ಶೈಲ ಶ್ರೀಯವರು ಒಂದು ಕಾಲದಲ್ಲಿ ಡಾ.ರಾಜ್ ಕುಮಾರ್ ಜೋಡಿಯಾಗಿ ನಟಿಸಿದವರು. ನಿಜ ಬದುಕಿನಲ್ಲಿ ಆರ್ ಎನ್ ಸುದರ್ಶನ್ ಜತೆಗೆ ಅಪೂರ್ವ ಜೋಡಿಯೆನಿಸಿದವರು. ಒಮ್ಮೆ ಗಗನ ಸಖಿಯಾಗಿದ್ದವರು. ಬಳಿಕ ಸಿನಿಮಾ ನಾಯಕಿಯಾದರು. ಇವರು ಬರೆದ ಕತೆಯನ್ನು ಇರಿಸಿಕೊಂಡು ಸುದರ್ಶನ್ `ನಗುವ ಹೂವು' ಎನ್ನುವ ಚಿತ್ರವನ್ನು ನಿರ್ಮಿಸಿದ್ದರು. ಒಟ್ಟಿನಲ್ಲಿ ಸಿನಿಮಾ, ಧಾರಾವಾಹಿ ಎಂದು ಇತ್ತೀಚಿನ ವರ್ಷಗಳ ತನಕ ಪತಿಯೊಂದಿಗೆ ಸಕ್ರಿಯರಾಗಿದ್ದರು. ಮೂರು ವರ್ಷಗಳ ಹಿಂದೆ ಸುದರ್ಶನ್ ನಿಧನವಾದ ಬಳಿಕ ಕೂಡ ಅವರಿಗೆ ಒಂಟಿತನ ಕಾಡದಂತೆ ಮಾಡಿರುವುದು ಕೂಡ ಬಣ್ಣದ ಲೋಕವೇ. ಜತೆಗೆ 'ಹನಿ' ಹೆಸರಿನ ಬೆಕ್ಕು ಕೂಡ ಆಪ್ತವಾಗಿದೆ. ಬದುಕಲ್ಲಿ ಕಂಡ ಬದಲಾವಣೆಗಳ ಬಗ್ಗೆ ಅವರು ಸುವರ್ಣ ನ್ಯೂಸ್.ಕಾಮ್ ಜತೆಗೆ ಮಾತನಾಡಿದ್ದಾರೆ.
ಶೈಲ ಶ್ರೀಯವರು ಒಂದು ಕಾಲದಲ್ಲಿ ಡಾ.ರಾಜ್ ಕುಮಾರ್ ಜೋಡಿಯಾಗಿ ನಟಿಸಿದವರು. ನಿಜ ಬದುಕಿನಲ್ಲಿ ಆರ್ ಎನ್ ಸುದರ್ಶನ್ ಜತೆಗೆ ಅಪೂರ್ವ ಜೋಡಿಯೆನಿಸಿದವರು. ಒಮ್ಮೆ ಗಗನ ಸಖಿಯಾಗಿದ್ದವರು. ಬಳಿಕ ಸಿನಿಮಾ ನಾಯಕಿಯಾದರು. ಇವರು ಬರೆದ ಕತೆಯನ್ನು ಇರಿಸಿಕೊಂಡು ಸುದರ್ಶನ್ `ನಗುವ ಹೂವು' ಎನ್ನುವ ಚಿತ್ರವನ್ನು ನಿರ್ಮಿಸಿದ್ದರು. ಒಟ್ಟಿನಲ್ಲಿ ಸಿನಿಮಾ, ಧಾರಾವಾಹಿ ಎಂದು ಇತ್ತೀಚಿನ ವರ್ಷಗಳ ತನಕ ಪತಿಯೊಂದಿಗೆ ಸಕ್ರಿಯರಾಗಿದ್ದರು. ಮೂರು ವರ್ಷಗಳ ಹಿಂದೆ ಸುದರ್ಶನ್ ನಿಧನವಾದ ಬಳಿಕ ಕೂಡ ಅವರಿಗೆ ಒಂಟಿತನ ಕಾಡದಂತೆ ಮಾಡಿರುವುದು ಕೂಡ ಬಣ್ಣದ ಲೋಕವೇ. ಜತೆಗೆ 'ಹನಿ' ಹೆಸರಿನ ಬೆಕ್ಕು ಕೂಡ ಆಪ್ತವಾಗಿದೆ. ಬದುಕಲ್ಲಿ ಕಂಡ ಬದಲಾವಣೆಗಳ ಬಗ್ಗೆ ಅವರು ಸುವರ್ಣ ನ್ಯೂಸ್.ಕಾಮ್ ಜತೆಗೆ ಮಾತನಾಡಿದ್ದಾರೆ.
