ಸ್ಯಾಂಡಲ್‌ವುಡ್ ಕ್ರಶ್ ರಶ್ಮಿಕಾ ಮಂದಣ್ಣ ಜೊತೆ ಇನ್ನೆರಡು ವರ್ಷ ವಿಜಯ್ ದೇವರಕೊಂಡ ಸಿನಿಮಾ ಮಾಡುವುದಿಲ್ಲವಂತೆ. ಇನ್‌ಸ್ಟಾಗ್ರಾಂ ಸ್ಟೇಟಸ್ ನಲ್ಲಿ ಅಭಿಮಾನಿ ಕೇಳಿದ ಪ್ರಶ್ನೆಗೆ ರಶ್ಮಿಕಾ ಕೊಟ್ಟ ಉತ್ತರ ಇದು!
‘ಡಿಯರ್ ಕಾಮ್ರೆಡ್’ ಚಿತ್ರದ ನಂತರ ಗಾಸಿಪ್ ಸೆಲೆಬ್ರಿಟಿಗಳೆಂದು ಖ್ಯಾತರಾದವರು ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ. ಲಿಲ್ಲಿ ಕೆಲ ದಿನಗಳ ಹಿಂದೆ ಇನ್‌ಸ್ಟಾಗ್ರಾಂ ಖಾತೆಯ ಸ್ಟೇಟಸ್ ನಲ್ಲಿ ಅಭಿಮಾನಿಗಳಿಗೆ ಪ್ರಶ್ನೆ ಕೇಳುವ ಅವಕಾಶ ನೀಡಿದ್ದು ಅಭಿಮಾನಿಗಳು ಕೇಳಿದ ಪ್ರಶ್ನೆಗೆ ರಶ್ಮಿಕಾ ಟಕ್ಕರ್ ಉತ್ತರ ಕೊಟ್ಟಿದ್ದಾರೆ.
ಕನ್ನಡಿಗರ ಬಗ್ಗೆ ಒಂದೇ ಪದದಲ್ಲಿ ವರ್ಣಿಸಿ; ರಶ್ಮಿಕಾ ಉತ್ತರಕ್ಕೆ ಫ್ಯಾನ್ಸ್ ಬೋಲ್ಡ್!
undefined
ಅಭಿಮಾನಿಯೊಬ್ಬ 'ನಿಮ್ಮ ಹಾಗೂ ವಿಜಯ್ ಜೋಡಿ ಸೂಪರ್. ನೀವಿಬ್ಬರು ಯಾಕೆ ಡೇಟಿಂಗ್ ಮಾಡಬಾರದು? ' ಎಂದು ಕೇಳಿದ ಪ್ರಶ್ನೆಗೆ 'ನಮ್ಮಿಬ್ಬರಿಗೂ ಮಾಡಲು ತುಂಬಾ ಕೆಲಸಗಳಿವೆ. ನಮ್ಮ ಕೆಲಸದ ವಿಚಾರದಲ್ಲಿ ನಾವು ಒಬ್ಬರನ್ನೊಬ್ಬರು ಪ್ರೀತಿಸಿ ಗೌರವಿಸುತ್ತೇವೆ. ವಿಜಯ್‌ಗೆ ನಾನು ತುಂಬಾ ಕಿರಿಕಿರಿ ಮಾಡಿದ್ದೇನೆ. ಇನ್ನು ಎರಡು ವರ್ಷ ವಿಜಯ್ ನನ್ನೊಟ್ಟಿಗೆ ಕೆಲಸ ಮಾಡುವುದಿಲ್ಲ ' ಎಂದು ಉತ್ತರಿಸಿದ್ದರು.
ರಶ್ಮಿಕಾ ಮೇಲೆ ಕಾಲಿಟ್ಟು ಉದ್ಧಟತನ ತೋರಿಸಿದ ವಿಜಯ್ ದೇವರಕೊಂಡ!
ಈ ಉತ್ತರ ಕೇಳಿದಾಗ ರಶ್ಮಿಕಾ - ವಿಜಯ್ ನಡುವೆ ಏನೋ ನಡೆದಿದೆ. ಇಬ್ಬರ ನಡುವೆ ಕುಚ್ ಕುಚ್ ನಡೆದಿದೆ ಎಂದೆನಿಸೋದು ಸಹಜ. ಆದರೆ ಅಂತದ್ದೇನೂ ನಡೆದಿಲ್ಲ. ಈ ಉತ್ತರಕ್ಕೆ ಅಸಲಿ ಕಾರಣ ಇವರಿಬ್ಬರಿಗೂ ಕೈ ತುಂಬಾ ಸಿನಿಮಾಗಳಿವೆ. ರಶ್ಮಿಕಾ ಈಗಾಗಲೇ ಸ್ಟಾರ್ ನಟರೊಂದಿಗೆ ಸಿನಿಮಾ ಮಾಡಲು ಒಪ್ಪಿಕೊಂಡಿದ್ದು ಕಾಲ್ ಶೀಟ್ ಫ್ರೀ ಇಲ್ಲದಷ್ಟು ಬ್ಯುಸಿಯಾಗಿದ್ದಾರೆ.