ಸರೆಗಮಪ ವಿನ್ನರ್ ಸುನೀಲ್ ಆಸೆ ಏನು?: ಪ್ರಚಂಡ ಗಾಯಕರನ್ನು ಹಿಂದಿಕ್ಕಿದ ಕಲಬುರಗಿ ಹುಡುಗನ ಸಾಹಸಗಾಥೆ

Published : Aug 01, 2017, 11:20 AM ISTUpdated : Apr 11, 2018, 12:53 PM IST
ಸರೆಗಮಪ ವಿನ್ನರ್ ಸುನೀಲ್ ಆಸೆ ಏನು?: ಪ್ರಚಂಡ ಗಾಯಕರನ್ನು ಹಿಂದಿಕ್ಕಿದ ಕಲಬುರಗಿ ಹುಡುಗನ ಸಾಹಸಗಾಥೆ

ಸಾರಾಂಶ

ಅಪ್ಪನ ಆಸೆ ಈಡೇರಿಸುವ ಆಸೆ! ಇದು ಝಿ ಕನ್ನಡದ ‘ಸರೆಗಮಪ ಸೀಸನ್ 13’ರ ವಿನ್ನರ್ ಸುನೀಲ್ ಅವರ ಕನಸು, ದಿಟ್ಟ ನಿಲುವು, ಮಾನದಾಳದ ಮಾತು.‘ಭಾನುವಾರ ನಡೆದ ಗ್ರಾಂಡ್ ?ನಾಲೆ ಮೂಲಕ ‘ಸರೆಗಮಪ ಸೀಸನ್‌13’ಕ್ಕೆ ತೆರೆ ಬಿದ್ದಿದೆ. ಕಾರ್ಯಕ್ರಮದ ಅಂತಿಮ ಸುತ್ತಿನಲ್ಲಿದ್ದ ಒಟ್ಟು 6 ಮಂದಿ ಗಾಯಕರ ಪೈಕಿ ಕಲಬುರಗಿ ಜಿಲ್ಲೆ ನೆಲೋಗಿ ಗ್ರಾಮದ ಯುವಕ ಸುನೀಲ್, ಶೋ ವಿಜೇತರಾದರು. ವಿಜೇತರಾದ ನಂತರ ಮಾತಿಗೆ ಸಿಕ್ಕ ಗಾಯಕ ಸುನೀಲ್ ತಮ್ಮೊಳಗಿನ ಸಂತಸವನ್ನು ಹಂಚಿಕೊಂಡಿದ್ದು ಹೀಗೆ

ಅಪ್ಪನ ಆಸೆ ಈಡೇರಿಸುವ ಆಸೆ! ಇದು ಝಿ ಕನ್ನಡದ ‘ಸರೆಗಮಪ ಸೀಸನ್ 13’ರ ವಿನ್ನರ್ ಸುನೀಲ್ ಅವರ ಕನಸು, ದಿಟ್ಟ ನಿಲುವು, ಮಾನದಾಳದ ಮಾತು.‘ಭಾನುವಾರ ನಡೆದ ಗ್ರಾಂಡ್ ?ನಾಲೆ ಮೂಲಕ ‘ಸರೆಗಮಪ ಸೀಸನ್‌13’ಕ್ಕೆ ತೆರೆ ಬಿದ್ದಿದೆ. ಕಾರ್ಯಕ್ರಮದ ಅಂತಿಮ ಸುತ್ತಿನಲ್ಲಿದ್ದ ಒಟ್ಟು 6 ಮಂದಿ ಗಾಯಕರ ಪೈಕಿ ಕಲಬುರಗಿ ಜಿಲ್ಲೆ ನೆಲೋಗಿ ಗ್ರಾಮದ ಯುವಕ ಸುನೀಲ್, ಶೋ ವಿಜೇತರಾದರು. ವಿಜೇತರಾದ ನಂತರ ಮಾತಿಗೆ ಸಿಕ್ಕ ಗಾಯಕ ಸುನೀಲ್ ತಮ್ಮೊಳಗಿನ ಸಂತಸವನ್ನು ಹಂಚಿಕೊಂಡಿದ್ದು ಹೀಗೆ

‘ಶೋನಲ್ಲಿ ಗೆದ್ದಿದ್ದು ತುಂಬಾನೆ ಖುಷಿ ಕೊಟ್ಟಿದೆ.

