ಸ್ಯಾಂಡಲ್‌ವುಡ್ ಪ್ರೇಕ್ಷಕರಿಗೆ ಹಬ್ಬವೋ ಹಬ್ಬ: ರಾಜ್ ಬಿ ಶೆಟ್ಟಿ, ಕೃಷ್ಣ, ಅಭಿಶೇಕ್ ಮಧ್ಯೆ ಟಫ್ ಫೈಟ್!

By Govindaraj S  |  First Published Nov 27, 2023, 8:27 PM IST

ಟೈಂ ಚನ್ನಾಗಿದ್ರೆ ಯಾರ್ ಹೇಗೆ ಬೇಕಾದ್ರು ಗೆಲ್ತಾರೆ ಬಚಾವ್ ಆಗ್ತಾರೆ. ಅದೆ ಟೈಂ ಕೆಟ್ರೆ ಫೆಲ್ಯೂರ್ ಕಟ್ಟಿಟ್ಟ ಬುತ್ತಿ. ಭಟ್ ಸ್ಯಾಂಡಲ್ವುಡ್ ಮಟ್ಟಿಗೆ ಅದರಲ್ಲೂ ಈ ವಾರ ಬಂದ ಮೂರು ಸಿನಿಮಾಗಳ ಟೈಂ ಸೂಪರ್ ಆಗೇ ಇದೆ. ಆ ಮೂರು ಸಿನಿಮಾಗಳು ಪ್ರೇಕ್ಷಕರ ಮೆಚ್ಚುಗೆ ಪಡೆದು ಮುನ್ನುಗ್ಗುತ್ತಿವೆ. 


ಟೈಂ ಚನ್ನಾಗಿದ್ರೆ ಯಾರ್ ಹೇಗೆ ಬೇಕಾದ್ರು ಗೆಲ್ತಾರೆ ಬಚಾವ್ ಆಗ್ತಾರೆ. ಅದೆ ಟೈಂ ಕೆಟ್ರೆ ಫೆಲ್ಯೂರ್ ಕಟ್ಟಿಟ್ಟ ಬುತ್ತಿ. ಭಟ್ ಸ್ಯಾಂಡಲ್ವುಡ್ ಮಟ್ಟಿಗೆ ಅದರಲ್ಲೂ ಈ ವಾರ ಬಂದ ಮೂರು ಸಿನಿಮಾಗಳ ಟೈಂ ಸೂಪರ್ ಆಗೇ ಇದೆ. ಆ ಮೂರು ಸಿನಿಮಾಗಳು ಪ್ರೇಕ್ಷಕರ ಮೆಚ್ಚುಗೆ ಪಡೆದು ಮುನ್ನುಗ್ಗುತ್ತಿವೆ. ಆ ಸಿನಿಮಾಗಳೇ ಬ್ಯಾಡ್ ಮ್ಯಾನರ್ಸ್, ಶುಗರ್ ಫ್ಯಾಕ್ಟರಿ, ಸ್ವಾತಿ ಮುತ್ತಿನ ಮಳೆ ಹನಿಯೇ. ಡಾರ್ಲಿಂಗ್ ಕೃಷ್ಣ, ಅಭಿಶೇಕ್ ಅಂಬರೀಶ್ ಹಾಗು ರಾಜ್ ಬಿ ಶೆಟ್ಟಿ ಬಾಕ್ಸಾಫೀಸ್ನಲ್ಲಿ ಕಿತ್ತಾಡ್ತಾರೆ ಅಂತ ಗಾಂಧಿನಗರ ಹೇಳಿತ್ತು. ಯಾಕಂದ್ರೆ ಕೃಷ್ಣ ನಟನೆಯ ಶುಗರ್ ಫ್ಯಾಕ್ಟರಿ, ಅಭಿಶೇಕ್ ನಟನೆಯ ಬ್ಯಾಡ್ ಮ್ಯಾನರ್ಸ್ ಹಾಗು ರಾಜ್ ಬಿ ಶೆಟ್ಟಿ ಆಕ್ಟ್ ಮಾಡಿರೋ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾಗಳು ಒಂದೇ ದಿನ ಒಟ್ಟಿಗೆ ರಿಲೀಸ್ ಆಗಿದ್ವು. 

