ಅಂಬರೀಷ್‌ ಮಾಡಿಸಿದ ತೊಟ್ಟಿಲು ಯಶ್‌ ಮನೆಗೆ

Published : Feb 15, 2019, 09:01 AM IST
ಅಂಬರೀಷ್‌ ಮಾಡಿಸಿದ ತೊಟ್ಟಿಲು ಯಶ್‌ ಮನೆಗೆ

ಸಾರಾಂಶ

ರೆಬೆಲ್‌ ಸ್ಟಾರ್‌ ಚಿತ್ರನಟ ಅಂಬರೀಷ್‌ ಪ್ರೀತಿಯಿಂದ  ಯಶ್ ಹಾಗೂ ರಾಧಿಕಾ ದಂಪತಿ ಮಗುವಿಗೆ ಮಾಡಿಸಿರುವ ತೊಟ್ಟಿಲು ಎರಡ್ಮೂರು ದಿನದಲ್ಲಿ ಯಶ್‌ ಮನೆ ಸೇರಲಿದೆ.

ಚನ್ನಮ್ಮನ ಕಿತ್ತೂರು: ನಟ ಯಶ್‌ ಹಾಗೂ ರಾಧಿಕಾ ದಂಪತಿಯ ಮಗುವಿಗೆ ರೆಬೆಲ್‌ ಸ್ಟಾರ್‌, ಚಿತ್ರನಟ ಅಂಬರೀಷ್‌ ಪ್ರೀತಿಯಿಂದ ಮಾಡಿಸಿರುವ ತೊಟ್ಟಿಲು ಎರಡ್ಮೂರು ದಿನದಲ್ಲಿ ಯಶ್‌ ಮನೆ ಸೇರಲಿದೆ.

ಈ ಬಗ್ಗೆ ಮಾಹಿತಿ ನೀಡಿದ ಉದ್ಯಮಿ ಮತ್ತು ನಟ ಅಂಬರೀಷ್‌ ಆಪ್ತರಾಗಿರುವ ನಾರಾಯಣ ಕಲಾಲ, ಈ ತೊಟ್ಟಿಲಿಗೆ ಚೆನ್ನಮ್ಮನ ಕಿತ್ತೂರಿನಲ್ಲಿ ಫೆ.16ರಂದು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಹಾಗೂ ವಿವಿಧ ಮಠಾಧೀಶರ ಆಶೀರ್ವಾದದೊಂದಿಗೆ ವಿಶೇಷ ಪೂಜೆ ನೆರವೇರಿಸಲಾಗುವುದು. ಹಾಗೇ ಅಂದು ಸಂಜೆ ನಾಲ್ಕು ಗಂಟೆಗೆ ಬೆಂಗಳೂರಿಗೆ ಈ ತೊಟ್ಟಿಲನ್ನು ತೆಗೆದುಕೊಂಡು ಹೋಗಲಾಗುತ್ತದೆ ಎಂದು ತಿಳಿಸಿದ್ದಾರೆ.

1.25 ಲಕ್ಷ ವೆಚ್ಚದ ಭರ್ಜರಿ ಕಾಣಿಕೆ ಇದಾಗಿದ್ದು, ರಾಜಕೀಯ ಹಾಗೂ ಚಿತ್ರರಂಗದಲ್ಲಿ ರೆಬೆಲ್‌ ಎಂದೇ ಖ್ಯಾತಿ ಪಡೆದಿದ್ದ ಅಂಬರೀಷ್‌ ಅವರು ರಾಧಿಕಾ ಪಂಡಿತ್‌ ಅವರು ಗರ್ಭಿಣಿ ಇರುವಾಗಲೇ ಅವರ ಮಗುವಿಗೊಂದು ತೊಟ್ಟಿಲನ್ನು ನಿರ್ಮಿಸುವಂತೆ ಆಪ್ತರಾದ ಉದ್ಯಮಿ ನಾರಾಯಣ ಕಲಾಲಗೆ ತಿಳಿಸಿದ್ದರು. ಅದರಂತೆ ಧಾರವಾಡ ಜಿಲ್ಲೆಯ ಕಲಘಟಗಿಯ ಶ್ರೀಧರ ಸಾವುಕಾರ ಅವರಲ್ಲಿ ತೊಟ್ಟಿಲು ಮಾಡಿಸಲಾಗಿತ್ತು. ರಾಮಾಯಣ, ಮಹಾಭಾರತದ ಕೃಷ್ಣಾವತಾರ, ದಶಾವತಾರ, ಕಥೆಗಳನ್ನು ಸಾರುವ ಚಿತ್ರಗಳು ಈ ತೊಟ್ಟಿಲ ಮೇಲೆ ನಿರ್ಮಾಣಗೊಳಿಸಲಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸ್ಮೃತಿ ಮಂಧನಾ ಪತಿ ಆಗಬೇಕಿದ್ದ ಪಲಾಶ್‌ ಮುಚ್ಚಾಲ್‌ ಮೇಲೆ ಮತ್ತೊಂದು ಸೆನ್ಸೇಷನಲ್‌ ಆರೋಪ, ಎಫ್‌ಐಆರ್‌ ದಾಖಲು!
ಪಹಲ್ಗಾಮ್‌ನಲ್ಲಿ ಶೂಟಿಂಗ್.. ಗಣೇಶ್-ರಮೇಶ್ ಅರವಿಂದ್ ಹೇಳೋದೇನು? ಸುರಕ್ಷತೆ ಇದೆಯಾ ಅಲ್ಲಿ?