ಆರಂಭದಲ್ಲಿ ನಾನು ಈ ಗೆಲುವನ್ನು ನಿರೀಕ್ಷಿಸಿರಲಿಲ್ಲ. ಆದರೆ ವೇದಿಕೆಯಲ್ಲಿ ನನ್ನಮ್ಮನೊಂದಿಗೆ ನಾನು ಹಾಡಿದಾಗ ನನ್ನೊಳಗಿನ ಆತ್ಮವಿಶ್ವಾಸ ಹೆಚ್ಚಾಯಿತು. ಅಲ್ಲಿಂದಲೇ ನನ್ನ ನಡೆಗೆ ಬದಲಾಯಿತು. ಅಮ್ಮ ಆ ಶಕ್ತಿ ಕೊಟ್ಟಳು. ಜನರು ಮೆಚ್ಚಿಕೊಂಡರು. ನಿಜಕ್ಕೂ ಈ ಗೆಲುವು ಅಮ್ಮನದ್ದೇ ಆಗಿದೆ. ನಾನು ನೆಪ ಮಾತ್ರ’ ಎನ್ನುತ್ತಲೇ ಭಾವುಕರಾದರು ಗದಗದ ಸುನೀಲ್.

ಸಂಗೀತ ಕಲಿಯಲು ಓಡಿ ಹೋದ ಹುಡುಗ

ಕಲಬುರಗಿ ಜಿಲ್ಲೆ ನೆಲೋಗಿ ಗ್ರಾಮದ ಯುವಕ ಸುನೀಲ್ ಈ ಗೆಲುವಿನ ಜತೆಗೆ ಗದಗದ ಜನಕ್ಕೆ ಖುಷಿ ಕೊಟ್ಟಿದ್ದಕ್ಕೂ ಒಂದು ಹಿನ್ನೆಲೆಯಿದೆ. ಗ್ರಾಂಡ್ ಫಿನಾಲೆಯ ಕ್ಷಣ ಕ್ಷಣಕ್ಕೂ ನೆಲೋಗಿ ಜನ ಕಾತರತೆ ಯಲ್ಲಿದ್ದ ಹಾಗೆಯೇ ಗದಗದ ಜನರು ಸುನೀಲ್ ಗೆಲುವನ್ನು ನಿರೀಕ್ಷಿಸುತ್ತಿದ್ದರು. ಅದಕ್ಕೆ ಕಾರಣವಾಗಿದ್ದು ಸುನೀಲ್‌'ಗೂ ಗದಗಕ್ಕೂ ಇದ್ದ ನಂಟು. ಅವರು ಹುಟ್ಟಿದ್ದು ನೆಲೋಗಿ ಗ್ರಾಮವಾದರೂ ಈ ಮಟ್ಟಕ್ಕೆ ಬೆಳೆಸಿದ್ದು ಗದಗ. ‘ದ್ವಿತೀಯ ಪಿಯುಸಿ ಓದುತ್ತಿದ್ದಾಗಲೇ ನನಗೆ ಹಾಡುವ ಹುಚ್ಟು ಶುರುವಾಗಿತ್ತು. ಅದಕ್ಕಾಗಿ ಮನೆ ಬಿಟ್ಟು ಓಡಿ ಬಂದೆ. ಗದಗದಲ್ಲಿ ನೆಲೆ ನಿಂತೆ. ಅಲ್ಲಿ ನನಗೆ ಸಂಗೀತದ ನಂಟು ಬೆಳೆಯಿತು. ಆ ಊರಿನ ಕೊಡುಗೆಯೇ ನನ್ನ ಗೆಲುವಿಗೆ ಪೂರಕವಾಯಿತು’ ಎನ್ನುವ ಸುನೀಲ್, ಅದೇ ಊರಿನಲ್ಲಿದ್ದು ಸಂಗೀತ ಕಲಿಯುವ ಕನಸು ಕಟ್ಟಿಕೊಂಡಿದ್ದಾರೆ.

