’ಅಮೃತವರ್ಷಿಣಿ’ ನಿರ್ಮಾಪಕಿ ಜಯಶ್ರೀ ದೇವಿ ಇನ್ನಿಲ್ಲ

Published : Feb 13, 2019, 02:09 PM ISTUpdated : Feb 13, 2019, 02:14 PM IST
’ಅಮೃತವರ್ಷಿಣಿ’ ನಿರ್ಮಾಪಕಿ ಜಯಶ್ರೀ ದೇವಿ ಇನ್ನಿಲ್ಲ

ಸಾರಾಂಶ

ಖ್ಯಾತ ಕನ್ನಡ ನಿರ್ಮಾಪಕಿ ಜಯಶ್ರೀ ದೇವಿ ನಿಧನ | ನಮ್ಮೂರ ಮಂದಾರ ಹೂವೆ, ಹಬ್ಬ, ಶ್ರೀ ಮಂಜುನಾಥ, ಅಮೃತವರ್ಷಿಣಿ, ಸ್ನೇಹಲೋಕ, ಪ್ರೇಮರಾಗ ಸೇರಿದಂತೆ ಸಾಕಷ್ಟು ಒಳ್ಳೆಯ ಸಿನಿಮಾಗಳನ್ನು ನಿರ್ಮಾಣ ಮಾಡಿದವರು.

ಬೆಂಗಳೂರು (ಫೆ. 13): ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕಿ ಜಯಶ್ರೀ ದೇವಿ ಇಂದು ಬೆಳಿಗ್ಗೆ ಹೃದಯಾಘಾತದಿಮದ ನಿಧನರಾಗಿದ್ದಾರೆ.  ಜಯಶ್ರೀ ದೇವಿಯವರಿಗೆ 60 ವರ್ಷ ವಯಸ್ಸಾಗಿತ್ತು. ಇಂದು ಬೆಳಿಗ್ಗೆ ಹೈದಾರಾಬಾದ್ ನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 

ಮೂಲತಃ ಪತ್ರಕರ್ತೆಯಾಗಿದ್ದ ಜಯಶ್ರೀ ದೇವಿ ಕೋಣ ಈದೈತೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟವರು. ನಮ್ಮೂರ ಮಂದಾರ ಹೂವೆ, ಹಬ್ಬ, ಶ್ರೀ ಮಂಜುನಾಥ, ಅಮೃತವರ್ಷಿಣಿ, ಸ್ನೇಹಲೋಕ, ಪ್ರೇಮರಾಗ ಸೇರಿದಂತೆ ಸಾಕಷ್ಟು ಒಳ್ಳೆಯ ಸಿನಿಮಾಗಳನ್ನು ನಿರ್ಮಾಣ ಮಾಡಿದವರು. 

ಇತ್ತೀಚಿಗೆ ತೆರೆ ಕಂಡ ಸುದೀಪ್-ಉಪೇಂದ್ರ ಅಭಿನಯದ ಮುಕುಂದ ಮುರಾರಿ ಚಿತ್ರದ ಕಾರ್ಯಕಾರಿ ನಿರ್ಮಾಪಕಿಯಾಗಿದ್ದರು. ಯಲಹಂಕದಲ್ಲಿರುವ ಜಯಶ್ರಿಯವರ ನಿವಾಸದಲ್ಲಿ ನಾಳೆ ಬೆಳಿಗ್ಗೆ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಜಯಶ್ರೀಯವರ ಪುತ್ರ ವಾಸು ಹೇಳಿದ್ದಾರೆ.

ಜಯಶ್ರೀಯವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.  ಖ್ಯಾತ ಪತ್ರಕರ್ತ ಜೋಗಿಯವರು ಸಂತಾಪ ಸೂಚಿಸಿದ್ದು ಹೀಗೆ. 


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌
ಇದು ನಿಜ.. 50 ಕೋಟಿ ಸಂಭಾವನೆಗೆ ಅರ್ಹ RGV ನಯಾಪೈಸೆ ಪಡೆಯದೇ ಹೀರೋ ಆಗ್ತಿದಾರೆ!