ಆರ್‌ಸಿಬಿ ಕಾಲ್ತುಳಿತ ದುರಂತ: 'ಹೊಣೆಗಾರಿಕೆ' ಬಗ್ಗೆ ಪ್ರತ್ಯಕ್ಷದರ್ಶಿ ಚಂದನ್ ಶೆಟ್ಟಿ ಹೇಳಿದ್ದೇನು?

Published : Jun 05, 2025, 12:39 PM IST
Chandan Shetty

ಸಾರಾಂಶ

'ನಿನ್ನೆ ಸಂಭ್ರಮಾಚರಣೆ ವೇಳೆ ಚಿನ್ನಾಸ್ವಾಮಿ ಕ್ರೀಡಾಂಗಣಕ್ಕೆ ಹೋದವರಲ್ಲಿ ನಾನೂ ಒಬ್ಬ. ಅಲ್ಲಿ ಯಾವುದೇ ಗೇಟ್ ಬಳಿ ಹೋದರೂ ಕೂಡ ಅಪಾರ ಸಂಖ್ಯೆಯಲ್ಲಿ ಜನರು ಸೇರಿಕೊಂಡಿದ್ದರು. ಅಲ್ಲಿ ಇಲ್ಲಿ ಅಲೆದಾಡಿ ಜನರ ಗುಂಪಿನಲ್ಲಿ ನಿಂತಿದ್ದಾಗ, ಒಂದು ಹಂತದಲ್ಲಿ ನನಗೂ ಕೂಡ ಉಸಿರಾಟಕ್ಕೆ ತೊಂದರೆ..

ನಿನ್ನೆ ಆರ್‌ಸಿಬಿ (RCB) ಸಂಭ್ರಮಾಚರಣೆ ವೇಳೆ ಬೆಂಗಳೂರಿನ ಚಿನ್ನಾಸ್ವಾಮಿ ಕ್ರೀಡಾಂಗಣದಲ್ಲಿ ಕಾಳ್ತುಳಿತದ ಘಟನೆ ನಡೆದಿದೆ. ಈ ದುರಂತದಲ್ಲಿ 11 ಜನರು ಮೃತಪಟ್ಟಿದ್ದು ಬಹಳಷ್ಟು ಜನರು ಗಾಯಾಳುಗಳಾಗಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಗೆ ಯಾರು ಹೊಣೆ ಎಂಬ ಪ್ರಶ್ನೆ ಎಲ್ಲಾ ಕಡೆಯಿಂದ ಕೇಳಿಬರುತ್ತಿದೆ. ಆದರೆ, ಹೊಣೆಗಾರರು ಯಾರೇ ಆದರೂ ಹೋದ ಜೀವ ವಾಪಸ್ ಅದೇ ರೀತಿಯಲ್ಲಿ ಬರೋದಿಲ್ಲ ಎಂಬುದಂತೂ ನಿಜ. ಆದರೆ, ಈ ಘಟನೆಯ ಪ್ರತ್ಯಕ್ಷಿದರ್ಶಿಗಳು ಹಲವರು ಮಾತನ್ನಾಡಿದ್ದಾರೆ. ಅದರಲ್ಲೊಬ್ಬರಾಗಿರುವ ಖ್ಯಾತ ಗಾಯಕ ಚಂದನ್ ಶೆಟ್ಟಿ ಅದೇನು ಹೇಳಿದ್ದಾರೆ ನೋಡಿ..

