
ಬಿ-ಟೌನ್ ಡಿಸ್ನಿ ಲಡಕಿ ದೀಪಿಕಾ ಪಡುಕೋಣೆ ಕೆಲ ದಿನಗಳ ಹಿಂದೆಯಷ್ಟೇ ಮೆಟ್ ಗಾಲಾ 2019 ಕಾರ್ಯಕ್ರಮದಲ್ಲಿ ಭಾಗಿಯಾಗಿ ಪಿಂಕ್ ಬಾರ್ಬಿ ಡಾಲ್ ರೀತಿ ಕಾಣಿಸಿಕೊಂಡಿದ್ದ ಲುಕ್‌ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಇದಾದ ನಂತರ ನ್ಯೂಯಾರ್ಕ್‌ನಲ್ಲೇ ಉಳಿದುಕೊಂಡ ಡಿಪ್ಪಿ ರಾತ್ರಿ ಚಳಿಯಲ್ಲಿ ಸೈಕ್ಲಿಂಗ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ದೀಪಿಕಾ ತನ್ನ ಸ್ನೇಹಿತನೊಂದಿಗೆ ನ್ಯೂಯಾರ್ಕ್ ಚಳಿಯಲ್ಲಿ ಸೈಕ್ಲಿಂಗ್ ಮಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.
ರಣವೀರ್ ಕೈಯಲ್ಲಿ ದೀಪಿಕಾ ಚಪ್ಪಲಿ: ಏನಿದು ಫೋಟೋ ಕಥೆ?
ಮೆಟ್‌ಗಾಲಾ ಕಾರ್ಯಕ್ರಮವಾದ ನಂತರ ಬಾಲಿವುಡ್ ಮಂದಿಗೆ ಆಫ್ಟರ್ ಪಾರ್ಟಿ ಮಾಡಿದ್ದು ಅದರಲ್ಲಿ ಪ್ರಿಯಾಂಕಾ, ನಿಕ್ ಹಾಗೂ ದೀಪಿಕಾ ಫುಲ್ ಸಿಸ್ಲಿಂಗ್ ಆಗಿ ಕಾಣಿಸಿಕೊಂಡಿದ್ದಾರೆ.
ಇನ್ನು ದೀಪಿಕಾ ಹಾಗೂ ರಣವೀರ್ ಸಿಂಗ್ ದಾಂಪತ್ಯಕ್ಕೆ ಕಾಲಿಟ್ಟು 6 ತಿಂಗಳು ಆಗುತ್ತದೆ. "ಇದೊಂದು ಸುಮಧರ ಕ್ಷಣ. ದಿನಗಳು ಎಷ್ಟು ಬೇಗ ಕಳೆಯುತ್ತಿದೆ ಎನ್ನುವುದೇ ಗೊತ್ತಾಗುವುದಿಲ್ಲ" ಎಂದು ರಣವೀರ್ ಮಾಧ್ಯಮವೊಂದಕ್ಕೆ ಹೇಳಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.