ಟ್ರಾಫಿಕ್ ಪೊಲೀಸ್‌ ಜೊತೆ ಯುವಕನ ಚಮ್ಮಕ್ ಚಲ್ಲೋ: ಧೂಮ್‌ ಸ್ಟೈಲಲ್ಲಿ ಎಸ್ಕೇಪ್ ಆದ ಯುವಕ

By Anusha Kb  |  First Published Jun 3, 2022, 1:20 PM IST

ಯುವಕನೋರ್ವ ಟ್ರಾಫಿಕ್‌ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 
 


ಟ್ರಾಫಿಕ್ ನಿಯಂತ್ರಿಸುವುದು ಸವಾಲಿನ ಕೆಲಸ ಅದರಲ್ಲೂ ಬೆಂಗಳೂರಿನಂತಹ ಮಹಾನಗರಿಯಲ್ಲಿ ಟ್ರಾಫಿಕ್ ನಿಯಂತ್ರಿಸುವುದೇ ದೊಡ್ಡ ಸಮಸ್ಯೆಯಾಗಿದೆ. ಟ್ರಾಫಿಕ್ ರೂಲ್ಸ್ ಫಾಲೋ ಮಾಡದ ಬಹುತೇಕರು ಟ್ರಾಫಿಕ್‌ ಪೊಲೀಸರನ್ನು ತಲೆ ಕಂಡತಕ್ಷಣ ಹೇಗೆ ಎಸ್ಕೇಪ್ ಆಗುವುದೆಂದು ಯೋಚಿಸಿ ಅಡ್ಡ ದಾರಿ ಹಿಡಿಯಲು ನೋಡುತ್ತಾರೆ. ಟ್ರಾಫಿಕ್‌ ನಿಯಮಗಳ ಪ್ರಕಾರ ನಿಯಮಿತ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಚಲಿಸುವುದು ಶಿಕ್ಷಾರ್ಹ ಅಪರಾಧ. ಹಾಗೆಯೇ ಬೇಕಂತಲೇ ಸಿಗ್ನಲ್‌ ಜಂಪ್ ಮಾಡುವ ವೇಗವಾಗಿ ಹೋಗುವ ಅನೇಕ ಕಿಡಿಗೇಡಿಗಳು ನಮ್ಮ ನಿಮ್ಮೊಳಗೆ ಇದ್ದಾರೆ. ಅದೇ ರೀತಿ ಇಲ್ಲೊಬ್ಬ ಯುವಕ ವೇಗವಾಗಿ ಬೈಕ್‌ ಚಲಾಯಿಸಿದ್ದರೂ ಪೊಲೀಸರ ಕೈಗೆ ಸಿಗದೇ ಎಸ್ಕೇಪ್ ಆಗಿದ್ದಾನೆ. ಆತ  ಪೊಲೀಸರಿಂದ ಪಾರಾಗಲೂ ತನ್ನ ಬುದ್ಧಿವಂತಿಕೆ ಬಳಸಿದ್ದು ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ವಿಡಿಯೋದಲ್ಲಿ ಕಾಣಿಸುವಂತೆ ಅತೀ ವೇಗವಾಗಿ ಸಾಗುತ್ತಿರುವ ಸ್ಕೂಟರ್ ಸವಾರನನ್ನು ಪೊಲೀಸರು ಒಂದಲ್ಲ ಎರಡು ಬೈಕ್‌ನಲ್ಲಿ ಬೆನ್ನಟಿದ್ದಾರೆ. ಆದರೆ ತನ್ನ ಸಾಮರ್ಥ್ಯ ಹಾಗೂ ಬುದ್ಧಿವಂತಿಕೆ ಬಗ್ಗೆ ಅರಿವಿದ್ದ ಆತ ತನ್ನ ಟ್ರಿಕ್‌ನಿಂದಲೇ ಪೊಲೀಸರಿಂದ ಕ್ಷಣದಲ್ಲಿ ಎಸ್ಕೇಪ್ ಆಗಿದ್ದಾನೆ. ಪೊಲೀಸರು ಬೆನ್ನಟ್ಟಿ ಬರುತ್ತಿದ್ದಂತೆ ತನ್ನ ಸ್ಕೂಟರ್‌ನ ವೇಗವನ್ನು ತೀವ್ರಗೊಳಿಸಿದ ಆತ ಒಮ್ಮಲೆ ತನ್ನ ಸ್ಕೂಟರನ್ನು ನಿಲ್ಲಿಸುವಂತೆ ಮಾಡುತ್ತಾನೆ. ಈ ವೇಳೆ ಪೊಲೀಸರು ಆತ ಸ್ಕೂಟರ್ ನಿಲ್ಲಿಸಿದ ಎಂದು ಭಾವಿಸಿ ತಮ್ಮ ಬೈಕ್‌ನ್ನು ಸಂಪೂರ್ಣವಾಗಿ ನಿಲ್ಲಿಸುತ್ತಾರೆ. ಈ ಕ್ಷಣವನ್ನೇ ಬಳಸಿಕೊಂಡ ಆತ ಸೆಕೆಂಡಿನಲ್ಲಿ ತನ್ನ ಸ್ಕೂಟರ್‌ನ್ನು ಟರ್ನ್‌ ಮಾಡಿ ಪೊಲೀಸರ ಬೈಕ್‌ಗೆ ಬಂದು ಸುತ್ತು ಹೊಡೆದು ಬಂದ ದಾರಿಯಲ್ಲಿ ಮತ್ತೆ ವಾಪಸ್ ಬರುತ್ತಾನೆ. ಈ ವೇಳೆ ಮತ್ತೊಂದು ಬೈಕ್‌ನಲ್ಲಿ ಬಂದ ಪೊಲೀಸ್‌ ಪೇದೆಗೂ ಕೂಡ ಈತನನ್ನು ಹಿಡಿಯಲಾಗಲಿಲ್ಲ. ಈತನ ಮುಂದೆ ಬಂದ ಪೇದೆ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಮುಗ್ಗರಿಸಿ ಬೀಳುತ್ತಾನೆ. ಒಟ್ಟಿನಲ್ಲಿ ಈತ ಬಲು ಚಾಣಾಕ್ಷತನದಿಂದ ಪೊಲೀಸರಿಂದ ಎಸ್ಕೇಪ್ ಆಗಿದ್ದಾನೆ.