'ನಿನ್ನೆ ಸಂಭ್ರಮಾಚರಣೆ ವೇಳೆ ಚಿನ್ನಾಸ್ವಾಮಿ ಕ್ರೀಡಾಂಗಣಕ್ಕೆ ಹೋದವರಲ್ಲಿ ನಾನೂ ಒಬ್ಬ. ಅಲ್ಲಿ ಯಾವುದೇ ಗೇಟ್ ಬಳಿ ಹೋದರೂ ಕೂಡ ಅಪಾರ ಸಂಖ್ಯೆಯಲ್ಲಿ ಜನರು ಸೇರಿಕೊಂಡಿದ್ದರು. ಅಲ್ಲಿ ಇಲ್ಲಿ ಅಲೆದಾಡಿ ಜನರ ಗುಂಪಿನಲ್ಲಿ ನಿಂತಿದ್ದಾಗ, ಒಂದು ಹಂತದಲ್ಲಿ ನನಗೂ ಕೂಡ ಉಸಿರಾಟಕ್ಕೆ ತುಂಬಾ ತೊಂದರೆ ಎನ್ನಿಸುತ್ತಿತ್ತು. ಅಲ್ಲಿ, ಸಮಸ್ಯೆಯಾಗಿ ಜೀವ ಕಳೆದುಕೊಂಡಿರುವ ಆ ಹನ್ನೊಂದು ಜನರಿಗೆ ಅದೆಷ್ಟು ಕಷ್ಟ ಆಗಿರಬಹುದು..!? ನಿಜವಾಗಿ ಹೇಳಬೇಕೆಂದರೆ ಕಾರ್ಯಕ್ರಮವನ್ನು ಸರಿಯಾಗಿ ಆಯೋಜನೆ ಮಾಡಿರಲಿಲ್ಲ.

ಆದರೆ, ಈ ದುರಂತ ಘಟನೆ ನಡೆದಿರೋದು ನಿಜಕ್ಕೂ ದುರದೃಷ್ಟಕರ. ಆದರೆ, ಘಟನೆಗೆ ಹೊಣೆಗಾರರು ಯಾರು? ಅದನ್ನು ಹೇಳೋದು ಹೇಗೆ?' ಎಂದಿದ್ದಾರೆ ಕನ್ನಡದ ಖ್ಯಾತ ರಾಪರ್, ಗಾಯಕ ಚಂದನ್ ಶೆಟ್ಟಿ. ಅಲ್ಲಿ ಸಂಭ್ರಮಾಚರಣೆ ಆಯೋಜಿಸಿದ್ದವರ ತಪ್ಪೇ? ಅವರನ್ನು ನಂಬಿ ತಮ್ಮ ಮೆಚ್ಚಿನ ಆಟಗಾರರನ್ನು ನೋಡಲು ಹೋದವರ ತಪ್ಪೇ? ಅಥವಾ ಅಲ್ಲಿ ನೂಕುನುಗ್ಗಲು ನಿಯಂತ್ರಿಸಲಾಗದ ಪೊಲೀಸ್ ವ್ಯವಸ್ಥೆಯ ತಪ್ಪೇ? ತಪ್ಪು ಯಾರದ್ದೇ ಆಗಿದ್ದರೂ ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡಿರುವ 11 ಅಮಾಯಕರ ಜೀವದ ಬೆಲೆಯನ್ನು ಅಳೆಯಲಾದೀತೇ? ಹಾಗೂ ಅವರ ಕುಟುಂಬಸ್ಥರ ಆಕ್ರಂದನಕ್ಕೆ ಪರಿಹಾರವೇನು?

ಆರ್‌ಸಿಬಿ (RCB) ಸಂಭ್ರಮಾಚರಣೆ ವೇಳೆ ವಿಧಾನಸೌಧದ ಬಳಿ ನಡೆದ ನೂಕುನುಗ್ಗಲಿನಲ್ಲಿ ಹಲವಾರು ಜನ ಸಾವನ್ನಪ್ಪಿದ್ದು ಹಲವರು ಪರಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಭೇಟಿ ಮಾಡಲು ಸ್ವತಃ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ-ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಗೇ ವಿರೋಧ ಪಕ್ಷ ಬಿಜೆಪಿಯ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೂ ಕೂಡ ಆಸ್ಪತ್ರೆಗೆ ಹೋಗಿ ಗಾಯಾಳುಗಳನ್ನು ಭೇಟಿ ಮಾಡಿದ್ದಾರೆ.

