66ನೇ ವಯಸ್ಸಿಗೆ ತೆರೆದ ಎದೆ ತೋರಿಸಿದ ನೀನಾ ಗುಪ್ತಾ ಫುಲ್ ಟ್ರೋಲ್

Published : Jun 05, 2025, 11:49 AM ISTUpdated : Jun 05, 2025, 11:50 AM IST
Neena Gupta birthday celebration

ಸಾರಾಂಶ

ನಟಿ ನೀನಾ ಗುಪ್ತಾ ಅವರ 66ನೇ ಹುಟ್ಟುಹಬ್ಬದಂದು ಧರಿಸಿದ್ದ ಬಟ್ಟೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ನೀನಾ ಗುಪ್ತಾ ತಮ್ಮ ಬೋಲ್ಡ್ ಪಾತ್ರಗಳು, ಬೋಲ್ಡ್ ಧಿರಿಸು ಹಾಗೂ ಹೇಳಿಕೆಗಳಿಂದ ಗಮನ ಸೆಳೆದ ಬಾಲಿವುಡ್ ನಟಿ ಸಿನಿಮಾ ಮಾತ್ರವಲ್ಲದೇ ತಮ್ಮ ದಿಟ್ಟ ಹೇಳಿಕೆಗಳಿಂದಾಗಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಈ ತಲೆಮಾರಿನ ಸಾಕಷ್ಟು ಯುವ ಸಮುದಾಯದ ಅಭಿಮಾನಿಗಳಿದ್ದಾರೆ. ತಮ್ಮ ವೃತ್ತಿ ಹಾಗೂ ವೈಯಕ್ತಿಕ ಬದುಕಿನುದ್ಧಕ್ಕೂ ಹಲವು ಸಂಪ್ರದಾಯ ಕಟ್ಟುಪಾಡುಗಳನ್ನು ಬ್ರೇಕ್ ಮಾಡಿದವರು. ದಕ್ಷಿಣ ಆಫ್ರಿಕಾದ ಪ್ರಸಿದ್ಧ ಕ್ರಿಕೆಟಿಗ ವೀವಿಯನ್ ರಿಚರ್ಡ್ ಅವರ ಜೊತೆ ಮದುವೆಗೂ ಮೊದಲೇ ಮಗು ಪಡೆದಿದ್ದ ನಟಿ ಬಳಿಕ ಅವರಿಂದ ದೂರಾಗಿ ಒಂಟಿಯಾಗಿ ಮಗಳು ಮಸಬಾ ಗುಪ್ತಾಳನ್ನು ಸಾಕಿದ್ದರು.

ಈ ಹಿಂದೊಮ್ಮೆ ಕಾಮಿಡಿಯನ್ ಕಪಿಲ್ ಶರ್ಮಾ ಶೋಗೆ ಬಂದಿದ್ದ ನಟಿ ನೀನಾಗೆ ಕಪಿಲ್ ನೀವು ಬರ್ತಾ ಬರ್ತಾ ಪಮೇಲ್ ಆಂಡರ್ಸನ್‌ ರೀತಿ ಆಗುತ್ತಿದ್ದೀರಾ ಎಂದು ಕೇಳಿದ್ದರು. ಇದಕ್ಕೆ ಉತ್ತರಿಸಿದ ನೀನಾ ಗುಪ್ತಾ, ಇಲ್ಲ, ಸಾಧ್ಯವಿಲ್ಲ, ಏಕೆಂದರೆ ಅವಳಷ್ಟು ದೊಡ್ಡ ಬೂ**ಸ್ ತನಗಿಲ್ಲ ಎಂದು ಬೋಲ್ಡ್ ಆಗಿ ಉತ್ತರಿಸಿದ್ದರು. ಇಂಥಾ ನೀನಾ ಗುಪ್ತಾ ಅವರು ಇತ್ತೀಚೆಗೆ 66ನೇ ವಸಂತಕ್ಕೆ ಕಾಲಿರಿಸಿದರು. ತಮ್ಮ 66ನೇ ವರ್ಷದ ಹುಟ್ಟುಹಬ್ಬವನ್ನು ನಟಿ ಬಹಳ ಬಿಂದಾಸ್ ಆಗಿ ಆಚರಿಸಿದ್ದು, ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ. ಆದರೆ ಅವರ ಸಂಭ್ರಮಕ್ಕಿಂತ ಜನರಿಗೆ ಗಮನ ಸೆಳೆದಿದ್ದು ನಟಿ ಹಾಕಿದ್ದ ಬಟ್ಟೆ.

