ಬಿಡುಗಡೆಗೆ ಮುನ್ನ 20 ಕೋಟಿ ಗಳಿಸಿದ ಕುರುಕ್ಷೇತ್ರ!

By Web DeskFirst Published May 21, 2019, 9:10 AM IST
Highlights

ನಟ ದರ್ಶನ್‌ ಸೇರಿದಂತೆ ಬಹುಭಾಷೆಯ, ಬಹು ತಾರಾಗಣವನ್ನು ಒಳಗೊಂಡಿರುವ, ನಾಗಣ್ಣ ನಿರ್ದೇಶನದ ‘ಮುನಿರತ್ನ ಕುರುಕ್ಷೇತ್ರ’ ಚಿತ್ರಕ್ಕೆ ಬಿಡುಗಡೆಯ ಮುಹೂರ್ತ ಕೂಡಿ ಬಂದಿದೆ. ಆಗಸ್ಟ್‌ 9 ರಂದು ತೆರೆಗೆ ಬರುತ್ತಿರುವ ಈ ಚಿತ್ರದ ಅಧಿಕೃತ ವ್ಯಾಪಾರ ಎಷ್ಟುಎನ್ನುವ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಇದನ್ನು ನಿರ್ಮಾಪಕ ಮುನಿರತ್ನ ಅವರೇ ಖಚಿತಪಡಿಸಿದ್ದಾರೆ. ಹಾಗಾದರೆ ತೆರೆಗೆ ಬರುವ ಮುನ್ನವೇ ಈ ಸಿನಿಮಾದ ವಹಿವಾಟು ಎಷ್ಟು?

20 ಕೋಟಿ ಬ್ಯುಸೆನೆಸ್‌

ಮುನಿರತ್ನಂ ಹೇಳುವಂತೆ ಇಲ್ಲಿವರೆಗೂ 20 ಕೋಟಿ ವಹಿವಾಟು ಮಾಡಲಾಗಿದೆ. ಅದು ಕೂಡ ಕೇವಲ ಟೀವಿ ರೈಟ್ಸ್‌ ಹಾಗೂ ಆಡಿಯೋ ರೈಟ್ಸ್‌ನಲ್ಲಿ ಮಾತ್ರ ಎಂಬುದು ವಿಶೇಷ. ಹಿಂದಿ ಸ್ಯಾಟಿಲೈಟ್‌ ಹಕ್ಕುಗಳನ್ನು 9.5 ಕೋಟಿಗೆ ಈಗಾಗಲೇ ಮಾರಲಾಗಿದೆ. ಇನ್ನೂ ಕನ್ನಡದಲ್ಲಿ ಟೀವಿ ಹಕ್ಕುಗಳನ್ನು 9 ಕೋಟಿ ಕೊಟ್ಟಿದ್ದು, ಆಡಿಯೋ ಹಕ್ಕುಗಳನ್ನು 1.5 ಕೋಟಿ ಕೊಟ್ಟು ಲಹರಿ ಆಡಿಯೋ ಸಂಸ್ಥೆ ತಮ್ಮದಾಗಿಸಿಕೊಂಡಿದೆ. ಅಲ್ಲಿಗೆ ‘ಮುನಿರತ್ನ ಕುರುಕ್ಷೇತ್ರ’ ಚಿತ್ರದ ಸುತ್ತ ಇಲ್ಲಿವರೆಗೂ ಆಗಿರುವ ಒಟ್ಟು ಬ್ಯುಸಿನೆಸ್‌ 20 ಕೋಟಿ ಮಾತ್ರ.

ನಾಲ್ಕು ಭಾಷೆಗಳಲ್ಲಿ ಕುರುಕ್ಷೇತ್ರ ಪೋಸ್ಟರ್ ರಿಲೀಸ್

ಇಲ್ಲಿವರೆಗೂ ಟೀವಿ ರೈಟ್ಸ್‌ ಹಾಗೂ ಕನ್ನಡದ ಆಡಿಯೋ ಮಾರಾಟ ಹೊರತಾಗಿ ಬೇರೆ ಯಾವುದೇ ರೀತಿಯ ಬ್ಯುಸಿನೆಸ್‌ ಮಾಡಿಲ್ಲ. ಹೀಗಾಗಿ ನಮ್ಮ ಚಿತ್ರದ ಸುತ್ತ ಏನೇ ಬ್ಯುಸಿನೆಸ್‌ ಮಾತುಗಳು ಬಂದರೂ ಅದೆಲ್ಲ ಊಹೆಗಳು ಮಾತ್ರ.- ಮುನಿರತ್ನ, ನಿರ್ಮಾಪಕ

