
ಸಲ್ಮಾನ್ ಖಾನ್‌ಗೆ ಕೇಡುಗಾಲ..?
ಅದ್ಯಾಕೋ ಗೊತ್ತಿಲ್ಲ, ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ (Salman Khan) ಅವರಿಗೆ ಟೈಮೇ ಸರಿಯಿಲ್ಲ ಎನ್ನಬಹುದು. ಸಿಕಂದರ್ ಸೋಲಿನಿಂದ ಕಂಗೆಟ್ಟಿದ್ದ ಸಲ್ಲೂ ಇದೀಗ ಬಿಗ್ ಬಾಸ್ ಹಿಂದಿ 19 ಸೀಸನ್ (Bigg Boss 19) ಮೂಲಕ ತಮ್ಮ ಸ್ಮೈಲ್ ವಾಪಸ್ ಪಡೆಯುತ್ತ ಇದ್ದರು. ಆದರೆ ಅದೇನೋ ಕೇಡುಗಾಲ ಎಂಬಂತೆ ಮತ್ತೆ ಅವರಿಗೆ ದುರಾದೃಷ್ಟ ವಕ್ಕರಿಸಿದ್ಯಾ? ಹೌದು ಅಂತಿವೆ ಇತ್ತೀಚಿಗೆ ಅವರ ದಾರಿಯಲ್ಲಿ ಬಂದಿರುವ ಇನ್ನೊಂದು ತೊಡಕು!
ಅಷ್ಟಕ್ಕೂ ಆಗಿದ್ದಾದರೂ ಏನು ಅಂತೀರಾ? ಎಂದಿನಂತೆ ಬಿಗ್ ಬಾಸ್ ಈ ಸೀಸನ್ ಕೂಡ ನಡೆಸಿಕೊಡುತ್ತಿದ್ದಾರೆ ಸಲ್ಲೂ ಮಿಯಾ. ಅದರೆ ಎಪಿಸೋಡ್ ಟಾಸ್ಕ್ ಸಮಯದಲ್ಲಿ ಕತ್ರಿನಾ ಕೈಫ್ ಹೆಜ್ಜೆಹಾಕಿರುವ 'ಚಿಕ್ನಿ ಚಮೇಲಿ' ಹಾಡನ್ನು ಪ್ಲೇ ಮಾಡಲಾಗಿದೆ. ಈ ಹಾಡನ್ನು ಹೃತಿಕ್ ರೋಶನ್ ನಟನೆಯ 'ಅಗ್ನಿಪಥ್' ಚಿತ್ರದಲ್ಲಿ ಬಳಸಲಾಗಿತ್ತು.
ಈ ಅಗ್ನಿಪಥ್ (Agneepath) ಚಿತ್ರವು 2012ರಲ್ಲಿ (26 January 2012) ಹೃತಿಕ್ ರೋಶನ್ ಹಾಗು ಪ್ರಿಯಾಂಕಾ ಚೋಪ್ರಾ ನಟನೆಯಲ್ಲಿ ಮೂಡಿಬಂದಿದೆ. ಆದರೆ, ಈಗ ಆ ಹಾಡನ್ನು ಸಲ್ಮಾನ್ ಖಾನ್ ಹೋಸ್ಟ್ ಮಾಡುತ್ತಿರುವ ಬಿಗ್ ಬಾಸ್ 19 ಶೋದಲ್ಲಿ ಯೂಸ್ ಮಾಡಲಾಗಿದೆ. ಆ ಚಿತ್ರದ ನಿರ್ಮಾಪಕರು ಇದೀಗ ಈ ಬಗ್ಗೆ ನಟ ಸಲ್ಮಾನ್ ಖಾನ್ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.
ಕೇಸ್ ದಾಖಲಿಸಿರುವ ಅಗ್ನಿಪಥ್ ನಿರ್ಮಾಪಕರು 'ಈ ಹಾಡನ್ನು ಬಿಗ್ ಬಾಸ್ 19ನಲ್ಲಿ ಅನುಮತಿ ಇಲ್ಲದೇ ಬಳಸಲಾಗಿದೆ. ಈ ಹಾಡನ್ನು ಅಲ್ಲದೇ 'ಗರಿ ತೇರೆ ಪ್ಯಾರ್ ಮೈ' ಚಿತ್ರದ ಹಾಡನ್ನೂ ಸಹ ಬಳಸಿಕೊಳ್ಳಲಾಗಿದೆ. ಅನಧಿಕೃತವಾಗಿ ಹೀಗೆ ಸಾಂಗ್ಸ್ ಬಳಸಿಕೊಳ್ಳುವುದು ಅಪರಾಧ ಎನ್ನಲಾಗಿದ್ದು, ಇದೀಗ ನಿರ್ಮಾಪಕರ ಕಾರ್ಯಕ್ರಮದ ಹೋಸ್ಟ್ ಸಲ್ಲೂ ವಿರುದ್ಧ ಕಾನೂನು ಹೋರಾಟ ಕೈಗೊಂಡಿದ್ದಾರೆ.
ಬಿಗ್ ಬಾಸ್ ಹಿಂದಿ ಶೋ ಹೋಸ್ಟ್ ಮಾಡಲು ನಟ ಸಲ್ಮಾನ್ ಖಾನ್ ಅವರು 15 ವಾರಕ್ಕೆ 120 ರಿಂದ 125 ಕೋಟಿ ರೂಪಾಯಿ ಸಂಭಾವನೆ ಪ್ಯಾಕೆಜ್ ಪಡೆಯುತ್ತಾರೆ. ಅಂದರೆ ಸುಮಾರು ವಾರವೊಂದಕ್ಕೆ ಸುಮಾರು 8-10 ಕೋಟಿ ರೂಪಾಯಿ. ಅಷ್ಟು ದೊಡ್ಡ ಶೋ, ಅಷ್ಟು ದೊಡ್ಡ ಸಂಭಾವನೆಯಲ್ಲಿ ಇಂತಹ ಚಿಕ್ಕಪುಟ್ಟ ಸಮಸ್ಯೆಗಳನ್ನು, ಎಡವಟ್ಟುಗಳನ್ನು ಯಾಕೆ ಮಾಡಿಕೊಳ್ಳಬೇಕು? ಯಾಕೆ ಹಾಡುಗಳನ್ನು ಕದಿಯಬೇಕು? ರೈಟ್ಸ್ ತೆಗೆದುಕೊಂಡು ಬಳಸಿಕೊಳ್ಳಲು ಏನು ಸಮಸ್ಯೆ ಎಂದು 'ಅಗ್ನಿಪಥ್' ನಿರ್ಮಾಪಕರಾದ ಹೀರೂ ಜೋಹರ್ ಹಾಗೂ ಕರಣ್ ಜೋಹರ್ ತಕರಾರು ತೆಗೆದಿದ್ದಾರೆ. ಈ ವಿವಾದ ಬಗೆಹರಿದು ತಣ್ಣಗಾಗುತ್ತೋ ಅಥವಾ ಮುಂದೆ ಬೆಂಕಿ ಹೆಚ್ಚುತ್ತೋ ಹೋಗುತ್ತೋ ಎಂಬುದನ್ನು ಕಾದು ನೋಡಬೇಕಿದೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.