ದಾಸನ ಫ್ಯಾನ್ಸ್‌ಗೆ ಕಿಚ್ಚನ ಫ್ಯಾನ್ಸ್ ಪೈಪೋಟಿ..! ಚಾರ್ಜ್ ​ಶೀಟ್‌​ನಲ್ಲಿ ಸುದೀಪ್ ಫ್ಯಾನ್ಸ್ ಹೆಸರು..?

Published : Mar 13, 2026, 03:21 PM ISTUpdated : Mar 13, 2026, 04:39 PM IST
Darshan and Vijayalakshmi

ಸಾರಾಂಶ

ನಟಿ ರಮ್ಯಾ ಬಳಿಕ, ಇದೀಗ ದರ್ಶನ್ ಪತ್ನಿ ವಿಜಯಲಕ್ಷ್ಮಿ ತಮ್ಮ ವಿರುದ್ಧ ಅಶ್ಲೀಲ ಕಾಮೆಂಟ್ ಮಾಡಿದವರ ವಿರುದ್ಧ ಕಾನೂನು ಸಮರ ಸಾರಿದ್ದಾರೆ. ಈ ಪ್ರಕರಣದಲ್ಲಿ ಸೈಬರ್ ಕ್ರೈಂ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದು, ಆರೋಪಿಗಳಲ್ಲಿ ಕೆಲವರು ನಟ ಸುದೀಪ್ ಅವರ ಅಭಿಮಾನಿಗಳು ಎಂದು ತಿಳಿದುಬಂದಿದೆ.

ಇತ್ತೀಚಿಗಷ್ಟೇ ನಟಿ ರಮ್ಯಾ ಕೋರ್ಟ್ ಅಂಗಳಕ್ಕೆ ಬಂದು ತನ್ನ ವಿರುದ್ದ ಕೆಟ್ಟ ಕಾಮೆಂಟ್ ಮಾಡಿದ್ದ ದರ್ಶನ್ ಫ್ಯಾನ್ಸ್ ವಿರುದ್ದ ಸಾಕ್ಷಿ ಹೇಳಿದ್ರು. ಈಗ ವಿಜಯಲಕ್ಷ್ಮೀ ವಿರುದ್ದ ಅಶ್ಲೀಲ ಕಾಮೆಂಟ್ಸ್ ಮಾಡಿದವರ ವಿರುದ್ದ ಚಾರ್ಜ್ ಶೀಟ್ ಸಲ್ಲಿಕೆ ಆಗಿದೆ. ದರ್ಶನ್​ ಪತ್ನಿಗೆ ಕೆಟ್ಟ ಕಾಮೆಂಟ್ ಮಾಡಿದ ಕೆಲವರು ಕಿಚ್ಚನ ಫ್ಯಾನ್ಸ್ ಅನ್ನೋದು ಕೂಡ ಬಹಿರಂಗವಾಗಿದೆ.

ದಾಸನ ಫ್ಯಾನ್ಸ್‌ಗೆ ಕಿಚ್ಚನ ಫ್ಯಾನ್ಸ್ ಪೈಪೋಟಿ..!

