ಬಂಬಲ್ ಬ್ರಾಂಡ್ ಅಂಬಾಸಿಡರ್ ಆಗಿದ್ದಾಕೆಗೆ ಅದೇ ಡೇಟಿಂಗ್ ಆಪ್ ಬಳಸಿ ಮೋಸ ಮಾಡಿದ ಪ್ರಿಯಕರ

Published : Oct 01, 2025, 06:16 PM IST
Anusha Dandekar

ಸಾರಾಂಶ

Anusha Dandekar dating app story: ಗಾಯಕಿ ಹಾಗೂ ನಟಿ ಅನುಷಾ ದಂಡೇಕರ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಮ್ಮ ಪ್ರೇಮ ವೈಫಲ್ಯದ ಬಗ್ಗೆ ಮಾತನಾಡಿದ್ದಾರೆ. ತಾವು ಪ್ರಚಾರ ಮಾಡುತ್ತಿದ್ದ ಡೇಟಿಂಗ್ ಆಪ್ ಅನ್ನೇ ಬಳಸಿ ತಮ್ಮ ಮಾಜಿ ಗೆಳೆಯ ತಮಗೆ ಹೇಗೆ ಮೋಸ ಮಾಡಿದರು ಎಂಬುದನ್ನು ಅವರು ವಿವರಿಸಿದ್ದಾರೆ.

ಮಾಜಿ ಗೆಳೆಯ ಕರಣ್ ಕುಂದ್ರಾಗೆ ಟಾಂಗ್ ನೀಡಿದ ಅನುಷಾ ದಂಡೇಕರ್

ಗಾಯಕಿ ಹಾಗೂ ನಟಿ ಅನುಷಾ ದಂಡೇಕರ್ ಮತ್ತೊಮ್ಮೆ ತಮ್ಮ ಪ್ರೇಮ ವೈಫಲ್ಯದ ಬಗ್ಗೆ ಮಾತನಾಡಿದ್ದು, ತಮ್ಮ ಮಾಜಿ ಗೆಳೆಯ ಕರಣ್ ಕುಂದ್ರಾಗೆ ಟಾಂಗ್ ನೀಡಿದ್ದಾರೆ. ವೀಡಿಯೋ ಜಾಕಿಯೂ ಆಗಿರುವ ನಟಿ ತಮ್ಮ ಇತ್ತೀಚಿನ ವ್ಲಾಗ್‌ನಲ್ಲಿ ಗೆಳೆಯನಿಂದ ತಮಗಾದ ಮೋಸದ ಬಗ್ಗೆ ಮಾತನಾಡಿದ್ದಾರೆ. ತಮ್ಮ ಪ್ರೇಮ ವೈಫಲ್ಯದ ಬಗ್ಗೆ ಅನುಷಾ ದಂಡೇಕರ್ ಮಾತನಾಡ್ತಿರುವುದುಇದೇ ಮೊದಲಲ್ಲ.

ತಮ್ಮ ಯೂಟ್ಯೂಬ್ ಚಾನೆಲ್ ಅನ್‌ವೆರಿಫೈಡ್ದ್‌ ದಿ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಅನುಷಾ ದಂಡೇಕರ್, ಡೇಟಿಂಗ್ ಆಪ್‌ನಲ್ಲಿ ನಂಬಲು ಸಾಧ್ಯವಾಗದಂತಹ ಕೆಲವು ಅನುಭಗಳು ಆದವು. ನಾನು ಡೇಟಿಂಗ್ ಆಪ್‌ಗಳ ಪ್ರಚಾರಕ್ಕೆ ಸಹಿ ಹಾಕಿದೆ. ಅದೇ ಸಮಯದಲ್ಲಿ ನನ್ನ ಜೊತೆಗಿದ್ದ ಬಾಯ್ಫ್ರೆಂಡ್‌ಗೂ ಡೀಲ್ ಸಿಗುವಂತೆ ಮಾಡಿದೆ.

