ಛಪಾಕ್ ಬಿಡುಗಡೆಗೆ ಕೇವಲ ಮೂರು ದಿನಗಳ ಮೊದಲು ದೀಪಿಕಾ ಪಡುಕೋಣೆ ಜೆಎನ್‌ಯುಗೆ ವಿವಾದಾತ್ಮಕ ಭೇಟಿ ನೀಡಿದ್ದು, 2020ರಲ್ಲಿ ಬಿಡುಗಡೆಯಾದ ನನ್ನ ಚಿತ್ರದ ಮೇಲೆ ಪರಿಣಾಮ ಬೀರಿತ್ತು ಎಂದು ಮೇಘನಾ ಗುಲ್ಜಾರ್ ಹೇಳಿದ್ದಾರೆ.
ನವದೆಹಲಿ (ನ.27): ಆಸಿಡ್ ದಾಳಿಯಿಂದ ಬದುಕುಳಿದ ಮತ್ತು ಆಸಿಡ್ ದಾಳಿ ಸಂತ್ರಸ್ತರ ಹಕ್ಕುಗಳ ಹೋರಾಟಗಾರ್ತಿ ಲಕ್ಷ್ಮಿ ಅಗರ್ವಾಲ್ ಅವರ ಜೀವನವನ್ನು ಆಧರಿಸಿ, 2020ರಲ್ಲಿ ದೀಪಿಕಾ ಪಡುಕೋಣೆ ಪ್ರಮುಖ ಪಾತ್ರಧಾರಿಯಾಗಿ ಛಪಾಕ್ ಚಿತ್ರ ಬಂದಿತ್ತು. ಈ ಚಿತ್ರವನ್ನು ಮೇಘನಾ ಗುಲ್ಜಾರ್ ನಿರ್ದೇಶನ ಮಾಡಿದ್ದರು. ಅದ್ಭುತವಾದ ಕಂಟೆಂಟ್‌ನ ಬೆಂಬಲದ ಹೊರತಾಗಿಯೂ ಬಾಕ್ಸಾಫೀಸ್‌ನಲ್ಲಿ ಛಪಾಕ್ ಕಮಾಲ್ ಮಾಡಲು ಯಶಸ್ವಿಯಾಗಿರಲಿಲ್ಲ. ಇತ್ತೀಚೆಗೆ ಈ ಸಿನಿಮಾದ ಬಗ್ಗೆ ಮಾತನಾಡರುವ ಮೇಘನಾ ಗುಲ್ಜಾರ್,ಚಿತ್ರದ ಬಿಡುಗಡೆಯ ಮೂರು ದಿನಗಳ ಮೊದಲು ದೀಪಿಕಾ ಅವರ ವಿವಾದಾತ್ಮಕ ಜೆಎನ್‌ಯುಗೆ ಭೇಟಿ ಮಾಡಿ ವಿವಾದ ಸೃಷ್ಟಿಸಿದ್ದು ತಮ್ಮ ಚಿತ್ರದ ಮೇಲೆ ಪರಿಣಾಮ ಬೀರಿತ್ತು ಎಂದು ಮೇಘನಾ ಗುಲ್ಜಾರ್ ಒಪ್ಪಿಕೊಂಡಿದ್ದಾರೆ. ಬಹುಶಃ ಇದರ ಬಗ್ಗೆ ಎಲ್ಲರಿಗೂ ಉತ್ತರ ಗೊತ್ತಿದೆ. ಈ ವಿವಾದ ನನ್ನ ಚಿತ್ರದ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಿತು. ಅಂದು ಆಸಿಡ್ ಹಿಂಸಾಚಾರ ಚರ್ಚೆಯ ವಿಚಾರವಾಗಬೇಕಿತ್ತು. ಇದೇ ಕಾರಣವನ್ನು ಚಿತ್ರ ಹೊಂದಿತ್ತು. ಆದರೆ, ವಿಚಾರ ಎಲ್ಲೆಲ್ಲಿಗೋ ಹೋಯಿತು. ಇದು ಸಹಜವಾಗಿ ಚಿತ್ರದ ಮೇಲೆ ಪರಿಣಾಮ ಬೀರಿತು. ಅದನ್ನು ಅಲ್ಲಗಳೆಯುವಂತಿಲ್ಲ ಎಂದು ಹೇಳಿದ್ದಾರೆ.