ಅಪ್ಪನ ಆಸೆ ತೀರಿಸಿದ ಸುನೀಲ್

‘ನನ್ನಪ್ಪನಿಗೆ ನಾನು ಗಾಯಕನಾಗಬೇಕೆನ್ನುವ ಆಸೆ ಇತ್ತಂತೆ. ಸಣ್ಣವನಿದ್ದಾಗ ಅಮ್ಮ ಹೇಳುತ್ತಿದ್ದಳು. ಅಪ್ಪ ಕೂಡ ತನ್ನಾಸೆ ಹೇಳಿಕೊಂಡಿದ್ದು ಇತ್ತು. ಆದ್ರೆ ಅಪ್ಪ ತೀರಿಹೋದ ನಂತ್ರ ಅದು ನನ್ನೊಳಗೆ ತೀವ್ರವಾಗಿ ಕಾಡಲು ಶುರು ಮಾಡಿತು. ಅಪ್ಪನ ಆಸೆ ಈಡೇರಿಸಬೇಕು ಅನ್ನೋದೆ ನನ್ನ ಬಹುದೊಡ್ಡ ಕನಸಾಗಿ ಉಳಿ ಯಿತು. ಇವತ್ತು ಅದಕ್ಕೊಂದು ವೇದಿಕೆ ಸಿಕ್ಕಿದೆ. ‘ ಸರೆಗಮಪ ಸೀಸನ್ 13’ ರಲ್ಲಿ ನಾನು ಗೆದ್ದಿದ್ದು ಅದಕ್ಕೆ ಸೇತುವೆ ಆಗಿದೆ. ಅಪ್ಪನ ಆಸೆ ಈಡೇರಿಸುವುದು ನನ್ನ ಮುಂದಿರುವ ಬಹುದೊಡ್ಡ ಕನಸು. ಅದನ್ನು ನನಸಾಗಿಸುತ್ತೇನೆ ಎನ್ನುವ ಭರವಸೆ ಮೂಡಿದೆ’ ಎಂದರು ಸುನೀಲ್.
ಅಂದ ಹಾಗೆ, ಗ್ರಾಂಡ್ ಫಿನಾಲೆಯ ಆ ದಿನ ವೇದಿಕೆಯಲ್ಲಿ ತೀರ್ಪುಗಾರರಾದ ವಿಜಯ್ ಪ್ರಕಾಶ್, ಅರ್ಜುನ್ ಜನ್ಯಾ ಹಾಗೂ ರಾಜೇಶ್ ಕೃಷ್ಣನ್ ಜತೆಗೆ ನಾದ ಬ್ರಹ್ಮ ಹಂಸಲೇಖ ವಿಶೇಷ ತೀರ್ಪುಗಾರರಾಗಿ ಆಗಮಿಸಿದ್ದರು. ಮೊಟ್ಟ ಮೊದಲ ಬಾರಿಗೆ ‘ಸರೆಗಮಪ’ ಫಿನಾಲೆ ಕಾರ್ಯಕ್ರಮ ನೇರ ಪ್ರಸಾರವಾಯಿತು. ಜತೆಗೆ ಕೊನೆ ಕ್ಷಣದವರೆಗೂ ಜನರು ವೋಟಿಂಗ್ ಮಾಡುವ ಅವಕಾಶ ನೀಡಲಾಗಿತ್ತು.ಶೋನಲ್ಲಿ ಭಾಗವಹಿಸದ ಕ್ಷಣ ಮತ್ತು ಆ ನಂತರದ ಜರ್ನಿಯ ಕುರಿತಾಗಿಯೂ ಸುನೀಲ್ ಅಭಿನಂದನೆ ಹೇಳಿದರು.

ಆಕಸ್ಮಿಕವಾಗಿ ಇಲ್ಲಿಗೆ ಬಂದೆ ಎಂದ ಗಾಯಕ

‘ನಾನಿಲ್ಲಿಗೆ ಬಂದಿದ್ದೇ ತೀರಾ ಆಕಸ್ಮಿಕ. ಇಂಥದೊಂದು ವೇದಿಕೆ ನನಗೆ ಸಿಗುತ್ತೆ ಅನ್ನೋದನ್ನು ಕನಸಲ್ಲೂ ಕಂಡಿರಲಿಲ್ಲ. ಶಿವಮೊಗ್ಗದಲ್ಲಿ ನಡೆದ ಆಡಿಷನ್‌ಗೆ ಬಂದು ಹೋದಾಗ ಆಯ್ಕೆಯ ಬಗ್ಗೆ ಅನುಮಾನದಲ್ಲಿಯೇ ಇದ್ದೆ. ಅದೃಷ್ಟ ಎನ್ನುವ ಹಾಗೆ ಆಯ್ಕೆ ಆದೆ. ಅಲ್ಲಿಂದ ಜನ ಬೆಂಬಲ ಸಿಕ್ಕಿತು. ತಾಯಿ ಆಶೀರ್ವಾದ ದೊರೆಯಿತು. ಕೊನೆ ತನಕ ಬಂದು ಗೆಲುವಿನ ಸಂತಸ ಕಾಣುವಂತಾಯಿತು. ಇದಕ್ಕೆಲ್ಲ ಸಮಸ್ತ ವೀಕ್ಷಕರ ಆಶೀರ್ವಾದವೇ ಕಾರಣ’ ಎನ್ನುತ್ತಾರೆ ಸುನೀಲ್.