ಮೊದಲು ವಾಯ್ಸ್ ಕೊಟ್ಟಿದ್ದು ಅಂಬರೀಶ್‌

‘ಮುನಿರತ್ನ ಕುರುಕ್ಷೇತ್ರ’ ಚಿತ್ರಕ್ಕೆ ಮೊದಲು ಡಬ್‌ ಮಾಡಿದ್ದು ಅಂಬರೀಶ್‌. ‘ಅಂಬರೀಶ್‌ ಅವರ ಪಾತ್ರ ಶೂಟಿಂಗ್‌ ಮುಗಿಸಿದ್ವಿ. ಅವರಿಗೆ ಏನನಿಸಿತೋ ಗೊತ್ತಿಲ್ಲ. ಶೂಟಿಂಗ್‌ ನಡೆಯುತ್ತಿದ್ದಾಗಲೇ ತಮ್ಮ ಪಾತ್ರಕ್ಕೆ ಡಬ್ಬಿಂಗ್‌ ಮುಗಿಸಿಕೊಡುತ್ತೇನೆ ಎಂದರು. ಇನ್ನೂ ಶೂಟಿಂಗ್‌ ಮುಗಿದಿಲ್ಲ. ನಿಧಾನಕ್ಕೆ ಮಾಡಿದರೆ ಆಯಿತು ಎಂದು ಹೇಳಿದರೂ ಕೇಳಿದೆ ಬಂದು ತಮ್ಮ ಪಾತ್ರಕ್ಕೆ ತಾವೇ ಡಬ್‌ ಮಾಡಿದರು. ಅವರಿಗೆ ನಾನು ಒಂದೇ ಒಂದು ರೂಪಾಯಿ ಸಂಭಾವನೆ ಕೊಟ್ಟಿಲ್ಲ. ಆದರೂ ಒಬ್ಬ ಕಲಾವಿದರಾಗಿ ತಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿ ಮುಗಿಸಿದರು. ಹಾಗೆ ಡಬ್ಬಿಂಗ್‌ ಮುಗಿಸಿಕೊಟ್ಟಮೇಲೆ ಅವರು ಅನಾರೋಗ್ಯ ತುತ್ತಾಗಿ ಆಸ್ಪತ್ರೆ ಸೇರಿ ನಮ್ಮನ್ನು ಅಗಲಿದರು. ಅಂಬರೀಶ್‌ ಅವರಿಗೆ ನಾನು ಸಿನಿಮಾ ತೋರಿಸಿಲ್ಲ, ನಮ್ಮ ಚಿತ್ರವೇ ಅವರಿಗೆ ಕೊನೆಯದ್ದು ಎನ್ನುವ ನೋವು ನನ್ನಲ್ಲಿದೆ’ ಎನ್ನುತ್ತಾರೆ ಮುನಿರತ್ನ.

ದರ್ಶನ್‌- ಸುದೀಪ್‌ ಸಿನಿಮಾ ಒಂದೇ ದಿನ ರಿಲೀಸ್‌!

ಪೈಲ್ವಾನ್‌ ವರ್ಸಸ್‌ ಮುನಿರತ್ನ ಕುರುಕ್ಷೇತ್ರ

ಅಂದಹಾಗೆ ಆಗಸ್ಟ್‌ ವರಮಹಾಲಕ್ಷ್ಮೀ ಹಬ್ಬದಂದೇ ನಟ ಸುದೀಪ್‌ ಅಭಿನಯದ, ಬಹುಭಾಷೆಯ ‘ಪೈಲ್ವಾನ್‌’ ಸಿನಿಮಾ ಕೂಡ ತೆರೆಗೆ ಬರುತ್ತಿದೆ. ಅದೇ ದಿನ ದರ್ಶನ್‌ ಅವರ ‘ಮುನಿರತ್ನ ಕುರುಕ್ಷೇತ್ರ’ ಬರುತ್ತಿದೆ. ಹಾಗಾದರೆ ಮತ್ತೊಮ್ಮೆ ಸ್ಟಾರ್‌ ವಾರ್‌ ನಡೆಯುತ್ತದೆಯೇ? ಎಂದರೆ ಅದಕ್ಕೆ ಅವಕಾಶ ವಿಲ್ಲ ಎನ್ನುತ್ತಾರೆ ನಿರ್ಮಾಪಕ ಮುನಿರತ್ನ. ‘ಎರಡು ಸಿನಿಮಾ ಒಟ್ಟಿಗೆ ಬರುತ್ತಿದ್ದರೂ ಯಾವುದೇ ರೀತಿಯ ಸ್ಟಾರ್‌ ವಾರ್‌ ಆಗಲ್ಲ. ಯಾಕೆಂದರೆ ಎರಡೂ ಕನ್ನಡ ಸಿನಿಮಾಗಳು. ವಾರಕ್ಕೆ ಐದಾರು ಸಿನಿಮಾಗಳು ಬರುತ್ತವೆ. ಹಾಗಿದ್ದ ಮೇಲೆ ಎರಡು ಸಿನಿಮಾಗಳು ಬಂದರೆ ತಪ್ಪೇನು? ಪ್ರೇಕ್ಷಕರಿಗೆ ಯಾವ ಸಿನಿಮಾ ಇಷ್ಟವಾಗುತ್ತದೋ ಅದನ್ನು ನಮೋಡುತ್ತಾರೆ. ಎರಡೂ ಇಷ್ಟವಾದರೂ ಬೆಳ್ಳಗ್ಗೆ ಒಂದು, ಸಂಜೆ ಒಂದು ನೋಡುತ್ತಾರೆ. ಹೀಗಾಗಿ ಇಲ್ಲಿ ಯಾರು, ಯಾರಿಗೂ ವಿರೋಧಿಗಳು ಅಲ್ಲ. ಸ್ಟಾರ್‌ ವಾರ್‌ ಕೂಡ ಅಲ್ಲ. ಸ್ಟಾರ್‌ಗಳ ಸಂಭ್ರಮ. ನಮ್ಮ ಚಿತ್ರದ ಬಿಡುಗಡೆಯ ದಿನಾಂಕವನ್ನು ಮುಂದೂಡುವ ಪ್ರಶ್ನೆಯೇ ಇಲ್ಲ’ ಎಂಬುದು ಮುನಿರತ್ನ ಅವರು ಕೊಡುವ ವಿವರಣೆ.

click me!