ಬ್ರಾಂಡ್ ಅಂಬಾಸಿಡರ್ ಆದ ಡೇಟಿಂಗ್ ಆಪನ್ನೇ ಬಳಸಿ ಪ್ರೇಯಸಿಗೆ ಮೋಸ

ನಾನು ಡೇಟಿಂಗ್ ಆ್ಯಪ್‌ಗಾಗಿ ಪ್ರಚಾರ ಮಾಡಲು ಸಹಿ ಹಾಕಿದ್ದೆ, ಮತ್ತು ಆ ಸಮಯದಲ್ಲಿ ನನ್ನ ಬಾಯ್‌ಫ್ರೆಂಡ್ ಕೂಡ ನನ್ನೊಂದಿಗೆ ಪ್ರಚಾರ ಮಾಡಲು ನಾನು ಒಪ್ಪಂದವನ್ನು ಪಡೆದುಕೊಂಡೆ. ಈ ಅಭಿಯಾನಕ್ಕಾಗಿ ಅವನು ಜೀವನದಲ್ಲಿ ಇದುವರೆಗೆ ಪಡೆದಿರದಂತಹ ಅತಿ ಹೆಚ್ಚು ಸಂಭಾವನೆ ಇದು. ಆದರೆ ಅವನು ಹುಡುಗಿಯರೊಂದಿಗೆ ಮಾತನಾಡಲು ಮತ್ತು ಭೇಟಿಯಾಗಲು ಈ ಡೇಟಿಂಗ್ ಅಪ್ಲಿಕೇಶನ್ ಅನ್ನು ಬಳಸಿದ. ಮತ್ತೊಂದೆಡೆ ನಾವು ಒಟ್ಟಾಗಿ ಡೇಟಿಂಗ್ ಆಪ್ ಪ್ರಚಾರ ಮಾಡುತ್ತಿದ್ದೆವು ಎಂದು ಅನುಷಾ ದಂಡೇಕರ್ ಹೇಳಿದ್ದಾರೆ.

ಆತ ಊರಲ್ಲಿದ್ದವರ ಜೊತೆಗೆಲ್ಲಾ ಮಲಗ್ತಿದ್ದಾನೆ ಅಂತ ಲೇಟಾಗಿ ಗೊತ್ತಾಯ್ತು ಎಂದ ನಟಿ

ನಾವು ಒಟ್ಟಿಗೆ ಇರಬೇಕು ಜೊತೆಗೆ ಸಾಗಬೇಕು ಎಂದು ಬಯಸಿದ್ದರೆ, ಆತ ಹುಡುಗಿಯರೊಂದಿಗೆ ಮಾತನಾಡಲು ಮತ್ತು ಹುಡುಗಿಯರನ್ನು ಭೇಟಿ ಮಾಡಲು ಆ ಡೇಟಿಂಗ್ ಆಪ್‌ನ್ನು ಬಳಸುತ್ತಿದ್ದಾನೆ. ಆತ ಇಡೀ ಮುಂಬೈನವರೊಂದಿಗೆ ಮಲಗುತ್ತಿದ್ದಾನೆಂದು ನನಗೆ ಬಹಳ ಸಮಯದ ನಂತರ ಗೊತ್ತಾಯ್ತು. ಅನುಷಾ ದಂಡೇಕರ್ ಅವರು ಡೇಟಿಂಗ್ ಆಪ್ ಬಂಬಲ್‌ನ ಬ್ರಾಂಡ್ ಅಂಬಾಸೀಡರ್ ಆಗಿದ್ದರು. ಆ ಸಮಯದಲ್ಲಿ ಕರಣ್ ಕುಂದ್ರಾ ಜೊತೆ ಅನುಷಾ ಡೇಟಿಂಗ್ ಮಾಡ್ತಿದ್ರು. ಹೀಗಾಗಿ ಅನುಷಾ ದಂಡೇಕರ್ ಕರಣ್ ಕುಂದ್ರಾ ಬಗ್ಗೆ ಮಾತನಾಡಿರಬಹುದು ಎಂದು ಜನ ಊಹಿಸುತ್ತಿದ್ದಾರೆ.

ಇತ್ತ ಕರಣ್ ಅವರ ಬಂಬಲ್ ಪ್ರೊಫೈಲ್ ಆಗಾಗ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಲೇ ಇರುತ್ತದೆ. ಕರಣ್ ಕುಂದ್ರಾ ಹಾಗೂ ಅನುಷಾ ದಂಡೇಕರ್‌ ಮೂರುವರೆ ವರ್ಷಗಳ ಕಾಲ ಒಟ್ಟಿಗೆ ಇದ್ದು, 2020 ರಲ್ಲಿ ಬೇರ್ಪಟ್ಟಿದ್ದರು. 2016 ರಿಂದ 2019 ರವರೆಗೆ, ಅವರು ಎಂಟಿವಿ ಲವ್ ಸ್ಕೂಲ್ ಎಂಬ ರಿಯಾಲಿಟಿ ಶೋವನ್ನು ಕೂಡ ಅವರು ಹೋಸ್ಟ್ ಮಾಡಿದ್ದರು. ಭಾಗವಹಿಸಿದ ಜೋಡಿಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ಅವರು ಸಹಾಯ ಮಾಡಿದ್ದರು.

