
ಸ್ಟಾರ್ ನಟರೇ ಇವರ ಗುರಿನಾ ಅಥವಾ ಸ್ಟಾರ್ ನಟರಿಗೆ ಮಾತ್ರ ಇವರು ಆ್ಯಕ್ಷನ್ ಕಟ್ ಹೇಳೋದಾ ಎನ್ನುವಷ್ಟರ ಮಟ್ಟಿಗೆ ನಿರ್ದೇಶಕ ಕೃಷ್ಣ ಫೇಮಸ್.
'ಗಜ ಕೇಸರಿ', 'ಹೆಬ್ಬುಲಿ' ಹಾಗೂ 'ಪೈಲ್ವಾನ್' ನಿರ್ದೇಶಕ ಕೃಷ್ಣ ತನ್ನ ನಾಲ್ಕನೇ ಚಿತ್ರಕ್ಕೆ ನಿಖಿಲ್ ಕುಮಾರಸ್ವಾಮಿಯನ್ನು ಹಾಕಿಕೊಂಡು ಸಿನಿಮಾ ಮಾಡುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. 'ಜಾಗ್ವಾರ್’ ಹಾಗೂ 'ಸೀತಾರಾಮ ಕಲ್ಯಾಣ' ಚಿತ್ರದ ಹಿಟ್ ನಂತರ ರಾಜಕೀಯ ಕೆಲಸದಲ್ಲಿ ತೊಡಗಿಸಿಕೊಂಡ ನಿಖಿಲ್ ಈಗ ಮತ್ತೊಮ್ಮೆ ಸಿನಿಮಾದಲ್ಲಿ ಕಾಣಿಸಿಕೊಳ್ಳಲು ಸಿದ್ಧರಾಗುತ್ತಿದ್ದಾರೆ.
ಸುದೀಪ್ ಖಾತೆಗೆ ಬಂತು ಪಾಸವರ್ಡ್ ರಿಸೆಟ್ ಸಂದೇಶ.. ಕಿಚ್ಚನ ಖಾತೆಗೆ ಕನ್ನ?
ರಾಕಿಂಗ್ ಸ್ಟಾರ್ ಯಶ್, ಕಿಚ್ಚ ಸುದೀಪ್, ಸುನಿಲ್ ಶೆಟ್ಟಿ ಅಂತಹ ಖ್ಯಾತ ನಟರಿಗೆ ಆ್ಯಕ್ಷನ್ ಕಟ್ ಹೇಳಿದ ಕೃಷ್ಣ ನಿಖಿಲ್ ಅವರನ್ನು ವಿಭಿನ್ನವಾಗಿ ಅಭಿಮಾನಿಗಳ ಮುಂದಿಡಲು ರೆಡಿಯಾಗುತ್ತಿದ್ದಾರೆ.
ಕಿಚ್ಚ ಸುದೀಪ್ ಮಾಡಿರೋ ದೋಸೆ ತಿನ್ನೋಣ ಬನ್ನಿ!
'2.0' ಚಿತ್ರಕ್ಕೆ ಬಂಡವಾಳ ಹಾಕಿದ Lyca ಪ್ರೊಡಕ್ಷನ್ ಜೊತೆ ಕೃಷ್ಣ ಕೈ ಜೋಡಿಸುತ್ತಾರೆಂಬ ಮಾತುಗಳು ಕೂಡ ಕೇಳಿ ಬರುತ್ತಿದೆ. ಅದರೆ ಸದ್ಯಕ್ಕೆ Lyca 'ಇಂಡಿಯಾನ್-2' ಚಿತ್ರಕ್ಕೆ ನಿರ್ಮಾಣ ಮಾಡುತ್ತಿದೆ. 2020 ರಲ್ಲಿ ಚಿತ್ರ ಸೆಟ್ಟೇರಲಿದೆ ಎಂದು ತಿಳಿದು ಬಂದಿದೆ.
ಇನ್ನು 5 ಭಾಷೆಗಳಲ್ಲಿ ತೆರೆ ಕಂಡ ಪೈಲ್ವಾನ್ ಚಿತ್ರವು ಪೈರಸಿ ನಡುವೆಯೂ 100 ಕೋಟಿ ಕ್ಲಬ್ ಮುಟ್ಟಿದೆ. ಪೈಲ್ವಾನ್ ಚಿತ್ರಕ್ಕೆ ಕೃಷ್ಣ ಆ್ಯಕ್ಷನ್ ಕಟ್ ಹೇಳಿದ್ರೆ ಪತ್ನಿ ಸ್ವಪ್ನ ನಿರ್ಮಾಣ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.