-ನಾನು ಬಾಲ್ಯದಿಂದ ಗಾಯನ ಕಲಿತಿಲ್ಲ. ಆದ್ರೆ ನನ್ನ ಅಪ್ಪನಿಗೆ ಅದ್ಯಾಕೆ ನಾನು ಗಾಯಕ ಆಗ್ಬೇಕು ಅನ್ನೋ ಆಸೆ ಬಂದಿತ್ತೋ ಗೊತ್ತಿಲ್ಲ. ಅವತ್ತು ಅವ್ರ ಕಂಡಿದ್ದ ಕನಸು ನನಸಾಗಿಸಬೇಕೆನ್ನುವ ನನ್ನೊಳಗಿನ ತುಡಿತ, ಹಂಬಲ, ಹುಚ್ಚು ಇವತ್ತು ನಿಮ್ಮ ಮುಂದೆ ನನ್ನನ್ನು ಗಾಯಕ ಅಂತ ಪರಿಚಯಿಸಿದೆ. ನನ್ನಪ್ಪ ಕಂಡ ಕನಸು ಒಂದು ಹಂತಕ್ಕೆ ನನಸಾಗಿದೆ. ಇವತ್ತು ನಿಮ್ಮ ಮುಂದೆ ಗಾಯಕನಾಗಿ ಒಂದಷ್ಟು ಸಾ‘ನೆ ಮಾಡುವುದು ಬಾಕಿಯಿದೆ.

-ನಾನೇನು ಹೆಚ್ಚು ಓದಿಲ್ಲ. ಪಿಯುಸಿಗೆ ಹೋಗುತ್ತಿದ್ದೆ. ಅದನ್ನು ಬಿಟ್ಟು ಗದಗಕ್ಕೆ ಓಡಿ ಬಂದೆ. ಇವತ್ತೂ ಅಲ್ಲಿಯೇ ಇದ್ದೇನೆ. ಅಲ್ಲಿಯೇ ನನ್ನ ಓದು, ತರಬೇತಿ ಮುಂದುವರೆಯಲಿದೆ. ಶಾಸ್ತ್ರ ಬದ್ಧ ಸಂಗೀತ ಕಲೀಬೇಕಿದೆ. ಒಂದೆರೆಡು ರಾಗ ಬಿಟ್ಟರೆ ನನಗೇನು ಗೊತ್ತಿಲ್ಲ. ಸಂಗೀತ ಕ್ಷೇತ್ರದಲ್ಲಿ ನಾನೇನು ಅಲ್ಲ. ಸಾಕಷ್ಟು ಕಲಿಯಬೇಕಿದೆ.

-ಹಾಗೆ ನೋಡಿದ್ರೆ ನಾನು ಇಲ್ಲಿಗೆ ನಿಲ್ಲೋದಕ್ಕೆ ಕಲಿಕೆಯ ಹಸಿವಿನ ಜತೆಗೆ ನಿಜ ಹಸಿವು ಕೂಡ ಕಾರಣ. ಆ ಹಸಿವು ಹೋಗಲಾಡಿಸಲು ಒಳ್ಳೆಯ ಕೆಲಸ ಮಾಡಬೇಕೆಂದುಕೊಂಡಿದ್ದೇನೆ. ನನ್ನ ಹಾಗೆಯೇ ಇರುವ ಅದೆಷ್ಟೋ ಜನರಿಗೆ ಕೈಲಾದ ಸೇವೆ ಮಾಡಬೇಕೆಂದು ಕರುಳು ಮಿಡಿಯುತ್ತಿದೆ. ಅದಕ್ಕೆ ಒಂದಷ್ಟು ಶಕ್ತಿ ಬೇಕಿದೆ. ಆ ಶಕ್ತಿ ನನ್ನ ಸಾ‘ನೆಯ ಜತೆಗೆ ಬರಬೇಕಿದೆ. ಅದರತ್ತ ನನ್ನ ಗಮನವಿದೆ.

-ದೇಶಾದ್ರಿ ಹೊಸ್ಮನೆ, ಕನ್ನಡಪ್ರಭ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಸಮಾನ್ಯಳಲ್ಲಿ ಅಸಮಾನ್ಯ ಈ ಪುಟಾಣಿ: Naa Ninna Bidalaare ಹಿತಾ ನಿಬ್ಬೆರಗಾಗುವ ಫೋಟೋಶೂಟ್​!
Bigg Boss ಅಭಿಷೇಕ್​ಗೆ ದೊಡ್ಮನೆಯಿಂದ ಸಿಕ್ಕಿರೋ ಸಂಭಾವನೆ ಎಷ್ಟು? ಫ್ಯಾನ್ಸ್​ ನಿರೀಕ್ಷೆ ಸುಳ್ಳಾಗೋಯ್ತು!