
ಗೋಲ್ಡನ್ ಸ್ಟಾರ್ ಜೊತೆಯಾಗಿ ಸ್ಯಾಂಡಲ್‌ವುಡ್ ಹಿಟ್ ಚಿತ್ರಗಳ ಮೂಲಕ ಎಲ್ಲರ ಗಮನ ಸೆಳೆದ ರೋಮಿಯೋ ಜೋಡಿ. ಮದುವೆ ನಂತರ ಎಲ್ಲೋ ಸಿನಿಮಾದಿಂದ ದೂರ ಉಳಿದ ಭಾವನ ಈಗ ಮತ್ತೆ ತೆರೆ ಮೇಲೆ ಬರಲಿದ್ದಾರೆ.
ಈ ಜೋಡಿ ಒಂದಾಗಲು 6 ವರ್ಷಗಳೇ ಬೇಕಾಯ್ತು. ತಮ್ಮ ಪಾತ್ರ ಆಯ್ಕೆಯಲ್ಲಿ ಸಿಕ್ಕಾ ಪಟ್ಟೆ ಚೂಸಿಯಾಗಿರುವ ಭಾವನ "99" ಚಿತ್ರ ಒಪ್ಪಿಕೊಂಡಿದ್ದಾರೆ. ಮದುವೆ ನಂತರ "ಟಗರು" ಚಿತ್ರದಲ್ಲಿ ನಾಯಕಿ ಅಕ್ಕನ ಪಾತ್ರದಲ್ಲಿ ನಟಿಸಿದ್ದರು.
ಪ್ರೀತಮ್ ಗುಬ್ಬಿ ತಮಿಳು ಚಿತ್ರ "96" ಕನ್ನಡದಲ್ಲಿ ಮಾಡಲು ಮುಂದಾಗಿದ್ದಾರೆ. ಆದರೆ ಹೆಸರಲ್ಲಿ ಚೂರು ಬದಲಾವಣೆ ತಂದು "99" ಎಂದಿಟ್ಟಿದ್ದಾರೆ. ಗಣೇಶ್ ನಟನೆಯ ಚಿತ್ರ ಆರೆಂಜ್ ಡಿ.7 ರಂದು ಬಿಡುಗಡೆಯಾಗಿದ್ದು ಬಹು ದೊಡ್ಡ ಯಶಸ್ಸು ಕಾಣುತ್ತಿದೆ.
"ಗಣೇಶ್‌ರೊಂದಿಗೆ ನನಗೆ ಒಳ್ಳೆಯ ಒಡನಾಟವಿದ್ದು ಆದುದರಿಂದ ಪ್ರೀತಮ್ ಚಿತ್ರ ಕಥೆ ಹೇಳಲು ಬಂದಾಗ ನನಗೆ ಹೆಚ್ಚು ಇಷ್ಟವಾಯ್ತು. ನಾನು ರಿಮೇಕ್ ಚಿತ್ರಕ್ಕೆ ವಿರೋಧಿ. ಆದರೆ ಈ ಚಿತ್ರದ ಕಥೆ ತುಂಬ ಇಷ್ಟವಾದ ಕಾರಣ ನಟಿಸಲು ಮನಸ್ಸು ಮಾಡಿದ್ದೇನೆ, ಪ್ರೀತಮ್ ಹಾಗು ಗಣೇಶ್ ಇಬ್ಬರೊಂದಿಗೆ ಕೆಲಸ ಮಾಡಿರುವೆ. ನನ್ನ ಭಾಗದ ಚಿತ್ರೀಕರಣ ಬೆಂಗಳೂರಿನಲ್ಲಿ 18-20 ದಿನಗಳ ಕಾಲ ನಡೆಯಲಿದೆ" ಎಂದು ಭಾವನ ಹೇಳಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.