ವಿವೇಕ್ ,ಸಲ್ಲುಗೆ ಕೈ ಕೊಟ್ಟ ಐಶ್ವರ್ಯಾ; ಎಕ್ಸಿಟ್ ಪೋಲ್‌ಗೆ ಹೋಲಿಸಿದ ಟ್ರೋಲಿಗರು!

Published : May 20, 2019, 05:24 PM ISTUpdated : May 20, 2019, 05:33 PM IST
ವಿವೇಕ್ ,ಸಲ್ಲುಗೆ ಕೈ ಕೊಟ್ಟ ಐಶ್ವರ್ಯಾ; ಎಕ್ಸಿಟ್ ಪೋಲ್‌ಗೆ ಹೋಲಿಸಿದ ಟ್ರೋಲಿಗರು!

ಸಾರಾಂಶ

ಕ್ಸಿಟ್ ಪೋಲ್ ಬಗ್ಗೆ ಜನ ಎಕ್ಸೈಟ್ ಆಗಿದ್ದಾರೆ. ಸಿಕ್ಕಾಪಟ್ಟೆ ಚರ್ಚೆ ಶುರುವಾಗಿದೆ. ಕೆಲವರು ಪರ ಮಾತನಾಡಿದರೆ ಇನ್ನು ಕೆಲವರು ವಿರೋಧವಾಗಿ ಮಾತನಾಡುತ್ತಿದ್ದಾರೆ. ಒಂದಷ್ಟು ಟ್ರೋಲ್ ಗಳು ಆಗುತ್ತಿವೆ. ಎಕ್ಸಿಟ್ ಪೋಲ್ ಬಗ್ಗೆ ಐಶ್ವರ್ಯಾ ರೈ, ಸಲ್ಮಾನ್ ಖಾನ್ ಹಾಗೂ ವಿವೇಕ್ ಒಬೆರಾಯ್ ಇಟ್ಟುಕೊಂಡು ಟ್ರೋಲ್ ಮಾಡಿದ್ದಾರೆ.   

ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ನೇತೃತ್ವದ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ ಎಂದು ಮತಗಟ್ಟೆ ಸಮೀಕ್ಷೆಗಳು ಅಭಿಪ್ರಾಯಪಟ್ಟಿದೆ.

ಈ ಎಕ್ಸಿಟ್ ಪೋಲ್ ಬಗ್ಗೆ ಜನ ಎಕ್ಸೈಟ್ ಆಗಿದ್ದಾರೆ. ಸಿಕ್ಕಾಪಟ್ಟೆ ಚರ್ಚೆ ಶುರುವಾಗಿದೆ. ಕೆಲವರು ಪರ ಮಾತನಾಡಿದರೆ ಇನ್ನು ಕೆಲವರು ವಿರೋಧವಾಗಿ ಮಾತನಾಡುತ್ತಿದ್ದಾರೆ. ಒಂದಷ್ಟು ಟ್ರೋಲ್ ಗಳು ಆಗುತ್ತಿವೆ. ಎಕ್ಸಿಟ್ ಪೋಲ್ ಬಗ್ಗೆ ಐಶ್ವರ್ಯಾ ರೈ, ಸಲ್ಮಾನ್ ಖಾನ್ ಹಾಗೂ ವಿವೇಕ್ ಒಬೆರಾಯ್ ಇಟ್ಟುಕೊಂಡು ಟ್ರೋಲ್ ಮಾಡಿದ್ದಾರೆ. 

ಐಶ್ವರ್ಯಾ ರೈ ಮೊದಲು ಸಲ್ಮಾನ್ ಖಾನ್ ಜೊತೆ ಪ್ರೇಮಪಾಶದಲ್ಲಿ ಬಿದ್ದಿದ್ದರು. ಇಬ್ಬರೂ ಸುತ್ತಾಡುತ್ತಿದ್ದರು. ಇನ್ನೇನೂ ಮದುವೆಯಾಗುತ್ತಾರೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಅದೇನಾಯ್ತೋ ಏನೋ ಇಬ್ಬರೂ ಕಭಿ ಅಲ್ವಿದಾ ಕೆಹನಾ ಎಂದು ದೂರವಾದರು. 

ನಂತರ ಐಶ್ವರ್ಯಾ ವಿವೇಕ್ ಒಬೆರಾಯ್ ಜೊತೆ ಕಾಣಿಸಿಕೊಂಡರು. ಇಬ್ಬರೂ ಮದುವೆಯಾಗಿಯೇ ಬಿಡುತ್ತಾರೆ ಎಂಬ ಮಾತು ಬಿ ಟೌನ್ ನಲ್ಲಿ ಕೇಳಿ ಬಂದಿತ್ತು. ಆದರೆ ಇಬ್ಬರ ನಡುವೆ ಕುಚ್ ಕುಚ್ ಆಗಿ ಕೊನೆಗೆ ಬೇರೆಯಾದರು.  ಕೊನೆಗೆ ಐಶ್ವರ್ಯಾ ರೈ ಅಭಿಶೇಕ್ ಜೊತೆ ಮದುವೆಯಾದರು. 

ಅಂದರೆ ಸಾರ್ವಜನಿಕ ಅಭಿಪ್ರಾಯ ಒಂದಿರುತ್ತದೆ. ಎಕ್ಸಿಟ್ ಪೋಲ್ ಇನ್ನೊಂದಾಗಿರುತ್ತೆ. ಅಂತಿಮ ಫಲಿತಾಂಶ ಮಾತ್ರ ಬೇರೆಯದ್ದೇ ಆಗುತ್ತದೆ ಎಂಬುದನ್ನು ಬಹಳ ಚೆನ್ನಾಗಿ ಈ ಟ್ರೋಲ್ ನಲ್ಲಿ ಹೇಳಿದ್ದಾರೆ. 

ಈ ಟ್ರೋಲ್ ಗೆ ವಿವೇಕ್ ಒಬೆರಾಯ್ ಉತ್ತರಿಸಿದ್ದು, ‘ಹಹಹಹ... ಕ್ರಿಯೇಟಿವ್ ಆಗಿದೆ. ಇದರಲ್ಲಿ ಯಾವುದೇ ಪಾಲಿಟಿಕ್ಸ್ ಇಲ್ಲ... ಇದು ಜೀವನ‘ ಎಂದಿದ್ದಾರೆ. 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನೆದರ್ಲೆಂಡ್ಸ್‌ ಚಳಿಯಲಿ ನಲಿದಾಡಿದ 'ಕಳ್ಳಪುಟ್ಟಿ' ಸ್ಪಂದನಾ ಸೋಮಣ್ಣ
Salman Khan-Aishwarya Rai Secret: ಸಲ್ಮಾನ್ ಖಾನ್-ಐಶ್ವರ್ಯಾ ರೈ ಲವ್ ಸೀಕ್ರೆಟ್ ಬಿಚ್ಚಿಟ್ಟ ಸಾದಿಯಾ ಸಿದ್ದಿಕಿ; ಇಲ್ಲಿರೋದು ಹೊಸ ವಿಷಯ!