ಶಶಿಕರ ಪಾತೂರು
undefined
ಸುದರ್ಶನ್ ಅವರನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೀರಿ?
ಅವರು ತೀರಿ ಹೋದ ಮೂರು ದಿನಗಳ ಕಾಲ ನನಗೆ ಏನೇನು ಅರ್ಥವಾಗುತ್ತಿರಲಿಲ್ಲ. ಆಮೇಲೆ ನನ್ನನ್ನು ನಾನೇ ಸಮಾಧಾನಿಸಿಕೊಳ್ಳುವುದು ಅನಿವಾರ್ಯವಾಯಿತು. ನನ್ನ ತಮ್ಮ ಪಾಟ್ನಾದಿಂದ ಬಂದಿದ್ದ. ಆತ ರಿಟೈರ್ಡ್ ವಿಂಗ್ ಕಮಾಂಡರ್. ತನ್ನೊಂದಿಗೆ ಪಾಟ್ನಾಕ್ಕೆ ಬರುವಂತೆ ಹೇಳಿದ್ದ. ಆದರೆ ನಾನು ಒಬ್ಬ ಕಲಾವಿದೆ. ಅಲ್ಲಿ ಬಂದು ಸುಮ್ಮನೆ ಮನೆಯೊಳಗೆ ಇರುವುದು ನನ್ನಿಂದ ಸಾಧ್ಯವಿಲ್ಲ ಎಂದೆ. ಹಾಗಾಗಿ ಈಗ ಬೆಂಗಳೂರಿನ ಮಲ್ಲತ್ತಹಳ್ಳಿ ಮನೆಯಲ್ಲಿ ನಾನು ಒಂಟಿ. ಜತೆಗೆ ಮುದ್ದಿನ ಬೆಕ್ಕು ಹನಿ ಇದೆ. ಇದು ಅಪಾರ್ಟ್ಮೆಂಟ್ಮೆಂಟ್ ಆಗಿರುವ ಕಾರಣ, ಅಕ್ಕಪಕ್ಕದ ಮನೆಯವರ ಆತ್ಮೀಯತೆ ಇದೆ. ನಾನು ಲೈಫಲ್ಲಿ ಫೈಟರ್. ಯಾವುದಕ್ಕೂ ಹೆದರಿದವಳಲ್ಲ. ಎಂಥವನ್ನೂ ಎದುರಿಸಬಲ್ಲೆ! ಆದರೆ ನನ್ನನ್ನು ಸದಾ ಶಾಂತವಾಗಿರುವಂತೆ ನೋಡಿಕೊಳ್ಳುತ್ತಿದ್ದುದೇ ನನ್ನ ಪತಿ. ಯಾವುದೇ ಅನ್ಯಾಯದ ವಿರುದ್ಧ ನಾನು ಹೋರಾಟಕ್ಕೆ ತಯಾರಾದರೆ "ಬೇಡ ಮರಿ ಬಿಟ್ಟುಬಿಡು" ಎಂದು ಸಮಾಧಾನ ಮಾಡುತ್ತಿದ್ದರು. ಅವೆಲ್ಲವನ್ನು ಮಿಸ್
ನಮ್ಮನ್ನಗಲಿದ ಗಂಗಾಧರಯ್ಯನ ನೆನಪಲ್ಲಿ ವಿಜಯ ಸೂರ್ಯ ...
ಲಾಕ್ಡೌನ್ ದಿನಗಳನ್ನು ಹೇಗೆ ನಿಭಾಯಿಸಿದಿರಿ?