ಇದೀಗ, ಸ್ಯಾಂಡಲ್‌ವುಡ್ ನಟಿ ಹಾಗೂ ರಾಜಕೀಯದಲ್ಲೂ ಸಕ್ರಿಯರಾಗಿರುವ ರಕ್ಷಿತಾ ಪ್ರೇಮ್ ಅವರು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲೊಂದು ಪೋಸ್ಟ್ ಮಾಡಿದ್ದಾರೆ. ಅದೀಗ ಭಾರೀ ವೈರಲ್ ಆಗುತ್ತಿದೆ. ಸರ್ಕಾರದ ಸರ್ಕಾರ 'ಸಂಭ್ರಮಾಚರಣೆ'ಯ ಪ್ಲಾನ್ ಸರಿಯಾಗಿ ಮಾಡಿಲ್ಲ, ಅದೊಂದು ರಾಜಕೀಯ ಪಕ್ಷದ ಸಂಭ್ರಮಾಚರಣೆ ರೀತಿ ಕಂಡುಬರುತ್ತಿತ್ತು' ಎಂಬ ಅರ್ಥದಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ. ನಟಿ ರಕ್ಷಿತಾ ತಮ್ಮ ಪೋಸ್ಟ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ...

'ಅತ್ಯಂತ ಕೆಟ್ಟ ರೀತಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಇದೊಂದು ಸಂಭ್ರಮಾಚರಣೆ ರೀತಿಯಲ್ಲಿ ಇಲ್ಲವೇ ಇಲ್ಲ, ರಾಜಕೀಯ ಪಕ್ಷದ ಸಭೆಯಂತೆ ಇತ್ತು. ಯಾವುದೇ ರೀತಿಯಲ್ಲಿ ಇದು ಸೂಕ್ತ ರೀತಿಯಲ್ಲಿ ಇರಲಿಲ್ಲ. ಕ್ರೀಡೆ ಯಾವುದೇ ಪಕ್ಷದ ಸಂಭ್ರಮಾಚರಣೆ ಅಲ್ಲ, ಇದು ಯಾವುದೇ ವಿಧದಲ್ಲೂ ರಾಜಕೀಯಕ್ಕೆ ಸಂಬಂಧಪಟ್ಟಿಲ್ಲ' ಎಂದು ನಟಿ ರಕ್ಷಿತಾ ಪ್ರೇಮ್ ಅವರು ಪೋಸ್ಟ್ ಮಾಡಿದ್ದಾರೆ. ಇದೀಗ ಈ ಪೋಸ್ಟ್‌ ಬಹಳಷ್ಟು ವೈರಲ್ ಆಗುತ್ತಿದೆ.

ಸದ್ಯ, ಸಂಭ್ರಮಾಚರಣೆ ವೇಳೆ ನಡೆದ ಘಟನೆಯಿಂದ ಹತ್ತಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಹದಿನೈದಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಬಳಿಕ, ಸಂಭ್ರಮಾಚರಣೆ ಕ್ಯಾನ್ಸಲ್ ಆಗಿದ್ದು, ಜನರು ಮನೆಗಳತ್ತ ಹೊರಟಾಗಲೂ ನೂಕುನುಗ್ಗಲು ಆಗುತ್ತಿದೆ. ಈ ಘಟನೆ ಇದೀಗ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಡುವಿನ ಕೆಸರೆರಚಾಟಕ್ಕೂ ಕಾರಣವಾಗಿದೆ. ಅಲ್ಲಿನ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರೂ ನಿಯಂತ್ರಣ ತಪ್ಪಿದೆ, ಈ ದುರಂತ ಘಟನೆ ನಡೆದಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಬಂದವ್ರಿಗೆ ದಾರಿಕೊಡಿ, ಹೋಗೋರಿಗೆ ದಾರಿಬಿಡಿ..'ಜೀ ಕನ್ನಡ ವೇದಿಕೆಯಲ್ಲಿ ಹೇಳಿದ್ದ ಮಾತನ್ನೇ ಬಿಗ್‌ಬಾಸ್‌ನಲ್ಲಿ ಮರೆತ್ರಾ ಗಿಲ್ಲಿ ನಟ!
ಹೀರೋ ಆಗುವ ಮುನ್ನ ಶಾಕ್ ಕೊಟ್ಟ ಅಕೀರಾ ನಂದನ್: ರೇಣು ದೇಸಾಯಿ ಫೋನ್ ಮಾಡಿದಾಗ ಪವನ್ ನಕ್ಕಿದ್ದೇಕೆ?