ವೆಡ್ಡಿಂಗ್ ಗಿಫ್ಟ್ ಮೂಲಕ ನಟಿ ಪ್ರೇಮಾ ಆಗಮನ. ವೆಡ್ಡಿಂಗ್ ಗಿಫ್ಟ್ ಚಿತ್ರ ಸದ್ಯ ಬಿಡುಗಡೆಯಾಗಿರೋ ಟೀಸರ್ ಮೂಲಕ ಸಿನಿರಂಗದಲ್ಲಿ ಟಾಕ್ ಕ್ರಿಯೇಟ್ ಮಾಡಿರೋದಂತು ಹೌದು.
ದಿನ ಬೆಳಗಾದ್ರೆ ಸಾಕು ಬಣ್ಣದ ಲೋಕಕ್ಕೀಗ ಹೊಸಬರ ಆಗಮನದೊಂದಿಗೆ ಹೊಚ್ಚ ಹೊಸಾ ಸಂಚಲನ, ಹೊಸತನದ ಪ್ರಯೋಗಗಳು ಆಗುತ್ತಾ ಚಂದನ ವನ ಮತ್ತಷ್ಟು ರಂಗೇರಿದೆ. ಇದೇ ಸೂತ್ರದೊಂದಿಗೆ ವಿಕ್ರಂ ಪ್ರಭು ಅವರ ನಿರ್ದೇಶನದೊಂದಿಗೆ, ನಿರ್ಮಾಣದ ಹೊಣೆಯನ್ನೂ ಹೊತ್ತು ವೆಡ್ಡಿಂಗ್ ಗಿಫ್ಟ್ ಎಂಬ ಚಿತ್ರದ ಮೂಲಕ ನವ ನಿರ್ದೇಶಕರೊಬ್ಬರ ಆಗಮನ ಸ್ಯಾಂಡಲ್ ವುಡ್ ಕುಟುಂಬಕ್ಕೆ ಆಗ್ತಿದೆ. ಈಗಾಗಲೇ ಒಂದಷ್ಟು ಟಾಕ್ ಕ್ರಿಯೇಟ್ ಮಾಡಿರೋ ವೆಡ್ಡಿಂಗ್ ಗಿಫ್ಟ್ ಚಿತ್ರದ ಟೀಸರ್ ಬಿಡುಗಡೆಗೊಂಡು ನವ ನಿರ್ದೇಶಕರ ಮೇಲಿನ ಭರವಸೆ ಹೆಚ್ಚಿಸಿದೆ ಅಂದ್ರೆ ತಪ್ಪಾಗಲಾರದು.
ರಿಲೀಸ್ ಆಗಿರೋ ಟೀಸರ್ ನಲ್ಲಿ ನ್ಯಾಯಾಲಯದಿಂದಲೇ ತೆರೆದುಕೊಳ್ಳುತ್ತಾ, ಗಂಭೀರವಾದ ವಿಚಾರಗಳ ಸುತ್ತ ಕಥೆ ಹೆಣೆದಂತೆ ಕಾಣುತ್ತದೆ. ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡಲು ಸೃಷ್ಟಿಯಾದ ಕಾನೂನುಗಳು ಅವರಿಂದಲೇ ಹೇಗೆಲ್ಲ ದುರುಪಯೋಗವಾಗ್ತಿದೆ ಎಂಬ ಸೂಕ್ಷ್ಮತೆಯೊಂದಿಗೆ ಸೆಳೆಯುತ್ತಿದೆ. ಇಂಥಾ ಸೂಕ್ಷ್ಮ ಎಳೆಯಿಟ್ಟುಕೊಂಡು, ಸಿನೆಮಾ ರೂಪಿಸೋದು ಒಂದು ಚಾಣಕ್ಯವೇ. ಆದ್ರೂ ಸಹ ಪಕ್ಕಾ ಕಮರ್ಶಿಯಲ್ ಹಾದಿಯಲ್ಲಿ ಈ ಚಿತ್ರವನ್ನ ವಿಕ್ರಂ ಚಿತ್ರಿಸಿರುವ ಕಥೆಗೆ ನಂದೀಶ್ ನಾಣಯ್ಯ ನಾಯಕನಾಗಿ ನಟಿಸಿದ್ದಾರೆ. ಇವರಿಗೆ ನಾಯಕಿಯಾಗಿ ಸೋನು ಗೌಡ ಸಾಥ್ ಕೊಟ್ಟಿದ್ದಾರೆ. ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ತಿರುವ ಸೋನು ಗೌಡ ಇಷ್ಟಪಟ್ಟು ನಿರ್ವಹಿಸಿರುವ ಪಾತ್ರವಿದಂತೆ.
ಇನ್ನೊಂದು ವಿಶೇಷ ವೆಂದರೆ ನಟಿ ಪ್ರೇಮಾ ಈ ವೆಡ್ಡಿಂಗ್ ಗಿಫ್ಟ್‌ನಲ್ಲಿ ಲಾಯರ್ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ.ಬಾಲಚಂದ್ರ ಪ್ರಭು ಸಂಗೀತ ನಿರ್ದೇಶನ, ಉದಯಲೀಲರ ಛಾಯಾಗ್ರಹಣ, ವಿಜೇತ್ ಚಂದ್ರರ ಸಂಕಲನವಿರುವ ವೆಡ್ಡಿಂಗ್ ಗಿಫ್ಟ್ ಚಿತ್ರ ಸದ್ಯ ಬಿಡುಗಡೆಯಾಗಿರೋ ಟೀಸರ್ ಮೂಲಕ ಸಿನಿರಂಗದಲ್ಲಿ ಟಾಕ್ ಕ್ರಿಯೇಟ್ ಮಾಡಿರೋದಂತು ಹೌದು.