'ಇಷ್ಕ ವಿಷ್ಕ ರಿಬೌಂಡ್' ಸಿನಿಮಾ ತಂಡಕ್ಕೆ ಶುಭಕೋರಿ ಸಹೋದರಿ ಫೋಟೋ ಹಂಚಿಕೊಂಡ ಹೃತಿಕ್.
ಬಾಲಿವುಡ್ (Bollywood) ಹ್ಯಾಂಡ್ಸಮ್ ನಟ ಹೃತಿಕ್ ರೋಷನ್ ಇಷ್ಟು ದಿನ ಮಾಜಿ ಪತ್ನಿ ಮಕ್ಕಳ ಹೀಗೆ ಪರ್ಸನಲ್ ಲೈಫ್ ವಿಚಾರಗಳಿಂದ ಸುದ್ದಿಯಾಗುತ್ತಿದ್ದರು ಆದರೆ ಇದೇ ಮೊದಲ ಬಾರಿ ತಮ್ಮ ಫ್ಯಾಮಿಲಿಯಿಂದ ಸ್ಪೆಷಲ್ ವ್ಯಕ್ತಿಯನ್ನು ಜನರಿಗೆ ಪರಿಚಯ ಮಾಡಿದ್ದಾರೆ. ಯಾರಿಗೂ ತಿಳಿದಿರಲಿಲ್ಲ ಹೃತಿಕ್ ಕಸಿನ್ ಸಹೋದರಿ ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ ಎಂದು.
ಹೃತಿಕ್ ಪೋಸ್ಟ್:
'ಹಾಯ್ ಪಾಶ್,ನೀನು ಕಳೆದು ಹೋದ ದಿನಗಳು ನಿನಗೆ ನೆನಪು ಇದ್ಯಾ? ನಿನ್ನ ಕಣ್ಣುಗಳಲ್ಲಿನ ಹುಡುಕಾಟ ನನಗೆ ನೆನಪಿದೆ..ಜೀವನ ನಡೆಸಲ ಹಾದಿ ಹುಡುಕುತ್ತಿದ್ದೆ. ಈಗ ನೋಡು ಜೀವನದ ಆಂಕರ್ ನಿನ್ನ ಕೈಗೆ ಸಿಕ್ಕಿದೆ...ನಿನ್ನ ಕೈಯಲ್ಲಿದೆ ನಿನ್ನೊಳಗೆ ಇದೆ. ನಿನ್ನ ಜೀವನಕ್ಕೆ ನೀನೇ ಆಂಕರ್. ನಿನ್ನ ಜರ್ನಿಗೆ ನೀನೇ ಕಾರಣ ಅದು ನೆನಪಿಟ್ಟುಕೊಳ್ಳಿ. ಹೆಮ್ಮೆಯಿಂದ ಜೀವನ ಮಾಡು. ನಿನ್ನ ಬಗ್ಗ ನನಗೆ ಹೆಮ್ಮೆ ಹೆಚ್ಚಿದೆ.' ಎಂದು ಹೃತಿಕ್ ಬರೆದುಕೊಂಡಿದ್ದಾರೆ.
Sussanne Khan ಮಗನ ಬರ್ತ್‌ಡೇ ಪೋಸ್ಟ್‌ಗೆ ಬಾಯ್‌ಫ್ರೆಂಡ್ Arslan Goniಯಿಂದ ಪ್ರತಿಕ್ರಿಯೆ
ಮೂರ್ನಾಲ್ಕು ಫೋಟೋ ಹಂಚಿಕೊಂಡು 'ನಿನ್ನ ಇಷ್ಕ ವಿಷ್ಕ ರಿಬೌಂಡ್' ತಂಡಕ್ಕೆ ನನ್ನ ಶುಭಾಶಯಳು. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡುತ್ತಿರುವೆ. ಕಿಲ್ ಇಟ್ ಗೆಳೆಯರೇ' ಎಂದಿದ್ದಾರೆ ಹೃತಿಕ್.
ಕೆಳವು ದಿನಗಳ ಹಿಂದೆ ಪ್ರಶ್ಮಿನಾ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹೊಸ ಸಿನಿಮಾ ಪ್ರಾಜೆಕ್ಟ್ ಒಪ್ಪಿಕೊಂಡಿರುವುದಾಗಿ ರಿವೀಲ್ ಮಾಡಿದ್ದರು. 'ಹಲವು ವರ್ಷಗಳ ಕನಸು ಮತ್ತು ಶ್ರಮ ಈಗ ಹಣ್ಣು ನೀಡುತ್ತಿದೆ. ಸಂತೋಷ ಮತ್ತು ಆತಂಕ ಎರಡೂ ಆಗುತ್ತಿದೆ. ನನ್ನ ಮೊದಲ ಆನ್‌ಸ್ಕ್ರೀನ್ ಕೆಲಸ ನಿಮ್ಮ ಮುಂದೆ' ಎಂದು ಬರೆದುಕೊಂಡಿದ್ದರು.
