
ಕಿರುತೆರೆ ಮೇಲೆ ಕಿಚ್ಚನನ್ನು ನೋಡುವುದೇ ಒಂದು ಮಜಾ. ವಾರದ ಕೊನೆಯಲ್ಲಿ ಯಾರು ಯಾರು ಎಲಿಮಿನೇಟ್ ಆಗುತ್ತಾರೆ? ಯಾರು ಸೇಫ್ ಆಗುತ್ತಾರೆ? ಕಿಚ್ಚ ಧರಿಸಿರುವ ಔಟ್ ಫಿಟ್ ಯಾವುದು? ಎಂದೆಲ್ಲಾ ಪ್ರಶ್ನೆ ಹಿಡಿದು ಕಾತುರದಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಈ ವಾಹಿನಿಯಲ್ಲಿ ಕನ್ನಡದ ಬಿಗ್ ಬಾಸ್ ಬರಲ್ಲ, ಯಾವುದರಲ್ಲಿ ಪ್ರಸಾರ?
ಕೈಯಲ್ಲೊಂದು ಬ್ಲಾಕ್ ಬಸ್ಟರ್ ಸಿನಿಮಾ ಹಿಡಿದು, ಪ್ರಚಾರದಲ್ಲಿ ಬ್ಯೂಸಿಯಾಗಿರುವ ಕಿಚ್ಚ ಸುದೀಪ್ ಕೆಲವು ದಿನಗಳ ಹಿಂದೆ #AskPailwaan ಎಂಬ ಪ್ರಚಾರ ಅಭಿಯಾನವನ್ನು ನಡೆಸಿದ್ದರು. ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಖುಷ್ ಖುಷಿಯಾಗಿ ಉತ್ತರಿಸಿದ್ದಾರೆ ಪೈಲ್ವಾನ್. ಬಿಗ್ ಬಾಸ್ ಸೀಸನ್-7 ಯಾವಾಗ ಎಂದು ಕೇಳಿರುವ ಪ್ರಶ್ನೆಗೂ ಸುದೀಪ್ ಡೇಟ್ ರಿವೀಲ್ ಮಾಡಿದ್ದಾರೆ.
ಹೌದು, ಕಿಚ್ಚ ಕೊಟ್ಟ ಉತ್ತರದ ಪ್ರಕಾರ ಬಿಗ್ ಬಾಸ್ ಸೀಸನ್-7 ಅಕ್ಟೋಬರ್ ತಿಂಗಳ ಎರಡನೇ ವಾರದಲ್ಲಿ ಆರಂಭವಾಗಲಿದೆ. ಇನ್ನು ಸಾಮಾಜಿಕ ಜಾಲ ತಾಣದಲ್ಲಿ ಅಕ್ಟೋಬರ್ 7ರಂದು ಆರಂಭವಾಗುತ್ತದೆ ಎಂಬ ಗುಸು ಗುಸು ಸಹ ಕೇಳಿ ಬರುತ್ತಿದೆ. ಒಟ್ಟನಲ್ಲಿ ಅಕ್ಟೋಬರ್‌ನಲ್ಲಿ ಶುರುವಾಗುವುದು ಮಾತ್ರ ಪಕ್ಕಾ ಎಂದೆನಿಸುತ್ತಿದೆ.
ಬಿಗ್ ಬಾಸ್ ನಟಿ ಎದೆ ಮೇಲೆ 'ಪವರ್ ಸ್ಟಾರ್' ಟ್ಯಾಟೂ ಸಿಕ್ಕಾಪಟ್ಟೆ ವೈರಲ್!
ಕಳೆದೆರಡು ಆವೃತಿಯಗಳು ಕಲರ್ಸ್ ಸೂಪರ್‌ನಲ್ಲಿ ಪ್ರಸಾರವಾಗುತ್ತಿದ್ದು, ಈ ಬಾರಿ ಕಲರ್ಸ್ ವಾಹಿನಿಗೆ ಈ ಫೇಮಸ್ ಪ್ರೋಗ್ರಾಂ ಶಿಫ್ಟ್ ಆಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.