ಲೂಸ್ ಮಾದ ಯೋಗಿ ಮಗಳ ನಾಮಕರಣದಲ್ಲಿ ದರ್ಶನ್ ಭಾಗಿ | ಮಗಳಿಗೆ ‘ಶ್ರೀನಿಕಾ’ ಎಂದು ಹೆಸರಿಟ್ಟಿದ್ದಾರೆ | ಶ್ರೀನಿಕಾ ಯೋಗೇಶ್" ಈಗಾಗಲೇ ಇನ್ಸ್ಟಾಗ್ರಾಮ್ ಸೆಲಬ್ರಿಟಿಯಾಗಿದ್ದಾಳೆ
ಸ್ಯಾಂಡಲ್ ವುಡ್ ಲೂಸ್ ಮಾದ ಯೋಗಿ ಲಿಟಲ್ ಪ್ರಿನ್ಸಸ್ ನಾಮಕರಣ ಶಾಸ್ತ್ರವನ್ನು ಸರಳವಾಗಿ ಆಚರಿಸಿದ್ದಾರೆ. ಕುಟುಂಬದವರು, ಸ್ನೇಹಿತರು ಭಾಗವಹಿಸಿ ಶುಭ ಹಾರೈಸಿದರು. ಈ ಸಮಾರಂಭಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಮಿಸಿ ಶುಭ ಕೋರಿದ್ದು ಗಮನ ಸೆಳೆದಿದೆ. ದರ್ಶನ್ ಹಾಗೂ ಲೂಸ್ ಮಾದ ಯೋಗಿ ಆಪ್ತ ಸ್ನೇಹಿತರು.
ಲೂಸ್ ಮಾದ ಯೋಗಿಯ ಲಿಟಲ್ ಪ್ರಿನ್ಸಸ್ ‘ಶ್ರೀನಿಕಾ’ ಫೋಟೋಗಳಿವು!
ಯೋಗಿ ಮಗಳಿಗೆ ’ಶ್ರೀನಿಕಾ’ ಎಂದು ನಾಮಕರಣ ಮಾಡಿದ್ದಾರೆ. ಶ್ರೀನಿಕಾ ಈಗಾಗಲೇ ಇನ್ಸ್ಟಾಗ್ರಾಮ್ ಖಾತೆಯನ್ನು ಹೊಂದಿದ್ದು ಸಿಕ್ಕಾಪಟ್ಟೆ ಅಭಿಮಾನಿಗಳನ್ನು ಹೊಂದಿದ್ದಾಳೆ.
ಯೋಗಿ ತಮ್ಮ ಬಾಲ್ಯ ಸ್ನೇಹಿತೆ ಸಾಹಿತ್ಯ ಅವರನ್ನು 2017, ನವೆಂಬರ್ 2 ರಂದು ಮದುವೆಯಾಗಿದ್ದರು. ಸಾಹಿತ್ಯ ಐಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ.
‘ಪರಿಮಳ ಲಾಡ್ಜ್’ ಸಲಿಂಗಕಾಮಿಗಳೊಂದಿಗೆ ಕೈ ಜೋಡಿಸಿದ ದರ್ಶನ್!
ಯೋಗಿ ಸದ್ಯ ಪರಿಮಳ ಲಾಡ್ಜ್, ಒಂಬತ್ತನೇ ದಿಕ್ಕು, ಲಂಕೆ, ಕಂಸ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.