 
 
 
 
 
 
 
 
 
 
 
 
 
 
 

Tap to resize

Latest Videos

A post shared by memes | comedy (@ghantaa)

ಬೆಳಗಾವಿ: ಟ್ರಾಫಿಕ್ ಪೊಲೀಸ್‌ ಮೇಲೆ ವಾಹನ ಚಾಲಕನಿಂದ ಹಲ್ಲೆ

ಈ ಸಿಸಿಟಿವಿ ದೃಶ್ಯವನ್ನು ಘಂಟಾ ಎಂಬ ಇನ್ಸ್ಟಾಗ್ರಾಮ್‌ ಪೇಜ್‌ನಿಂದ ಪೋಸ್ಟ್‌ ಮಾಡಲಾಗಿದ್ದು, ಒಂದು ಲಕ್ಷಕ್ಕೂ ಅಧಿಕ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಈ ಲೆಜೆಂಡ್‌ಗೆ ಸೆಲ್ಯೂಟ್ ಹೇಳಬೇಕು ಎಂದು ನೋಡುಗರು ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ಹೃತಿಕ್ ರೋಷನ್ ಅವರ ಧೂಮ್ ಮೂವಿಯಲ್ಲಿ ಈತ ಇರಬೇಕಿತ್ತು ಎಂದು ನೋಡುಗರು ಕಾಮೆಂಟ್ ಮಾಡಿದ್ದಾರೆ.

ಬೇಕಂತಲೇ ರೂಲ್ಸ್ ಬ್ರೇಕ್ ಮಾಡೋರಿಗೆ ಬೆಂಗ್ಳೂರು ಟ್ರಾಫಿಕ್ ಪೊಲೀಸ್‌ ಹೊಸ ತಂತ್ರ

ಟ್ರಾಫಿಕ್‌ ನಿಯಂತ್ರಣ ಸವಾಲಿನ ಕೆಲಸವಾಗಿದೆ, ಅದರಲ್ಲೂ ಬೆಂಗಳೂರಿನಲ್ಲಿ ಟ್ರಾಫಿಕ್‌ ಅಂತೂ ಮಿತಿ ಮೀರಿ ಹೋಗಿದೆ. ಇದನ್ನು ಸರಿದೂಗಿಸಲು ಬೆಂಗಳೂರು ಟ್ರಾಫಿಕ್ ಪೊಲೀಸರು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಆದರೆ, ಟ್ರಾಫಿಕ್ ಸಮಸ್ಯೆಯನ್ನು ಹತೋಟಿಗೆ ತರಲು ಸಂಚಾರಿ ಪೊಲೀಸರ ಸಂಖ್ಯೆಯೂ ಸಹ ಕಡಿಮೆ ಇದೆ.

ಸಿಗ್ನಲ್‌ಗಳಲ್ಲಿ ಟ್ರಾಫಿಕ್ ಪೇದೆ ಇದ್ರೆ ಮಾತ್ರ ವಾಹನ ಸವಾರರು ಸರಿಯಾಗಿ ಸಂಚಾರಿ ನಿಯಮಗಳನ್ನು ಪಾಲಿಸುತ್ತಾರೆ. ಈ ಹಿನ್ನೆಲೆಯಲ್ಲಿ ಬೇಕಂತ ರೂಲ್ಸ್ ಫಾಲೋ ಮಾಡದ ಕಿಡಿಗೇಡಿಗಳಿಗಾಗಿ ಬೆಂಗಳೂರು ಟ್ರಾಫಿಕ್ ಪೊಲೀಸ್‌ ಹೊಸ ತಂತ್ರ ರೂಪಿಸಿದೆ. ಟ್ರಾಫಿಕ್ ಪೇದೆ ಪ್ರತಿರೂಪದ ಗೊಂಬೆ ನಿಲ್ಲಿಸಿ ಟ್ರಾಫಿಕ್ ಕಂಟ್ರೋಲ್‌ಗೆ ಪೊಲೀಸರು ಯತ್ನಿಸುತ್ತಿದ್ದಾರೆ. ಪ್ರಮುಖ ನೋ ಎಂಟ್ರಿಗಳಲ್ಲಿ ಟ್ರಾಫಿಕ್ ಪೇದೆಗಳ ಗೊಂಬೆಯನ್ನು ಅಳವಡಿಸಲಾಗಿದೆ.

click me!