ಛಪಾಕ್ ಚಿತ್ರ ಬಿಡುಗಡೆಯಾಗುವ ಮೂರು ದಿನಗಳ ಮೊದಲು ಅಂದರೆ, 2020ರ ಜನವರಿ 7 ರಂದು ದೀಪಿಕಾ ಪಡುಕೋಣೆ ನವದೆಹಲಿಯ ಜವಹರಲಾಲ್ ನೆಹರು ವಿವಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 2020ರ ಜೆಎನ್‌ಯು ದಾಳಿ ಹಾಗೂ ಸಿಟಿಜನ್‌ಷಿಪ್ ಅಮೆಂಡ್‌ಮೆಂಟ್ ಆಕ್ಟ್ ಅಂದರೆ ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಇದು ಸೋಶಿಯಲ್ ಮೀಡಿಯಾದಲ್ಲಿ ವಿವಾದಕ್ಕೆ ಕಾರಣವಾಯಿತು. ದೀಪಿಕಾ ಇದರಲ್ಲಿ ಪಾಲ್ಗೊಂಡ ಸಲುವಾಗಿ #BoycottChhapaak ಹಾಗೂ #BlockDeepika ಟ್ವಿಟರ್‌ನಲ್ಲಿ ದೊಡ್ಡ ಮಟ್ಟದಲ್ಲಿ ಟ್ರೆಂಡ್ ಆಗಿತ್ತು.
ಫಾಕ್ಸ್ ಸ್ಟಾರ್ ಸ್ಟುಡಿಯೋಸ್, ಗೋವಿಂದ್ ಸಿಂಗ್ ಸಂಧು, ಮತ್ತು ಮೇಘನಾ ಗುಲ್ಜಾರ್ ಜೊತೆಗೆ ಸಹ-ನಿರ್ಮಾಪಕಿಯಾಗಿ, ದೀಪಿಕಾ ಪಡುಕೋಣೆ ಛಪಾಕ್ ಚಿತ್ರದ ಮೂಲಕ ನಿರ್ಮಾಣಕ್ಕೆ ಪಾದಾರ್ಪಣೆ ಮಾಡಿದರು. 50 ಕೋಟಿ ಬಜೆಟ್‌ನಲ್ಲಿ ತಯಾರಾದ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಕೇವಲ 55.44 ಕೋಟಿ ಗಳಿಸಿತ್ತು.
Fact Check: ಜೆಎನ್‌ಯು ಮಹಿಳಾ ಹಾಸ್ಟೆಲ್‌ನಲ್ಲಿ ಇದ್ದ ವಸ್ತುಗಳಿವು!
ಮೇಘನಾ ಗುಲ್ಜಾರ್ ಅವರ ನಿರ್ದೇಶನದ ಮುಂದಿನ ಚಿತ್ರ ಸ್ಯಾಮ್ ಬಹದ್ದೂರ್ ತೆರೆಗೆ ಬರಲು ಸಿದ್ಧವಾಗಿದೆ. ಇದರಲ್ಲಿ ವಿಕ್ಕಿ ಕೌಶಾಲ್, ಫೀಲ್ಡ್ ಮಾರ್ಷಲ್‌ಸ್ಯಾಮ್ ಮಾಣೆಕ್‌ಶಾ ಪಾತ್ರದಲ್ಲಿ ನಟಿಸಿದ್ದಾರೆ. 1971ರ ಬಾಂಗ್ಲಾದೇಶ ವಿಮೋಚನೆಗಾಗಿ ಪಾಕಿಸ್ತಾನದ ವಿರುದ್ಧ ಭಾರತದ ಗೆಲುವಿನಲ್ಲಿ ಮಾಣೆಕ್ ಶಾ ಅವರ ಪಾತ್ರದ ಬಗ್ಗೆ ಸಿನಿಮಾ ಚಿತ್ರಿಸಿದೆ. ನಿರೂಪಣೆಯು ಮಾಣೆಕ್ ಶಾ ಅವರ ನಾಯಕತ್ವ ಮತ್ತು ಅವರು ಗೆದ್ದ ಸವಾಲುಗಳನ್ನು ಎತ್ತಿ ತೋರಿಸುತ್ತದೆ. ಸ್ಯಾಮ್ ಬಹದ್ದೂರ್ ಡಿಸೆಂಬರ್ 1 ರಂದು ಥಿಯೇಟರ್‌ಗಳಿಗೆ ಬರಲಿದೆ ಮತ್ತು ರಣಬೀರ್ ಕಪೂರ್ ಅವರ ಅನಿಮಲ್ ಕೂಡ ಇದೇ ದಿನ ಬಿಡುಗಡೆಯಾಗಲಿದೆ.
ಶಿಕ್ಷಣದ ಕುರಿತು ದೀಪಿಕಾ ಮಾತಾಡಿದ್ರೆ ಟುಕ್ಡೆ ಟುಕ್ಡೆ ಗ್ಯಾಂಗ್ ಸಪೋರ್ಟ್ ಮಾಡಿದ್ದು ಇದ್ಕೇನಾ ಅನ್ನೋದಾ?