2021 ರಲ್ಲಿ, ಇನ್ಸ್ಟಾಗ್ರಾಮ್‌ನಲ್ಲಿ Ask Me Anything ಸೆಷನ್ ಸಮಯದಲ್ಲಿ ಅನುಷಾ ಅವರ ಬ್ರೇಕ್ ಅಪ್ ಗೆ ನೇರ ಕಾರಣ ನೀಡಲು ಕೇಳಲಾಯಿತು. ದಯವಿಟ್ಟು, ನಿಮ್ಮ ಬ್ರೇಕ್ ಅಪ್ ಗೆ ನೇರ ಕಾರಣವನ್ನು ನೀವು ಹೇಳಬಲ್ಲಿರಾ?! ಎಂದು ಅಭಿಮಾನಿಯೊಬ್ಬರು ಅನುಷಾ ಅವರನ್ನು ಕೇಳಿದರು, ಅದಕ್ಕೆ ಅವರು ನಾವು ಹೆಚ್ಚು ಪ್ರಾಮಾಣಿಕತೆ, ಪ್ರೀತಿ ಮತ್ತು ಸಂತೋಷಕ್ಕೆ ಅರ್ಹರು... ಮತ್ತು ಅದು ನಿಮ್ಮನ್ನು ನೀವು ಪ್ರೀತಿಸುವುದರಿಂದ ಪ್ರಾರಂಭವಾಗುತ್ತದೆ. ಹಾಗಾಗಿ, ನಾನು ನನ್ನನ್ನು ಆರಿಸಿಕೊಂಡೆ. ಅಷ್ಟೇ ಎಂದಿದ್ದರು.

ಇತ್ತ ಕರಣ್ ಕುಂದ್ರಾ, ಪ್ರಮುಖ ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಬ್ರೇಕ್ ಅಪ್ ಬಗ್ಗೆ ಪ್ರಶ್ನೆ ಕೇಳುವುದನ್ನು ತಪ್ಪಿಸಿದರು ಸಂಬಂಧದ ಮೇಲಿನ ಗೌರವದಿಂದ ಕಾಮೆಂಟ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಅನುಷಾ ದಂಡೇಕರ್ ಜೊತೆಗಿನ ಬ್ರೇಕಪ್ ನಂತರ ನಟ ಕರಣ್ ಈಗ ನಟ ತೇಜಸ್ವಿ ಪ್ರಕಾಶ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಮನೆಕೆಲಸದಾಕೆಗೆ ಕಿರುಕುಳ: ನಟಿ ಡಿಂಪಲ್ ಹಯಾತಿ, ಪತಿ ವಿರುದ್ಧ ಕೇಸ್

ಇದನ್ನೂ ಓದಿ: ಇವ್ರು ಮೇಷ್ಟ್ರು ಹೆಂಗಾದ್ರೋ: ಬಿಸಿಯೂಟದವರಿಗೆ ನೀಡಿದ್ದ ಚೆಕ್‌ನಲ್ಲಿ ಹಲವು ಮಿಸ್ಟೆಕ್: ಬ್ಯಾಂಕ್‌ನಿಂದ ಚೆಕ್ ರಿಜೆಕ್ಟ್

ಇದನ್ನೂ ಓದಿ: ಇನ್ಸ್ಟಾಗ್ರಾಮ್ ಪೋಸ್ಟ್ ವಿಚಾರಕ್ಕೆ 20ರ ಹರೆಯದ ಭಜರಂಗದಳ ಕಾರ್ಯಕರ್ತನ ಗುಂಡಿಕ್ಕಿ ಹತ್ಯೆ

ಇದನ್ನೂ ಓದಿ: ಪೊಲೀಸರಲ್ಲ ಪಾಪಿಗಳು, ಹಣ್ಣು ಮಾರುತ್ತಿದ್ದ 25ರ ಯುವತಿ ಮೇಲೆ ಅತ್ಯಾಚಾರವೆಸಗಿದ ಇಬ್ಬರು ಪೊಲೀಸರು

ಇದನ್ನೂ ಓದಿ: 35ರ ಯುವತಿ ಮದ್ವೆಯಾಗಿ ಮರುದಿನವೇ 75ರ ವೃದ್ಧ ಸಾವು: ಸಾವಿನ ಬಗ್ಗೆ ಕುಟುಂಬಸ್ಥರ ಅನುಮಾನ

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

World Idli Day: ಇಡ್ಲಿ ದಿನದಂದೇ ದೋಸೆ ತಿಂದ ಕಥೆ ನಿಮಗೆ ಗೊತ್ತಾ? ದೀಪಿಕಾ ಪಡುಕೋಣೆ ಈ ಯಡವಟ್ಟು ಮಾಡಿದ್ಯಾಕೆ?
ಸೂರ್ಯನಿಗೆ ಬಹಳ ಹೊತ್ತು ಗ್ರಹಣ ಹಿಡಿಯಲ್ಲ.. ನಾನ್ ಬರ್ತಿದ್ದೀನಿ ಚಿನ್ನ: ದರ್ಶನ್‌ ಟ್ರೈಲರ್ ಡೈಲಾಗ್‌ಗೆ ಅಪಾರ್ಥ?