ನೀನಾ ಗುಪ್ತಾ ನಿನ್ನೆ ತಮ್ಮ ಹುಟ್ಟುಹಬ್ಬಕ್ಕೆ ಗೋಲ್ಡನ್ ಬಣ್ಣದ ಬಿಸ್ಕೆಟ್ ಬ್ರಾ ತೊಟ್ಟು ಹೊರಭಾಗದಲ್ಲಿ ಬಿಳಿ ಬಣ್ಣದ ರಾನ್ ಕಪ್ತಾನ್(Rann Kaftan) ಹೆಸರಿನ ಕೋಟಿನಿಂದ ತಮ್ಮನ್ನು ಮುಚ್ಚಿಕೊಂಡಿದ್ದರು. ಆದರೆ ಇದರಲ್ಲಿ ಎದೆಯ ಕ್ಲೇವೇಜ್ ಮಾತ್ರವಲ್ಲ, ಹೊಕ್ಕಳಿನಿಂದ ತುಸು ಮೇಲೆವರೆಗೆ ಸಂಪೂರ್ಣವಾಗಿ ಕಾಣಿಸುತ್ತಿತ್ತು. ಈ ಬಟ್ಟೆಯನ್ನು ಸಿದ್ಧಪಡಿಸಿದ್ದು, ಬೇರೆ ಯಾರು ಅಲ್ಲ ನೀನಾ ಅವರ ಪುತ್ರಿ ಮಸಬಾ ಗುಪ್ತಾ. ಅವರ ಫ್ಯಾಷನ್ ಲೇಬಲ್ ಹೌಸ್ ಆಫ್ ಮಸಾಬಾದಿಂದ ಈ ಬಟ್ಟೆಯನ್ನು ತರಲಾಗಿತ್ತು.

ಈ ಬಟ್ಟೆಯನ್ನು ತೊಟ್ಟು ತಮ್ಮ ಮುಂದಿನ ಸಿನಿಮಾವಾದ 'ಮೆಟ್ರೋ ಇನ್ ದಿನೋ'ದ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ನೀನಾ ಬಂದಿದ್ದರು. ಬರ್ತ್‌ಡೇಯೂ ಇದ್ದ ಕಾರಣ ಅಲ್ಲಿ ನೀನಾ ಪಪಾರಾಜಿಗಳ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಜೊತೆಗೆ ಅಲ್ಲಿದ್ದ ಅಭಿಮಾನಿಗಳ ಜೊತೆಗೆ ಚೆನ್ನಾಗಿ ಮಾತುಕತೆ ನಡೆಸಿದರು. ಆದಿತ್ಯ ರಾಯ್ ಕಪೂರ್, ಸಾರಾ ಅಲಿ ಖಾನ್, ಕೊಂಕಣ ಸೇನ್ ಶರ್ಮಾ, ಪಂಕಜ್ ತ್ರಿಪಾಠಿ ಮತ್ತು ನಿರ್ದೇಶಕ ಅನುರಾಗ್ ಬಸು ಈ ಕಾರ್ಯಕ್ರಮದಲ್ಲಿ ಇದ್ದರು. ಆದರೆ ಜನರ ಗಮನ ಸೆಳೆದಿದ್ದು, ಮಾತ್ರ ಕೇವಲ ನೀನಾ ಗುಪ್ತಾ ಅವರ ಬಟ್ಟೆ. ವೀಡಿಯೋ ವೈರಲ್ ಆಗುತ್ತಿದ್ದಂತೆ ಇಳಿವಯಸ್ಸಿನಲ್ಲಿ ಈ ರೀತಿ ದೇಹ ಪ್ರದರ್ಶನ ಬೇಕಾ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.

