
ಕನ್ನಡಕ್ಕೆ ಇದು ಡಬ್ ಆಗಿಲ್ಲ. ಆದರೆ ಮೂರು ಅವತರಣಿಕೆಯಲ್ಲೂ ಇದು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ತೆರೆಗೆ ಬರುತ್ತಿರುವುದು ಗ್ಯಾರಂಟಿ ಆಗಿದೆ. ಇದರಿಂದಾಗಿ ರಿಲೀಸ್ ಆದ ಕನ್ನಡ ಸಿನಿಮಾಗಳಿಗೆ ಚಿತ್ರಮಂದಿರ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ರಿಲೀಸ್ ಆದ ಸಿನಿಮಾಗಳಿಗೆ ಏಟು
ಸದ್ಯಕ್ಕೀಗ ರಾಜ್ಯದ ಚಿತ್ರಮಂದಿರಗಳಲ್ಲಿ ದರ್ಶನ್ ಅಭಿನಯದ ‘ಕುರುಕ್ಷೇತ್ರ’, ಕಿಶೋರ್ ಹಾಗೂ ಪ್ರಿಯಾಮಣಿ ಅಭಿನಯದ ‘ನನ್ನ ಪ್ರಕಾರ’, ರಾಜ್ ಬಿ ಶೆಟ್ಟಿಅಭಿನಯದ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’, ಭುವನ್ ಪೊನ್ನಣ್ಣ ಅಭಿನಯದ ‘ರಾಂಧವ’ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ.
ಮಲ್ಟಿಪ್ಲೆಕ್ಸ್ ಹೊರತು ಪಡಿಸಿ, ರಾಜ್ಯಾದ್ಯಂತ ಇರುವ ಸರಿ ಸುಮಾರು 600ಕ್ಕೂ ಹೆಚ್ಚು ಏಕಪರದೆಯ ಚಿತ್ರಮಂದಿರಗಳ ಪೈಕಿ ಬಹುತೇಕ ಚಿತ್ರಮಂದಿರಗಳಲ್ಲಿ ಈ ಸಿನಿಮಾಗಳಿಗೆ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದೆ. ಅದರ ಜತೆಗೆ ಸಣ್ಣ ಬಜೆಟ್‌ನ ಕೆಲವು ಸಿನಿಮಾಗಳು ಕೂಡ ಬಿಡುಗಡೆ ಆಗಿವೆ. ಕಳೆದ ವಾರ ಯಾವುದೇ ಅದ್ಧೂರಿ ವೆಚ್ಚದ ಸ್ಟಾರ್ ಸಿನಿಮಾ ತೆರೆ ಕಾಣುವುದು ಕೂಡ ಈ ಸಿನಿಮಾಗಳಿಗೆ ವರವಾಗಿದೆ. ಆದರೆ ಇವಿಷ್ಟುಸಿನಿಮಾಗಳಿಗೂ ಈಗ ‘ ಸಾಹೋ’ ಭೀತಿ ಎದುರಾಗಿದೆ. ಸಾಹೋ ಎಂಟ್ರಿಯಿಂದ ಚಿತ್ರಮಂದಿರಗಳನ್ನು ಕಳೆದುಕೊಳ್ಳುವ ಆತಂಕವಿದೆ.
ಎಲ್ಲಾ ಕಡೆಗಳಲ್ಲೂ ನಮ್ಮ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಸಿನಿಮಾ ಚೆನ್ನಾಗಿದೆ ಎನ್ನುವ ಮಾತುಗಳು ಕೇಳಿ ಬಂದಿವೆ. ಈಗ ಚಿತ್ರಮಂದಿರಗಳಿಗೆ ಜನರು ಬರುತ್ತಿದ್ದಾರೆ. ಇಂತಹ ಸಂದರ್ಭದಲ್ಲೇ ತೆಲುಗಿನ ‘ಸಾಹೋ’ ಸಿನಿಮಾ ಹಲವು ಚಿತ್ರಮಂದಿರಗಳಿಗೆ ಬರುವ ಆತಂಕ ಎದುರಾಗಿದೆ. ಕೆಲವು ಚಿತ್ರಮಂದಿರಗಳಲ್ಲಿ ಆ ಮಾತು ಕೇಳಿ ಬಂದಿದೆ. - ವಿನಯ್, ‘ನನ್ನ ಪ್ರಕಾರ’ ಚಿತ್ರದ ನಿರ್ದೇಶಕ
ಸಾಹೋ ವಿತರಣೆ ಟೀಮಲ್ಲಿ ಇದ್ದಾರ ಜಯಣ್ಣ!
ತೆಲುಗಿನ ‘ಸಾಹೋ’ ವಿತರಣೆಯ ಹಕ್ಕನ್ನು ಕರ್ನಾಟಕದಲ್ಲಿ ಸ್ವಾಗತ್ ಎಂಟರ್‌ಪ್ರೈಸಸ್‌ನ ಜಾನಿ ಅಲಿಯಾಸ್ ಜನಾರ್ದನ್ ಖರೀದಿಸಿದ್ದಾರೆ. ಮೂಲಗಳ ಪ್ರಕಾರ ಬೆಂಗಳೂರು, ತುಮಕೂರು ಹಾಗೂ ಕೋಲಾರ ಸೇರಿದಂತೆ ಇಡೀ ರಾಜ್ಯದ ವಿತರಣೆ ಹಕ್ಕು ಖರೀದಿಗೆ 20 ಕೋಟಿ ರೂ.