ಹೊಸ ಪಾರ್ಟನರ್ಸ್ ಜೊತೆ ಎಕ್ಸ್ ಕಪಲ್ Hrithik -Sussanne:
ಹೃತಿಕ್ ರೋಷನ್ ( Hrithik Roshan) ಮತ್ತು ಅವರ ಮಾಜಿ ಪತ್ನಿ ಸುಸೇನ್ ಖಾನ್ (Sussanne Khan) ಈಗ ತಮ್ಮ ಜೀವನದಲ್ಲಿ ಮೂವ್ ಆನ್ ಆಗಿದ್ದಾರೆ. ಇಬ್ಬರ ಹೃದಯವೂ ಈಗ ಬೇರೆಯವರಿಗಾಗಿ ಮಿಡಿಯುತ್ತಿದೆ. ನಟನ ಹೆಸರು ಸಬಾ ಆಜಾದ್ (Saba Azad) ಜೊತೆ ಕೇಳಿಬರುತ್ತಿದೆ. ಅದೇ ಸಮಯದಲ್ಲಿ, ಸುಸೇನ್ ಜೀವನದಲ್ಲಿ ಆರ್ಸ್ಲಾನ್ ಗೋನಿ (Arslan Goni) ಬಂದಿದ್ದಾರೆ. ಹೃತಿಕ್ ರೋಷನ್ ಮತ್ತು ಸುಸೇನ್ ಇಬ್ಬರೂ ಪರಸ್ಪರ ಸಂತೋಷವಾಗಿರುವಂತೆ ತೋರುತ್ತಿದೆ. ಒಂದೇ ಪಾರ್ಟಿಯಲ್ಲಿ ಇಬ್ಬರೂ ತಮ್ಮ ತಮ್ಮ ಹೊಸ ಪಾರ್ಟ್‌ನರ್ ಜೊತೆ ಎಂಜಾಯ್ ಮಾಡುತ್ತಿರುವ ಅವರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
Saba Azad ಜೊತೆ Hritik Roshan ರಿಲೆಷನ್‌ಶಿಪ್ ಕನ್ಫರ್ಮ್? ಏರ್‌ಪೋರ್ಟ್‌ನಲ್ಲಿ ಕೈಕೈ ಹಿಡಿದ ಕಪಲ್
Hrithik Roshan Saba Azad ಭೇಟಿಯಾಗಿದ್ದು ಎಲ್ಲಿ?
ಹೃತಿಕ್ ರೋಷನ್ ಪಬ್ಲಿಕ್‌ನಲ್ಲಿ ತಮ್ಮ ರೂಮರ್ಡ್ ಗರಲ್‌ಫ್ರೆಂಡ್ ಸಾಬಾ ಅವರ ಕೈ ಹಿಡಿದು ನಡೆದ ಫೋಟೋಗಳು ಸಖತ್ ವೈರಲ್ ಆಗಿದೆ. ಅದೇ ಸಮಯದಲ್ಲಿ, ಬಾಲಿವುಡ್‌ನ ವದಂತಿಯ ದಂಪತಿಗಳು ಈ ಮೂಲಕ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಲು ಪ್ರಯತ್ನಿಸಿದ್ದಾರೆಯೇ ಎಂಬ ಅನುಮಾನಕ್ಕೂ ಇದು ಕಾರಣವಾಗಿದೆ? ಹೃತಿಕ್ ರೋಷನ್ ಸಬಾ ಆಜಾದ್ ಅವರನ್ನು ಹೇಗೆ ಭೇಟಿಯಾದರು ಮತ್ತು ಅವರ ವದಂತಿಯ ಸಂಬಂಧ ಹೇಗೆ ಅರಳಿತು ಎಂಬುದರ ಕುರಿತು ಹಲವಾರು ವರದಿಗಳಿವೆ. ಹೃತಿಕ್ ರೋಷನ್ ಮತ್ತು ಸಬಾ ಆಜಾದ್ ಮೊದಲು ಟ್ವಿಟರ್‌ನಲ್ಲಿ ಭೇಟಿಯಾದರು ಮತ್ತು ನಂತರ ಪರಸ್ಪರರ ವೈಯಕ್ತಿಕ ಮೆಸೇಜಿಂಗ್ ಪ್ರಾಂರಭವಾಯಿತು ಎಂದು ಹಿಂದೆ ವರದಿಗಳು ಬಂದವು. ಹೃತಿಕ್ ರೋಷನ್ ಸಬಾ ಆಜಾದ್ ಅವರು ಸ್ನೇಹಿತರ ಮೂಲಕ ಭೇಟಿಯಾದರು ಎಂದು ಮತ್ತೊಂದು ವರದಿ ಹೇಳುತ್ತದೆ. India Today.in ವರದಿ ಪ್ರಕಾರ 'ಹೃತಿಕ್ ರೋಷನ್ ಮತ್ತು ಸಬಾ ಮೊದಲು ಒಬ್ಬರನ್ನೊಬ್ಬರು ಇಂಡೀ ಮ್ಯೂಸಿಕ್‌ನ ಕಾಮನ್ ಫ್ರೆಂಡ್ ಮೂಲಕ ಭೇಟಿಯಾದರು. ಅವರ ಮೊದಲ ಭೇಟಿಯ ನಂತರ, ಹೃತಿಕ್ ಮತ್ತು ಸಬಾ ಅವರು ಸಂಪರ್ಕದಲ್ಲಿದ್ದಾರೆ ಮತ್ತು ಇತ್ತೀಚೆಗೆ ಡಿನ್ನರ್‌ಗೆ ಭೇಟಿಯಾದರು'. ಹೃತಿಕ್ ಹಾಗೂ ಸಬಾ ಅವರು ಹೇಗೆ ಭೇಟಿಯಾದರು ಎಂಬುದರ ಕುರಿತು ಬಹಳಷ್ಟು ಹೇಳಲಾಗಿದ್ದರೂ ಮತ್ತು ಬರೆಯಲಾಗಿದ್ದರೂ, ಅದರ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.