ಮೊದಲಿಂದಲು ಅಡುಗೆ ಮಾಡೋದು ನನಗೆ ಹೊಸತಲ್ಲ. ಫೋನಲ್ಲೇ ಹೇಳಿದರೆ ಅಂಗಡಿಯಿಂದ ಸಾಮಾನು ತಂದಿಡುತ್ತಾರೆ. ಮಾತ್ರವಲ್ಲ, ಅಕ್ಕಪಕ್ಕದ ಮನೆಯವರು ಕೂಡ ಅಂಗಡಿಗೆ ಹೋಗುವಾಗ ನನಗೂ ಏನಾದರೂ ತಂದು ಸಹಾಯ ಮಾಡುತ್ತಿರುತ್ತಾರೆ. ಆದರೆ ನಟನೆ ಮಾಡದೆ ದಿನ ಕಳೆಯುವುದು ಮಾತ್ರ ಬೇಸರವಾಗುತ್ತದೆ. ಲಾಕ್ಡೌನ್ ಗೆ ಮೊದಲು `ಶ್ರುತಿ ಸೇರಿದಾಗ' ಎನ್ನುವ ಧಾರಾವಾಹಿಯಲ್ಲಿ ಸಣ್ಣದೊಂದು ಪಾತ್ರ ಮಾಡುತ್ತಿದ್ದೆ. `ಸ್ಟಾರ್ ಸುವರ್ಣ'ದಲ್ಲಿ ಪ್ರಸಾರವಾಗುತ್ತಿದ್ದ ಆ ಧಾರಾವಾಹಿ ಕೂಡ ನಿರ್ದೇಶಕ ಹೊನ್ನೇಶ್ ಅವರ ಮೂಲಕ ದೊರಕಿತ್ತು. ಆಗ ನಾನು ಖಾಲಿ ಕೂತಿದ್ದು ಗೊತ್ತಾಗಿಯೇ ಹೊನ್ನೇಶ್ ಅವರು ನನ್ನನ್ನು ಸಂಪರ್ಕಿಸಿ ಸಣ್ಣ ಪಾತ್ರ ಎಂದು ಸಂಕೋಚದಿಂದಲೇ ಹೇಳಿದ್ದರು. ಆದರೆ ನಾನು ನಟಿಸುವುದು ಮುಖ್ಯ ಎಂದು ಹೇಳಿ ಪಾತ್ರವನ್ನು ಒಪ್ಪಿಕೊಂಡಿದ್ದೆ. ಅದಕ್ಕೂ ಮೊದಲು ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ `ಬ್ರಹ್ಮಾಸ್ತ್ರ' ಧಾರಾವಾಹಿಯಲ್ಲಿ ಒಂದು ಒಳ್ಳೆಯ ಪಾತ್ರ ಮಾಡಿದ್ದೆ. ಶಿವರಾಮ್ ಅವರು ಹೇಳಿದ್ದರು, ತಮಗೆ ಶ್ರುತಿ ನಾಯ್ಡು ಎಲ್ಲ ಪರಿಚಯ ಇದ್ದಾರೆ; ಅವರ ಧಾರಾವಾಹಿ ಚಿತ್ರೀಕರಣ ಶುರುವಾದಾಗ ಒಂದೊಳ್ಳೆಯ ಪಾತ್ರಕ್ಕೆ ರೆಫರ್ ಮಾಡುವುದಾಗಿ ತಿಳಿಸಿದ್ದರು. ಆದರೆ ಆಮೇಲೆ ಏನಾಯಿತು ಗೊತ್ತಿಲ್ಲ. ಒಟ್ಟಿನಲ್ಲಿ ಕೋವಿಡ್ ಬಂದಾಗಿನಿಂದ ಇರುವ ಅವಕಾಶಗಳು ಕೂಡ ಇಲ್ಲದಂತಾಯಿತು.
ಸದ್ಯದಲ್ಲೇ `ಟಾಕೀಸ್' ಬಾಗಿಲು ತೆರೆಯಲಿದ್ದಾರೆ ಸೃಜನ್..!
ಚಿತ್ರರಂಗದಿಂದ ಏನನ್ನಾದರೂ ನಿರೀಕ್ಷೆ ಮಾಡುತ್ತಿದ್ದೀರ?
