆಯರ್ ಹೆಂಡತಿ ಕೊಟ್ಟ ವಿಶೇಷ ಬರ್ತಡೇ ಗಿಫ್ಟ್ !

ಆಂಜನೇಯ ದೇವಸ್ಥಾನದಲ್ಲಿಯೇ ನಿಶ್ಚಿತಾರ್ಥ ಮಾಡಿಕೊಳ್ಳಬೇಕೆಂಬ ಆಸೆಯನ್ನು ಹೊಂದಿದ್ದ ಆಂಜನೇಯ ಭಕ್ತ ಧ್ರುವ ಸರ್ಜಾ, ತನ್ನ ಆಸೆಯಂತೆ ಆಂಜನೇಯ ದೇವಸ್ಥಾನದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕಲಾ ನಿರ್ದೇಶಕ ಅರುಣ್ ಸಾಗರ್ ನೇತೃತ್ವದಲ್ಲಿ ನಿರ್ಮಾಣವಾದ ತೆಂಗಿನ ಗರಿ, ಮಾವಿನ ಎಲೆಯ ಹಸಿರು ತಳಿರು-ತೋರಣಗಳಿಂದ ಕೂಡಿದ ವೇದಿಕೆಯಲ್ಲಿ ಪ್ರೇರಣಾ ಹಾಗೂ ಧ್ರುವ ಪರಸ್ಪರ ಉಂಗುರ ಬದಲಿಸಿಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?