ಕೆಲವರು ಇಳಿವಯಸ್ಸಿನಲ್ಲಿ ಇವರಿಗೆ ಯೌವ್ವನ ಬಂತು ಎಂದು ಟೀಕಿಸಿದರೆ, ಇನ್ನು ಕೆಲವರು ಎಂಥಾ ಕಾಲ ಬಂತಪ್ಪಾ ಎಂದಿದ್ದಾರೆ. ಈ ಬಟ್ಟೆಯ ಅಗತ್ಯವಿತ್ತೇ ಚೆಂದ ಕಾಣ್ಸಿದ್ರೆ ಧರಿಸಬೇಕು ಇದು ಚೆಂದ ಕಾಣಿಸುತ್ತಾ ಎಂದು ಮತ್ತೊಬ್ಬರು ಕೇಳಿದ್ದಾರೆ. ಈ ವಯಸ್ಸಿನಲ್ಲಿ ನೀವು ಏನನ್ನೂ ತೋರಿಸಲು ಬಯಸಿದ್ದೀರಿ ಎಂದು ಇನ್ನೊಬ್ಬರು ಕೇಳಿದ್ದಾರೆ. ಅಸಭ್ಯವಾಗಿರುವುದಕ್ಕೆ ವಯಸ್ಸಿನ ಗಡಿ ಇಲ್ಲ ಎಂದು ನೀನಾ ಸಾಬೀತುಪಡಿಸಿದ್ದಾರೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಹಾಗೆಯೇ ಈಕೆ ಈಗ ಬದಲಾಗಿದ್ದಲ್ಲ, ಈಕೆ ಆಗಿನಿಂದಲೂ ಹಾಗೆಯೇ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ವಯಸ್ಸಿಗೆ ತಕ್ಕಂತೆ ಬಟ್ಟೆ ಹಾಕಿ ಗೌರವಯುತವಾಗಿ ಕಾಣಿಸಬೇಕು ಇದೆಂಥಾ ಧಿರಿಸು ಎಂದು ಮತ್ತೊಬ್ಬರು ಟೀಕಿಸಿದ್ದಾರೆ. ಒಟ್ಟಿನಲ್ಲಿ ವಯಸ್ಸಾದ ನಂತರ ಮಹಿಳೆಯರು ಎಂಥಾ ಬಟ್ಟೆ ಧರಿಸಬೇಕು ಎಂಬ ವಿಚಾರದ ಬಗ್ಗೆ ಈ ವೀಡಿಯೋ ಚರ್ಚೆ ಹುಟ್ಟು ಹಾಕಿದೆ. ಕೆಲವರು ನೀನಾ ಗುಪ್ತಾ ಫ್ಯಾಷನ್ ಸೆನ್ಸ್ ಅನ್ನು ಮೆಚ್ಚಿದ್ದಾರೆ. ನೀವು ಈ ವಯಸ್ಸಲ್ಲೂ ಫಿಟ್ ಆಗಿರುವುದು ಖುಷಿ ನೀಡುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅದೇನೆ ಇರಲಿ ವಯಸ್ಸಾಗುತ್ತಿದ್ದಂತೆ ಒಬ್ಬರು ತಮ್ಮ ಧಿರಿಸಿನಲ್ಲೂ ಬದಲಾವಣೆ ಮಾಡಬೇಕೆ? ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಕಾಮೆಂಟ್ ಮಾಡಿ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?