
ಅದೊಂದು ಬಾಲಿವುಡ್ ಫಿಲಂ. ಆಗ ತಮ್ಮ ಕರಿಯರ್‌ನ ಶುರು ಮಾಡುತ್ತಿದ್ದ ನಟಿ ಐಶ್ವರ್ಯ ರೈ (Aishwarya Rai) ಸೇರಿದಂತೆ ನಾಲ್ವರು ಹೀರೋಯಿನ್‌ಗಳು ಆ ಚಿತ್ರದ ನಾಯಕಿ ಪಾತ್ರವನ್ನು ತಿರಸ್ಕರಿಸಿದರು. ಹಾಗೆ ತಿರಸ್ಕರಿಸಿದ ಪಾತ್ರವನ್ನು ಕರಿಷ್ಮಾ ಕಪೂರ್ (Karishma kapoor) ತಮ್ಮದಾಗಿಸಿಕೊಂಡರು. ಮುಂದೆ ಸೂಪರ್ ಸ್ಟಾರ್ ಆದರು. ಆ ಫಿಲಂ ರಾಜಾ ಹಿಂದೂಸ್ತಾನಿ. ಕರಿಷ್ಮಾ ಅದರಲ್ಲಿ ಆಮೀರ್ ಖಾನ್ ನಾಯಕಿ.
ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ತಮ್ಮ ವೃತ್ತಿಜೀವನದಲ್ಲಿ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರ ಚೊಚ್ಚಲ ಚಿತ್ರ ಔರ್ ಪ್ಯಾರ್ ಹೋ ಗಯಾ ನಂತರ, ಬಾಲಿವುಡ್ ಉದ್ಯಮದಲ್ಲಿ ತಮ್ಮನ್ನು ತಾವು ಸ್ಥಾಪಿಸಿಕೊಳ್ಳಲು ಅವರು ಕೆಲವು ಗಮನಾರ್ಹ ಹೋರಾಟಗಳನ್ನು ಎದುರಿಸಿದರು. ಈ ಚಿತ್ರ 1997ರಲ್ಲಿ ಬಿಡುಗಡೆಯಾಯಿತು. ಆದರೆ ರಾಜಾ ಹಿಂದೂಸ್ತಾನಿ ಆಫರ್ ಆಕೆಗೆ ಬಂದದ್ದು 1996ರಲ್ಲಿ. ಆ ವರ್ಷವೇ ಬಿಡುಗಡೆಯಾದ ಚಿತ್ರವದು. ಐಶ್ವರ್ಯ ಅದನ್ನು ತಿರಸ್ಕರಿಸಿದ್ದಕ್ಕೆ ಮುಂದೆ ವಿಷಾದಿಸಬೇಕಾಗಿ ಬಂತು. ಯಾಕೆಂದರೆ ಅದು ಬಾಲಿವುಡ್‌ಗೆ ಆಕೆಯ ಚೊಚ್ಚಲ ಪ್ರವೇಶಕ್ಕೂ ಮೊದಲು ಬಂದಿತು.
ರಾಜಾ ಹಿಂದೂಸ್ತಾನಿಯಲ್ಲಿ ನಟಿಸುವ ಆಫರ್ ಅನ್ನು ಐಶ್ವರ್ಯ ಅವರು ತಕ್ಷಣ ತಿರಸ್ಕರಿಸಿದರು. ಐಶ್ವರ್ಯಾ ರೈ ಬಚ್ಚನ್ ನಿರಾಕರಿಸಿದ ನಂತರ, ನಿರ್ಮಾಪಕರು ಮನೀಷಾ ಕೊಯಿರಾಲಾ, ಪೂಜಾ ಭಟ್ ಮತ್ತು ಜೂಹಿ ಚಾವ್ಲಾ ಅವರನ್ನು ಸಂಪರ್ಕಿಸಿದರು. ಅವರೆಲ್ಲರೂ ನಿರಾಕರಿಸಿದರು. ನಂತರ ಆಮಿರ್ ಖಾನ್ ಅಭಿನಯದ ರಾಜಾ ಹಿಂದೂಸ್ತಾನಿಯ ನಾಯಕಿ ಪಾತ್ರ ಅಂತಿಮವಾಗಿ ಕರಿಷ್ಮಾ ಕಪೂರ್ ಪಾಲಾಯಿತು. ಬಿಡುಗಡೆಯಾದ ಬಳಿಕ ರಾಜಾ ಹಿಂದೂಸ್ತಾನಿ ಆ ಕಾಲದ ಅತಿದೊಡ್ಡ ಹಿಟ್‌ಗಳಲ್ಲಿ ಒಂದೆನಿಸಿತು.