ಯೆಸ್ ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ ಮೊನ್ನೆ ತಾನೇ ಸಿಟಿ ಸಿವಿಲ್ ಕೋರ್ಟ್‌ಗೆ ಬಂದಿದ್ರು. ಕಳೆದ ಆಗಸ್ಟ್‌ನಲ್ಲಿ ರಮ್ಯಾ ತನ್ನ ವಿರುದ್ದ ಕೆಟ್ಟ ಕಾಮೆಂಟ್ ಮಾಡಿದ, ಅಶ್ಲೀಲ ಸಂದೇಶ ಕಳಿಸಿ ಬೆದರಿಕೆ ಹಾಕಿದ ದರ್ಶನ್ ಫ್ಯಾನ್ಸ್​ ವಿರುದ್ದ ದೂರು ನೀಡಿದ್ರು. ಸೈಬರ್ ಪೊಲೀಸರು ಅವರನ್ನ ಬಂಧಿಸಿ ಜೈಲಿ ಗಟ್ಟಿದ್ರು. ಬರೀ ದೂರು ಕೊಡೋದು ಮಾತ್ರ ಅಲ್ಲ ಕೊನೆವರೆಗೂ ಕೋರ್ಟ್‌ನಲ್ಲಿ ಹೋರಾಡಿ ಅವರಿಗೆ ಬುದ್ದಿ ಕಲಿಸಿಯೇ ಸಿದ್ದ ಅಂತ ಗುಡುಗಿದ್ದ ರಮ್ಯಾ ಕೋರ್ಟ್‌​ಗೆ ಬಂದು ಸಾಕ್ಷಿ ಹೇಳಿದ್ರು. ತನ್ನ ಹೋರಾಟ ದರ್ಶನ್ ಫ್ಯಾನ್ಸ್ ವಿರುದ್ದ ಅಲ್ಲ, ಬದಲಾಗಿ ಕೆಟ್ಟದಾಗಿ ಸೋಷಿಯಲ್ ಮಿಡಿಯಾದಲ್ಲಿ ಹೆಣ್ಣನ್ನ ನಿಂದಿಸುವವರ ವಿರುದ್ದ ಅಂತ ಅಬ್ಬರಿಸಿದ್ರು.

ಮತ್ತೀಗ ವಿಜಯಲಕ್ಷ್ಮೀ ದರ್ಶನ್ ಸರದಿ. ಮ್ಯಾಕ್ಸ್ ಸಿನಿಮಾ ರಿಲೀಸ್ ಟೈಂನಲ್ಲಿ ಸುದೀಪ್, ಯುದ್ಧದ ಮಾತನಾಡಿದ್ರು. ಅದರ ಬಗ್ಗೆ ಡೆವಿಲ್ ವಿಜಯ ಯಾತ್ರೆಯಲ್ಲಿ ವಿಜಯಲಕ್ಷ್ಮೀ ಟಾಂಗ್ ಕೊಟ್ಟಿದ್ರು. ಆಗ ಕಿಚ್ಚನ ಫ್ಯಾನ್ಸ್ ವಿಜಯಲಕ್ಷ್ಮೀ ವಿರುದ್ದ ಮುಗಿಬಿದ್ದಿದ್ರು.

ರಮ್ಯಾ ಹಾದಿಯಲ್ಲೇ ಸಾಗಿದ ವಿಜಯ್‌ಲಕ್ಷ್ಮಿ

ರಮ್ಯಾ ರೀತಿಯಲ್ಲೇ ವಿಜಯಲಕ್ಷ್ಮೀ ಕೂಡ ಸೈಬರ್ ಠಾಣೆಗೆ ದೂರು ನೀಡಿದ್ರು. ಅನೇಕ ಪುಂಡರ ಬಂಧನ ಕೂಡ ಆಗಿತ್ತು. ಸದ್ಯ ಈ ಕೇಸ್​​ನಲ್ಲಿ ಚಾರ್ಜ್ ಶೀಟ್ ದಾಖಲಾಗಿದ್ದು ಸಿಸಿಬಿ ಸೈಬರ್ ಕ್ರೈಂ ಪೊಲೀಸರು 45ನೇ ಎಸಿಎಂಎಂ ನ್ಯಾಯಾಲಯಕ್ಕೆ ಆರು ಆರೋಪಿಗಳ ವಿರುದ್ಧ ಸುಮಾರು 473 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಚಾರ್ಜ್ ಶೀಟ್​ನಲ್ಲಿ ಆರು ಆರೋಪಿಗಳ ಹೇಳಿಕೆ ದಾಖಲು ಮಾಡಲಾಗಿದೆ. ಆರೋಪಿಗಳಲ್ಲಿ ಕೆಲವರು ನಟ ಸುದೀಪ್ ಅಭಿಮಾನಿಗಳು ಎಂಬ ವಿಷಯ ಬಹಿರಂಗವಾಗಿದೆ. ಎಲ್ಲರೂ ನಕಲಿ ಐಡಿಗಳನ್ನ ಕ್ರಿಯೇಟ್ ಮಾಡಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಕಾಮೆಂಟ್ ಮಾಡೋ ಉದ್ದೇಶಕ್ಕೆ ನಕಲಿ ಅಕೌಂಟ್ ಓಪನ್ ಮಾಡಿದ್ದರು ಅನ್ನೋ ವಿಷಯ ಗೊತ್ತಾಗಿದೆ.