ಈಗ ಈ ಸಿನಿಮಾಗಳು ಬಿಡುಗಡೆ ಆಗಿ ಎರಡು ದಿನ ಆದ್ರೂ ಗಲ್ಲಾಪೆಟ್ಟಿಗೆಯಲ್ಲಿ ಸಮಭಲದ ಹೋರಾಟ ಮಾಡುತ್ತಿವೆ. ಈ ಮೂರು ಸಿನಿಮಾಗಳ ಪಕ್ಕಾ ಕಲೆಕ್ಷನ್ ವಿಚಾರಕ್ಕೆ ಬಂದ್ರೆ, ಬ್ಯಾಡ್ ಮ್ಯಾನರ್ಸ್ ಸಿನಿಮಾ ಸ್ವಲ್ಪ ಮುಂದಿಂದೆ. ಈ ಸಿನಿಮಾದ ಎರಡು ದಿನದ ಒಟ್ಟು ಕಲೆಕ್ಷನ್ ಮೂರು ಕೂಟಿ ಅಂತ ಹೇಳಲಾಗ್ತಿದೆ. ಆ ಕಡೆ ಶುಗರ್ ಫ್ಯಾಕ್ಟರಿ ಕೂಡ ಕಲೆಕ್ಷನ್ನಲ್ಲಿ ಮುನ್ನುಗ್ಗುತ್ತಿದೆ. ಕೌಸಲ್ಯ ಸುಪ್ರಜಾ ರಾಮ ಸಿನಿಮಾ ಸಕ್ಸಸ್ನಲ್ಲಿರೋ ಕೃಷ್ಣನಿಗೆ ಸೆಟ್ ಆಡಿಯೆನ್ಸ್ ಇದ್ದಾರೆ. ಕೃಷ್ಣನ ಶುಗರ್ ಫ್ಯಾಕ್ಟರಿ ಎರಡು ದಿನದ ಒಟ್ಟು ಕಲೆಕ್ಷನ್ ಎರಡುವರೆ ಕೋಟಿ ಅಂತ ಹೇಳಲಾಗ್ತಿದೆ. 

Tap to resize

Latest Videos



ಇನ್ನು ರಾಜ್ ಬಿ ಶೆಟ್ಟಿ. ಇವ್ರೊಂತರಾ ಸ್ಲೋ ಮೂವಿಂಗ್. ಬಟ್ ಸಕ್ಸಸ್ ಮಾತ್ರ ಫಿಕ್ಸ್. ರಾಜ್ ಬಿ ಶೆಟ್ಟಿ ನಟಿಸಿ ನಿರ್ದೇಶಿಸಿರೋ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಪ್ರೇಕ್ಷಕರನ್ನ ನಿಧಾನವಾಗಿ ಸೆಳೆಯುತ್ತಿದೆ. ರಮ್ಯಾ ನಿರ್ಮಾಣದ ಆ್ಯಪಲ್ ಬಾಕ್ಸ್ ಗೆ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದಿಂದ ಕೋಟಿ ರೂಪಾಯಿ ಬಂದಿದೆಯಂತೆ. ಮುಂದಿನ ದಿನಗಳನ್ನ ಈ ಸಿನಿಮಾ ಕಲೆಕ್ಷನ್ ಇನ್ನೂ ಹೆಚ್ಚಾಗಲಿದೆ ಅನ್ನೋ ನಿರೀಕ್ಷೆ ಇದೆ. ಒಟ್ಟಿನಲ್ಲಿ ಈ ವಾರ ಬಿಡುಗಡೆ ಆದ ಬ್ಯಾಡ್ ಮ್ಯಾನರ್ಸ್, ಸ್ವಾತಿ ಮುತ್ತಿನ ಮಳೆ ಹನಿಯೇ ಹಾಗು ಶುಗರ್ ಫ್ಯಾಕ್ಟರಿ ಸಿನಿಮಾಗಳು ಸಕ್ಸಸ್ ಹಾದಿಯಲ್ಲಿರದು ಕನ್ನಡ ಚಿತ್ರರಂಗಕ್ಕೆ ಹೊಸ ಶಕ್ತಿ ತರಿಸಿದೆ. 

click me!