ಈ ಆಮಿರ್ ಖಾನ್ ಫಿಲಂ, ಕರಿಷ್ಮಾ ಕಪೂರ್ ಅವರನ್ನು ರಾತ್ರೋರಾತ್ರಿ ಸೂಪರ್‌ಸ್ಟಾರ್ ಆಗಿ ಮಾಡಿತು. 5.75 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಲಾದ ಈ ಚಿತ್ರ ವಿಶ್ವಾದ್ಯಂತ 76.34 ಕೋಟಿ ರೂ.ಗಳನ್ನು ಗಳಿಸಿತು. ಆ ವರ್ಷದ ಅತಿ ಹೆಚ್ಚು ಗಳಿಕೆಯ ಚಿತ್ರವೆನಿಸಿತು. 1990ರ ದಶಕದಲ್ಲಿ ಭಾರತದಲ್ಲಿ ಹಮ್ ಆಪ್ಕೆ ಹೈ ಕೌನ್, ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಮತ್ತು ಕುಚ್ ಕುಚ್ ಹೋತಾ ಹೈ ನಂತರ ನಾಲ್ಕನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಯಿತು.
ಕರಿಷ್ಮಾ ಕಪೂರ್ ಮತ್ತು ಆಮಿರ್ ಖಾನ್ ನಡುವಿನ ಕೆಮಿಸ್ಟ್ರಿ ಎಲೆಕ್ಟ್ರಿಕ್ ಆಗಿತ್ತು. ಅವರ ಅಭಿನಯವನ್ನು ವ್ಯಾಪಕವಾಗಿ ಪ್ರಶಂಸಿಸಲಾಯಿತು. ಅದರಲ್ಲಿನ ಒಂದು ಚುಂಬನ ದೃಶ್ಯ ಸ್ವಲ್ಪ ವಿವಾದ ಸೃಷ್ಟಿಸಿತು ಮತ್ತು ಚಿತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿತು. ಮುಂದೆ ಕರಿಷ್ಮಾಗೆ ವ್ಯಾಪಕವಾಗಿ ಅವಕಾಶಗಳು ಬಂದು ಆಕೆ ಬೇಡಿಕೆಯ ಹೀರೋಯಿನ್‌ಗಳಲ್ಲಿ ಒಬ್ಬಳಾದಳು. ಮುಂದೆ ಐಶ್ವರ್ಯ ರೈ ಕೂಡ ಕರಿಷ್ಮಾಳನ್ನು ಹಿಂದೆ ಹಾಕಿ ಇನ್ನಷ್ಟು ಯಶಸ್ವಿ ನಾಯಕಿ ಎನಿಸಿದಳು, ಆ ಮಾತು ಬೇರೆ.
ಇತ್ತೀಚೆಗೆ ಕರಿಷ್ಮಾ ಮಾಜಿ ಪತಿ ಸಂಜಯ್ ಕಪೂರ್ ಕಳೆದ ಜೂನ್‌ನಲ್ಲಿ ಲಂಡನ್‌ನಲ್ಲಿ ನಿಧನರಾಗಿದ್ದಾರೆ. ಅವರು ಒಟ್ಟು 31000 ಕೋಟಿ ರು. ಆಸ್ತಿ ಹೊಂದಿದ್ದಾರೆ. ಕರಿಷ್ಮಾ ಕಪೂರ್ ಅವರ ಇಬ್ಬರು ಮಕ್ಕಳು, ಇತ್ತೀಚೆಗಷ್ಟೇ ನಿಧನರಾದ ತಮ್ಮ ತಂದೆ ಸಂಜಯ ಕಪೂರ್ ಅವರ ಆಸ್ತಿಯಲ್ಲಿ ಪಾಲು ನೀಡುವಂತೆ ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಸಂಜಯ್ ಅವರ ವಿಲ್‌ಗೆ ಸಂಬಂಧಿಸಿದಂತೆ ಕರಿಷ್ಮಾ ಮಕ್ಕಳು ನ್ಯಾಯಾಲಯದ ಮೊರೆ ಹೋಗಿದ್ದು, ‘ಕಪೂರ್ ಆಗಲಿ, ಅವರ ಮಲತಾಯಿ ಪ್ರಿಯಾ ಕಪೂರ್ ಅಥವಾ ಇತರ ಯಾವುದೇ ವ್ಯಕ್ತಿಗಳು ವಿಲ್ ಬಗ್ಗೆ ಉಲ್ಲೇಖಿಸಿಲ್ಲ. ಪ್ರಿಯಾ ಅವರ ನಡವಳಿಕೆ ನೋಡಿದರೆ ವಿಲ್ ಅವರೇ ರಚಿಸಿದ್ದಾರೆ ಎನ್ನುವ ಸಂಶಯ ಮೂಡುತ್ತದೆ’ ಎಂದು ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.