ಸೂಪರ್‌ಸ್ಟಾರ್‌ಗಳಿಗೆ ಸಡ್ಡು ಹೊಡೆಯುವಷ್ಟು ಸಂಭಾವನೆ ಪಡೆದ್ರಾ ಪ್ರಭಾಸ್?
ನೀಡಿದ್ದಾರೆನ್ನುವ ಸುದ್ದಿ. ಈ ಪೈಕಿ ಈಗ ಅವರು ಮಲ್ಟಿಪ್ಲೆಕ್ಸ್ ಮತ್ತು ಬಿಕೆಟಿ ಹೊರತು ಪಡಿಸಿ, ಇಡೀ ರಾಜ್ಯದ ವಿತರಣೆಯ ಜವಾಬ್ದಾರಿಯನ್ನು ಜಯಣ್ಣ ಅವರಿಗೆ ನೀಡಿದ್ದಾರಂತೆ. ಅವರಿಬ್ಬರೂ ಸೇರಿ ಈಗ ರಾಜ್ಯಾದ್ಯಂತ ಒಟ್ಟು 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಮೊದಲ ದಿನವೇ 600 ಶೋಗಳ ಮೂಲಕ ‘ಸಾಹೋ’ ಸವಾರಿ ನಡೆಸಲು ಮುಂದಾಗಿದ್ದಾರೆನ್ನುವ ಮಾಹಿತಿಯಿದೆ. ಅಷ್ಟುಪ್ರದರ್ಶನಕ್ಕೆ ಇಲ್ಲಿನ ಚಿತ್ರಮಂದಿರಗಳಲ್ಲಿ ಅವಕಾಶ ಸಿಗುವುದಾದರೆ, ಅಲ್ಲಿರುವ ಕನ್ನಡ ಸಿನಿಮಾಗಳಿಗೆ ಕೊಕ್ ನೀಡುವುದು ಖಚಿತ.
ಒಂದು ತಿಂಗಳು ತಲೆ ಎತ್ತುವುದು ಕಷ್ಟ
ರಾಜ್ಯದಲ್ಲಿ ‘ಸಾಹೋ’ ಬಿಡುಗಡೆ ಆಗುವುದರಿಂದ ರಿಲೀಸ್ ಆದ ಕನ್ನಡ ಸಿನಿಮಾಗಳಿಗೆ ಚಿತ್ರಮಂದಿರಗಳ ಕೊರತೆ ಆಗಲಿದೆ ಎನ್ನುವುದು ಆರಂಭದ ಆತಂಕವಾದರೂ ಮುಂದಿನ ದಿನಗಳಲ್ಲೂ ಅದು ಸೃಷ್ಟಿಸಬಹುದಾದ ಭೀತಿ ದೊಡ್ಡದಿದೆ. ಇದೇ ವಾರ ಬಿಡುಗಡೆ ಆಗಲು ಸಿದ್ಧತೆ ನಡೆಸಿದ್ದ ಅನೇಕ ಸಣ್ಣ ಬಜೆಟ್ ಸಿನಿಮಾಗಳು ಮುಂದಕ್ಕೆ ಹೋಗಿವೆ. ಮುಂದಿನ ವಾರ ರಿಲೀಸ್ ಮಾಡೋಣ ಎನ್ನುವವರು ಹೇಗೋ ಏನೋ ಎನ್ನುವ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕರುನಾಡ ಈ ಮೇರು ನಟನಿಗೆ 'ಬಾಹುಬಲಿ' ಪ್ರಭಾಸ್ ಸಹ ಫುಲ್ ಫಿದಾ!
‘ಸದ್ಯಕ್ಕೀಗ ನಮಗೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಸಿನಿಮಾ ಬದಲಾಯಿಸುವ ಬಗ್ಗೆ ಆತಂಕ ಇಲ್ಲ. ಆದರೆ ಬೆಂಗಳೂರಿನ ಬಹುತೇಕ ಮಲ್ಟಿಪ್ಲೆಕ್ಸ್‌ಗಳಲ್ಲಿ ಅಂತಹ ಆತಂಕ ಶುರುವಾಗಿದೆ. ಮಲ್ಟಿಪ್ಲೆಕ್ಸ್‌ನವರೇ ಕಾಲ್ ಮಾಡಿ ಸಾಹೋ ಚಿತ್ರಕ್ಕಾಗಿ ಸಿನಿಮಾ ತೆಗೆಯುತ್ತಿದ್ದೇವೆ, ಇಲ್ಲವೇ ಬೇರೆ ಟೈಮ್‌ಗೆ ಫಿಕ್ಸ್ ಮಾಡುತ್ತೇವೆ ಎನ್ನುತ್ತಿದ್ದಾರೆ. ಇದರಿಂದ ತುಂಬಾ ನೋವಾಗಿದೆ. ಪರಭಾಷೆ ಸಿನಿಮಾಗಳಿಗಾಗಿ ಕನ್ನಡ ಸಿನಿಮಾಗಳನ್ನು ಕಡೆಗಣಿಸಲಾಗುತ್ತಿದೆ’ ಎನ್ನುತ್ತಾರೆ ‘ರಾಂಧವ’ ಚಿತ್ರದ ನಾಯಕ ನಟ ಭುವನ್ ಪೊನ್ನಣ್ಣ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.