ವಿಜಯಲಕ್ಷ್ಮೀ ಕೂಡ ಸೋಷಿಯಲ್ ಮಿಡಿಯಾದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡೋರಿಗೆ ಪಾಠ ಕಲಿಸಿಯೇ ಸಿದ್ದ ಅಂತ ಯುದ್ಧಕ್ಕೆ ಇಳಿದುಬಿಟ್ಟಿದ್ದಾರೆ. ಪರಿಣಾಮ ಕೆಲ ಕಿಚ್ಚನ ಫ್ಯಾನ್ಸ್ ಕೂಡ ಕಂಬಿ ಎಣಿಸುವಂತೆ ಆಗಿದೆ.

ಅದು ದರ್ಶನ್ ಆಗಲಿ, ಕಿಚ್ಚ ಸುದೀಪ್ ಆಗಲಿ ಯಾವ ನಟರೇ ಆಗಲಿ ಅವರ ಅಭಿಮಾನಿಗಳು ಹದ್ದು ಮೀರಿ ನಡೆದುಕೊಂಡ್ರೆ ಹೆಣ್ಣು ಮಕ್ಕಳನ್ನ ನಿಂದಿಸಿದ್ರೆ ಅವರಿಗೆ ಜೈಲೇ ಗತಿ ಅನ್ನೋದು ಪ್ರೂವ್ ಆಗಿದೆ. ಅಸಲಿಗೆ ಇಂಥಾ ಕೇಸ್​ನಲ್ಲಿ ಆರೋಪಿ ತಪ್ಪು ಮಾಡಿದ್ದು ಪ್ರೂವ್ ಆದ್ರೆ 7 ವರ್ಷ ಶಿಕ್ಷೆ ಆಗುತ್ತೆ. ಆಗ ಅಭಿಮಾನಿಯನ್ನ ಬಚಾವ್ ಮಾಡೋದಕ್ಕೆ ಯಾವ ಸ್ಟಾರ್ ಕೂಡ ಬರೋದಿಲ್ಲ. ಇದು ಎಲ್ಲಾ ಪುಂಡ ಅಭಿಮಾನಿಗಳಿಗೂ ಒಂದು ಪಾಠ. ಮತ್ತು ಆ ಪಾಠ ಕಲಿಸಿರೋದು ಇಬ್ಬರು ಗಟ್ಟಿಗಿತ್ತಿ ಹೆಣ್ಣುಮಕ್ಕಳು ಅನ್ನೋದೇ ವಿಶೇಷ..!

ಫಿಲ್ಮ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Priyanka Shivanna Home: ಇದು ಸಾಧನೆ ಅಂದ್ರೆ..! ಹೊಸ ಮನೆಗೆ ಕಾಲಿಟ್ಟ Agnisakshi Serial ಪ್ರಿಯಾಂಕಾ ಶಿವಣ್ಣ
ಚಿತ್ರಮಂದಿರ ಉಳಿಸಲು ದೊಡ್ಡ ತೀರ್ಮಾನ: OTTಗೆ 8 ವಾರ ಗ್ಯಾಪ್ ಕಡ್ಡಾಯ