ಒಳ್ಳೆಯ ಪಾತ್ರಗಳ ಮೂಲಕ ನಟನೆಯ ಅವಕಾಶ ಬಿಟ್ಟರೆ ನಾನು ಹಿಂದೆಯೂ ಏನೂ ನಿರೀಕ್ಷಿಸಿರಲಿಲ್ಲ. ಮುಂದೆಯೂ ನಿರೀಕ್ಷಿಸುವುದಿಲ್ಲ. ಸದ್ಯಕ್ಕೆ ಆರ್ಥಿಕವಾಗಿ ನನಗೆ ಸಮಸ್ಯೆಗಳಿಲ್ಲ. ಪಾಟ್ನಾದಲ್ಲಿರುವ ನನ್ನ ತಮ್ಮ ಅಲ್ಲಿಂದ ತಿಂಗಳು ಸ್ವಲ್ಪ ದುಡ್ಡು ಕಳಿಸುತ್ತಾನೆ. ಅವನು ಯಾವಾಗ ಬೇಕಾದರೂ `ಅಕ್ಕ ನಾನಿದ್ದೀನಿ' ಅಂತ ಸಹಾಯಕ್ಕೆ ರೆಡಿಯಾಗಿರ್ತಾನೆ. ಫೋನಲ್ಲಿ `ಹಲೋ' ಎಂದರೆ ಸಾಕು ನನ್ನ ಧ್ವನಿಯಿಂದಲೇ `ಕಷ್ಟ ಇದೆಯಾ? ಸಮಸ್ಯೆ ಇದೆಯಾ' ಎಂದು ಅರ್ಥ ಮಾಡಿಕೊಳ್ಳಬಲ್ಲ. ಇನ್ನು ನಮ್ಮಕ್ಕ ಇಲ್ಲೇ ಬಿಡದಿಯಲ್ಲಿದ್ದಾಳೆ. ಆದರೆ ಆಕೆಯ ಎರಡು ಕಾಲು ಕೂಡ ಪ್ರಾಕ್ಚರ್ ಆಗಿರುವ ಕಾರಣ ಓಡಾಡೋಕೆ ಆಗಲ್ಲ. ನಾನು ನನ್ನ ಯಜಮಾನ್ರು ಇದ್ದಾಗ ಅವರ ಜತೆಗೆ ಹೋಗಿ ನೋಡಿಕೊಂಡು ಬರುತ್ತಿದ್ದೆವು. ಹಾಗಾಗಿ ಈಗ ಆತ್ಮೀಯರು ಹತ್ತಿರದಲ್ಲಿಲ್ಲ ಅನಿಸಿ ಬಿಡುತ್ತದೆ. ಉಳಿದಂತೆ ಕೋವಿಡ್ ಸಮಯದಲ್ಲಿ ಚಲನಚಿತ್ರ ಅಕಾಡೆಮಿ ಕಡೆಯಿಂದ ವಿತರಿಸಲಾದ ರಿಲಯನ್ಸ್ ಕೂಪನ್ ನನ್ನ ಕೈಗೆ ತಲುಪಿದೆ. ಮುಂದೆ ಸಿನಿಮಾ ಫೀಲ್ಡ್ ನಿಂದ ಕಲಾವಿದರ ಅಕೌಂಟ್‌ಗೆ ಐದು ಸಾವಿರ ಸಿಗಲಿದೆ ಎನ್ನುವ ಸುದ್ದಿ ಇದೆ. ನನಗೆ ಊಟ, ತಿಂಡಿಗಾಗಿ ದುಡಿದು ದುಡ್ಡು ಮಾಡಬೇಕಾದ ಅಗತ್ಯವಿಲ್ಲ. ಆದರೆ ನಟನೆಯಲ್ಲಿ ತೃಪ್ತಿ ಇರುತ್ತದೆ. ಕಲಾವಿದೆಯಾಗಿ ಸೆಟ್ ನಲ್ಲಿದ್ದಾಗ ಧಾರಾವಾಹಿ ತಂಡದ ಮಂದಿ ತುಂಬ ಆದರದಿಂದ ನೋಡುತ್ತಾರೆ. ಇದಕ್ಕಿಂತ ಹೆಚ್ಚಿನದೇನು ನಿರೀಕ್ಷೆ ಮಾಡಲಿ? ಆದರೆ ವೈಯಕ್ತಿಕವಾಗಿ ನನ್ನ ಒಂದಷ್ಟು ಕೆಲಸಗಳು ಬಾಕಿ ಉಳಿದಿವೆ. ಅವುಗಳ ಬಗ್ಗೆ ಇನ್ನೊಮ್ಮೆ ಮಾತನಾಡುತ್ತೇನೆ.